ಗದಗ

ಯುಪಿಎ ನೀತಿಯಿಂದ ದೇಶ ತಲೆ ತಗ್ಗಿಸುವಂತಾಗಿದೆ

Published On :

ಕನ್ನಡಪ್ರಭ ವಾರ್ತೆ, ನರಗುಂದ, ಅ. 19
ಭಾರತ ದೇಶದಲ್ಲಿರುವಷ್ಟು ಸಂಪತ್ತು ಬೇರೆ ಯಾವುದೇ ದೇಶದಲ್ಲಿ ಇಲ್ಲ, ಆದರೆ ಯುಪಿಎ ಸರ್ಕಾರದ ಕೆಲವು ಕೆಟ್ಟ ನೀತಿಗಳಿಂದ ಇಂದು ಭಾರತ ಪ್ರಪಂಚದ ಚಿಕ್ಕ ಪುಟ್ಟ ದೇಶಗಳಿಗೆ ತಲೆ ತಗ್ಗಿಸುವಂತಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ ಜೋಶಿ ಹೇಳಿದರು.
ಅವರು ಶನಿವಾರ ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಏರ್ಪಡಿಸಲಾಗಿದ್ದ ಜಿಲ್ಲಾಮಟ್ಟದ ಕಾರ್ಯಕಾರಿಣಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ದೇಶದಲ್ಲಿ ಯುಪಿಎ ಸರ್ಕಾರ ಆಡಳಿತಕ್ಕೆ ಬಂದಾಗಿನಿಂದ ಅಭಿವೃದ್ಧಿ ಕಾರ್ಯಗಳು ನೇಪಥ್ಯಕ್ಕೆ ಸರಿದಿವೆ. ಇಂದು ದೇಶದಲ್ಲಿ ಭ್ರಷ್ಟಾಚಾರ, ಭಯೋತ್ಪಾನೆ, ಪಕ್ಕದ ರಾಷ್ಟ್ರಗಳ ದಬ್ಬಾಳಿಕೆ ಹೆಚ್ಚಿದೆ. ಕಲ್ಲಿದ್ದಲು ಹಗರಣದಲ್ಲಿ ಪ್ರಧಾನಿಯವರೇ ಮೂಲ ಆರೋಪಿಯಾಗಿದ್ದರೂ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಆರೋಪಿಸಿದರು.
ಒಳಜಗಳದಿಂದ ಪಕ್ಷಕ್ಕೆ ಸೋಲು: ಹಿಂದಿನ ವಿಧಾನಸಭೆ ಚುನಾವಣೆಯಲ್ಲಿ ನಮ್ಮ ಪಕ್ಷದಲ್ಲಿನ ಕೆಲವು ಭಿನ್ನಾಭಿಪ್ರಾಯಗಳಿಂದ ನಮಗೆ ಸೋಲಾಗಿದೆ. ಆ ಸೋಲನ್ನು ಮರೆತು ಮುಂಬರುವ ಚುನಾವಣೆಗಳನ್ನು ಆತ್ಮವಿಶ್ವಾಸದಿಂದ ಎದುರಿಸಿ ನಾವು ಜಯಗಳಿಸಿ, ನರೇಂದ್ರ ಮೋದಿಯವರನ್ನು ಪ್ರಧಾನಿಯಾಗಿ ಆಯ್ಕೆ ಮಾಡಬೇಕಿದೆ. ದೇಶದ ಆರ್ಥಿಕ ವ್ಯವಸ್ಥೆಯನ್ನು ಸುಧಾರಿಸಲು ಆ ಕನಸು ಬಂಗಾರದಿಂದ ಸಾಧ್ಯವಿಲ್ಲ. ಈ ದೇಶದ ಕೆಲವರು ಹೊರ ದೇಶದಲ್ಲಿ ಕೋಟ್ಯಂತರ ಹಣ ಇಟ್ಟಿದ್ದು, ಅದನ್ನು ದೇಶಕ್ಕೆ ವಾಪಸ್ ತಂದರೆ ಅದರಿಂದ ದೇಶದ ಸುಧಾರಣೆ ಸಾಧ್ಯ. ಮೊದಲು ಈ ರಬ್ಬರ್ ಸ್ಟ್ಯಾಂಪ್ ಪ್ರಧಾನಿಯನ್ನು ಕಿತ್ತು ಹಾಕಲು ಮುಂದಾಗಬೇಕಿದೆ. ನವೆಂಬರ್ 16 ರಂದು ನರೇಂದ್ರ ಮೋದಿಯವರ ಬೃಹತ್ ಸಭೆ ಬೆಂಗಳೂರಲ್ಲಿ ಏರ್ಪಡಿಸಲಾಗಿದೆ ಎಂದರು. ಮಾಜಿ ಸಚಿವ ಸಿ.ಸಿ. ಪಾಟೀಲ ಮಾತನಾಡಿ, ರಾಜ್ಯದಲ್ಲಿ ಸದ್ಯ ಯಾವ ಪಕ್ಷದ ಸರ್ಕಾರ ಇದೆ, ಯಾರು ಮುಖ್ಯಮಂತ್ರಿ ಎನ್ನುವುದು ತಿಳಿಯದಾಗಿದೆ. ಹಿಂದಿನ ಚುನಾವಣೆಯಲ್ಲಿ ನಮ್ಮ ಕೆಲವು ಸಣ್ಣ ಪುಟ್ಟ ಒಳ ಜಗಳದಿಂದ ಸೋಲಬೇಕಾಯಿತು. ಆ ನೆನಪುಗಳನ್ನು ಮೆರೆತು ಮುಂದಿನ ದಿನದಲ್ಲಿ ಬರುವ ಚನಾವಣೆಗಳನ್ನು ಒಗ್ಗಟ್ಟಿನಿಂದ ಎದರಿಸಿ ಬಿಜೆಪಿಯನ್ನು ಕೇಂದ್ರದಲ್ಲಿ ಆಡಳಿತಕ್ಕೆ ತರಲು ನಾವು ಸನ್ನದ್ಧರಾಗಬೇಕಿದೆ ಎಂದು ಹೇಳಿದರು. ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಸಂಸದ ಪಿ.ಸಿ. ಗದ್ದಿಗೌಡರ, ಮಾಜಿ ಸಚಿವ ಹಾಗೂ ಜಿಲ್ಲಾಧ್ಯಕ್ಷ ಕಳಕಪ್ಪ ಬಂಡಿ, ಮಾಜಿ ಶಾಸಕ ರಾಮಣ್ಣ ಲಮಾಣಿ, ತಾಪಂ ಅಧ್ಯಕ್ಷ ಗುರಪ್ಪ ಆದಪ್ಪನವರ, ಸದಸ್ಯ ವಿ.ಎನ್. ಕೊಳ್ಳಿಯವರ, ಬಿ.ಎಸ್. ಪಾಟೀಲ, ಎಪಿಎಂಸಿ ಅಧ್ಯಕ್ಷ ಅಜ್ಜಪ್ಪ ಹುಡೇದ, ಎಂ.ಎಸ್. ಕರಿಗೌಡರ, ಅಶೋಕ ನವಲಗುಂದ, ಪುರಸಭೆ ಸದಸ್ಯ ಪ್ರಕಾಶ ಪಟ್ಟಣಶೆಟ್ಟಿ, ಕಿರಣ ಮುಧೋಳ, ಉಮೇಶ ಕುಡನ್ನವರ, ಎಸ್.ಬಿ. ಕರಿಗೌಡರ, ರಾಜುಗೌಡ ಪಾಟೀಲ, ಪದಾಧಿಕಾರಿಗಳು ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.