ಎನ್ಎಸ್ಎಸ್ ಶಿಬಿರದಲ್ಲಿ ನಿರ್ದೇಶಕ ಪಿ. ಶೇಷಾದ್ರಿ
ಕನ್ನಡಪ್ರಭ ವಾರ್ತೆ, ಗದಗ, ಅ. 14
ಇತ್ತೀಚಿನ ಬಹುತೇಕ ಚಲನಚಿತ್ರಗಳು ಜನತೆಯನ್ನು ವಾಸ್ತವದಿಂದ ದೂರ ಮಾಡಿ ಭ್ರಮಾಲೋಕ ಪ್ರವೇಶಿಸುವಂತೆ ಪ್ರೇರೇಪಿಸುತ್ತವೆ. ಚಲನಚಿತ್ರಗಳು ಯುವ ಜನತೆಯಲ್ಲಿ ಕನಸುಗಳನ್ನು ಬಿತ್ತಬೇಕೇ ವಿನಃ ಭ್ರಮೆಗಳನ್ನಲ್ಲ. ನಮ್ಮ ವಿದ್ಯಾರ್ಥಿಗಳಿಗೆ ಘನತೆವೆತ್ತ ಬದುಕು ಸಾಗಿಸಿದವರು ನಾಯಕರಾಗಬೇಕೇ ವಿನಃ ಸಿನಿಮಾ ನಾಯಕರು ಮಾದರಿಯಾಗಬಾರದು ಎಂದು ಚಲನಚಿತ್ರ ನಿರ್ದೇಶಕ ಪಿ. ಶೇಷಾದ್ರಿ ಹೇಳಿದರು.
ಸ್ಥಳೀಯ ಸರ್ಕಾರಿ ಪಪೂ ಕಾಲೇಜಿನಲ್ಲಿ ಇತ್ತೀಚಿಗೆ ಸಂಘಟಿಸಿದ್ದ ಎನ್ಎಸ್ಎಸ್ ಶಿಬಿರದಲ್ಲಿ ಚಲನಚಿತ್ರ ಗ್ರಹಿಕೆ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಚಲನಚಿತ್ರ ಅನಮ್ಮ ಅರಿವಿನ ಕ್ಷಿತಿಜವನ್ನು ವಿಸ್ತರಿಸುವ ಅತ್ಯುತ್ತಮ ಮಾಧ್ಯಮ. ಭಾರತೀಯ ಸಂಸ್ಕೃತಿಯ ಆಸ್ಮಿತೆಯನ್ನು ಚಿತ್ರಿಸಿದ, ಅದನ್ನು ವಿಶ್ವಮಟ್ಟಕ್ಕೆ ಬಿತ್ತರಿಸದ ಚಲನಚಿತ್ರಗಳು ಇದ್ದರೆಷ್ಟು, ಬಿಟ್ಟರೆಷ್ಟು ಎಂದರು. 1913ರಲ್ಲಿ ನಿರ್ಮಾಣಗೊಂಡ ಭಾರತದ ಪ್ರಥಮ ಚಲನಚಿತ್ರ ರಾಜಾ ಹರಿಶ್ಚಂದ್ರ ಹಾಗೂ ದಾದಾ ಸಾಹೇಬ ಫಾಲ್ಕೆಯವರ ಬಗ್ಗೆ ಹೇಳಿ, ಸಿನಿಮಾ ಹೇಗೆ ತನ್ನ ಸ್ವರೂಪ ಮತ್ತು ಸ್ವಭಾವವನ್ನು ಬದಲಾಯಿಸುತ್ತ ಬಂದಿತೆಂಬುದನ್ನು ವಿವರಿಸಿದರು. ಪ್ರತಿವರ್ಷ ಭಾರತದಲ್ಲಿ 2500 ಚಲನಚಿತ್ರಗಳು ನಿರ್ಮಾಣವಾಗುತ್ತಿದ್ದು, ದಿನವೊಂದಕ್ಕೆ 2.5 ಕೋಟಿ ಜನ ವೀಕ್ಷಿಸುವ ಚಲನಚಿತ್ರೋದ್ಯಮ ದೇಶದ ಜನತೆಗೆ ಯಾವ ಸಂದೇಶ ನೀಡುತ್ತಿದೆ ಎಂಬುದು ಬಹುದೊಡ್ಡ ಪ್ರಶ್ನೆಯಾಗಿಯೇ ಉಳಿದಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಕಾಲೇಜಿನ ಪ್ರಾಚಾರ್ಯ ಚಂದ್ರಶೇಖರ ವಸ್ತ್ರದ ಅಧ್ಯಕ್ಷತೆ ವಹಿಸಿದ್ದರು. ಬಿ.ವಿ. ಸಜ್ಜನರ ಸ್ವಾಗತಿಸಿದರು. ಪ್ರೊ. ಬಿ.ಜಿ. ಗಿರಿತಿಮ್ಮಣ್ಣವರ ನಿರೂಪಿಸಿದರು. ಜಿ.ವಿ. ಟೊಣಪಿಯವರ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

