ಗದಗ

ಭೋವಿ ಸಮಾಜಕ್ಕೆ ಸೌಲಭ್ಯ: ಶಾಸಕರ ಭರವಸೆ

Published On :

ನರೇಗಲ್ಲ: ಭೋವಿ ಜನಾಂಗ ಎಲ್ಲರ ಕಣ್ಮಣಿಗಳಾಗಿದ್ದಾರೆ. ಅವರ ಶ್ರಮಕ್ಕೆ ಅನುಗುಣವಾಗಿ ಗೌರವಿಸಬೇಕಾದದ್ದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ರೋಣ ಶಾಸಕ ಜಿ.ಎಸ್. ಪಾಟೀಲ ಹೇಳಿದರು.
ಅವರು ಸಮೀಪದ ಅಬ್ಬಿಗೇರಿ ಗ್ರಾಮದಲ್ಲಿ ದಸರಾ ಮಹೋತ್ಸವದ ಅಂಗವಾಗಿ ಗುರು ಸಿದ್ಧರಾಮೇಶ್ವರ ಭೋವಿ ಸಮಾಜದ ಯುವಕರ ಸಮಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿಯಾಗಿ ಗೂಳಿ ಬಸವೇಶ್ವರ ಗೀಗೀ ಪದ ಕಲಾ ತಂಡದವರಿಂದ ಆಯೋಜಿಸಿದ್ದ ಗೀಗೀ ಪದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮನೆ, ಮಠ ಹಾಗೂ ದೇವ ಮಂದಿರಗಳು ಸುಂದರವಾಗಿ ಕಾಣುವುದಾದರೆ ಅವರು ಪಟ್ಟ ಶ್ರಮದ ಫಲವೇ ಕಾರಣವಾಗಿದೆ. ಭೋವಿ ಸಮಾಜಕ್ಕೆ ಸಂಬಂಧಿಸಿದ ಸವಲತ್ತುಗಳನ್ನು ಸರ್ಕಾರ ಹಾಗೂ ಕಾರ್ಮಿಕ ಇಲಾಖೆ ಸಹಕಾರದೊಂದಿಗೆ ಕೊಡುವುದಾಗಿ ಭರವಸೆ ನೀಡಿ, ಬಹುದಿನಗಳ ಬೇಡಿಕೆಯಾದ ಪ್ಲಾಟ್ ಕೊಡಿಸುವ ವ್ಯವಸ್ಥೆಯನ್ನು ಬೇಗನೆ ಮಾಡುವುದಾಗಿ ಹೇಳಿದರು. ಮುಗಳಕೋಡ ಶಾಖಾಮಠದ ಬಸವರಾಜ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಸಿದ್ಧರಾಮೇಶ್ವರ ಭೋವಿ ಯುವಕ ಸಮಿತಿಯ ಮುತ್ತಣ್ಣ ಬಂಡಿವಡ್ಡರ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ದುರಗೇಶ ಬಂಡಿವಡ್ಡರ ಪ್ರಾಸ್ತಾವಿಕವಾಗಿ ಮಾತನಾಡಿದರು. ಗೂಳಿ ಬಸವೇಶ್ವರ ಗೀಗೀ ಪದ ಕಲಾ ತಂಡದವರಿಂದ ಗೀಗೀ ಪದ ಪ್ರಸ್ತುತಪಡಿಸಲಾಯಿತು. ಅತಿಥಿಗಳಾಗಿ ಜಿಪಂ ಸದಸ್ಯ ಡಾ. ಆರ್.ಬಿ. ಬಸವರಡ್ಡೇರ, ಗ್ರಾಪಂ ಅಧ್ಯಕ್ಷೆ ಶೇಖಮ್ಮ ನೀರಲೊಟಿ, ವೀರಣ್ಣ ಹರದಾರಿ, ಅಂದಪ್ಪ ವೀರಾಪುರ, ದುರಗಪ್ಪ ಬಂಡಿವಡ್ಡರ, ಸಂಗನಗೌಡ ಪಾಟೀಲ, ಎಚ್.ಡಿ. ಬಸವರಡ್ಡೇರ, ಯುಸಫ ಇಟಗಿ, ಹಾಗೂ ಬಾಲಪ್ಪ ಬಂಡಿವಡ್ಡರ ಪಾಲ್ಗೊಂಡಿದ್ದರು. ಮಾರುತಿ ಬಂಡಿವಡ್ಡರ ಸ್ವಾಗತಿಸದರು. ಶಟ್ಟೆಪ್ಪ ಬಂಡಿವಡ್ಡರ ನಿರೂಪಿಸಿ, ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.