ಸಿದ್ಧರಾಮ ಚರಿತ್ರೆ ಖಂಡಿಸಿ ಮೌನ ಪ್ರತಿಭಟನೆ
ಮುಂಡರಗಿ: ಕವಿ ರಾಘವಾಂಕ ವಿರಚಿತ ಕೃತಿಯನ್ನು ವಿಕೃತಿಗೊಳಿಸಿ ನಕಲಿ ಚರಿತ್ರೆಯನ್ನು ಪ್ರಕಾಶನ ಮಾಡಿದ ಹೀನ ಮನಸ್ಸಿನವರನ್ನು ಬಂಧಿಸುವಂತೆ ಆಗ್ರಹಿಸಿ ಮುಂಡರಗಿಯಲ್ಲಿ ಅ. 22ರಂದು ಸಾತ್ವಿಕ ಮೌನ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗುವುದು. ಪ್ರತಿಭಟನೆಯಲ್ಲಿ ತಾಲೂಕಿನ ಎಲ್ಲ ಬಸವಾಭಿಮಾನಿಗಳು, ಶರಣಾಭಿಮಾನಿಗಳು ಭಾಗವಹಿಸಿಬೇಕೆಂದು ತೋಂಟದಾರ್ಯ ಸೇವಾ ಸಮಿತಿ ಮುಖ್ಯಸ್ಥ ಕೊಟ್ರೇಶ ಅಂಗಡಿ ಹೇಳಿದರು.
ಶನಿವಾರ ಸಂಜೆ ಮುಂಡರಗಿ ತೋಂಟದಾರ್ಯ ಮಠದಲ್ಲಿ ಜರುಗಿದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. 13ನೇ ಶತಮಾನದಲ್ಲಿ ಕವಿ ರಾಘವಾಂಕ 549 ಪದ್ಯಗಳನ್ನೊಳಗೊಂಡ ಸಿದ್ದರಾಮೇಶ್ವರ ಚರಿತ್ರೆ ಭಕ್ತಿಯಿಂದ ಸ್ಮರಿಸುತ್ತಾ ರಚಿಸಲಾಗಿದೆ. ಸಮಾನತೆ ವಿರೋಧಿಸುವವರು ಇಂದಿಗೂ ಜೀವಂತವಾಗಿರುವ ಜಾತಿವಾದಿಗಳು ಈ ಸಿದ್ಧರಾಮೇಶ್ವರ ಚರಿತ್ರೆಗೆ 138 ಕೃತಕ ಪದ್ಯಗಳನ್ನು ಸೇರಿಸುವುದರ ಮೂಲಕ ಸೊಲ್ಲಾಪುರದ ಕೇದಾರ ಆದಿಲಿಂಗಪ್ಪ ಹಬ್ಬು ಎಂಬ ಸಿದ್ಧರಾಮೇಶ್ವರ ಗುಡಿಯ ಪೂಜಾರಿ ಮೂಲಕ ಈ ಕೃತಿ ಪ್ರಕಟಿಸಿದ್ದಾರೆ. ಗ್ರಂಥವನ್ನು ಬಸವವಿರೋಧಿ ಸ್ವಾಮಿಗಳು ಬಿಡುಗಡೆ ಮಾಡಿದ್ದಾರೆ. ಈ ನಕಲಿ ಪುಸ್ತಕದಲ್ಲಿ ಕಲ್ಯಾಣ ಕ್ರಾಂತಿ ನಡೆದದ್ದು ಸುಳ್ಳು ಎಂದು ಶರಣರ ತೇಜೋವಧೆ ಮಾಡಲಾಗಿದೆ. ಆದ್ದರಿಂದ ತಾಲೂಕಿನ ಶರಣ ಬಂಧುಗಳು ಇಂತಹ ಕೃತಿಯನ್ನು ಸರ್ಕಾರ ಮುಟ್ಟುಗೋಲು ಹಾಕಬೇಕು. ಬರೆದ ಲೇಖಕರನ್ನು ಬಂಧಿಸಬೇಕೆಂದು ಆಗ್ರಹಿಸಿ ಮೌನ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು.
ಅ. 22ರಂದು ಬೆಳಗ್ಗೆ 10-30ಕ್ಕೆ ತೋಂಟದಾರ್ಯ ಶಾಖಾಮಠದಿಂದ ಸಾತ್ವಿಕ ಮೌನ ಮೆರವಣಿಗೆ ಹೊರಟು ನಗರದ ಪ್ರಮುಖ ರಸ್ತೆಯಲ್ಲಿ ಸಂಚರಿಸುವ ಮೂಲಕ ಕೊಪ್ಪಳ ವೃತ್ತದಲ್ಲಿ ವಿಕೃತ ಕೃತಿಯನ್ನು ಬರೆದ ಲೇಖಕನ ಪ್ರತಿಕೃತಿ ದಹನ ಮಾಡಲಾಗುವುದು. ನಂತರ ತಹಸೀಲ್ದಾರ್ಗೆ ಮನವಿ ಸಲ್ಲಿಸಿ ಸರ್ಕಾರ ಈ ಕೃತಿಯನ್ನು ಮುಟ್ಟುಗೋಲು ಹಾಕಬೇಕು ಮತ್ತು ಲೇಖಕರನ್ನು ಬಂಧಿಸಬೇಕೆಂದು ಸರ್ಕಾರಕ್ಕೆ ಒತ್ತಾಯಿಸಲಾಗುವುದು ಎಂದರು.
ಈಶ್ವರಪ್ಪ ಬೆಟಗೇರಿ, ಬಿ.ವಿ. ಮುದ್ದಿ, ಕೊಟ್ರಯ್ಯ ಅಮರಗೋಳ ಹಿರೇಮಠ, ನಾಗೇಶ ಹುಬ್ಬಳ್ಳಿ, ಎಸ್.ವಿ. ಲಿಂಬಿಕಾಯಿ, ಉಮೇಶ ಹಿರೇಮಠ, ಶಿವಕುಮಾರ ಕುಬಸದ, ಎ.ಕೆ. ಮುಲ್ಲಾನವರ, ಫಾಲಾಕ್ಷಿ ಗಣದಿನ್ನಿ, ಮುತ್ತು ಹಾಳಕೇರಿ, ಎ.ಪಿ. ದಂಡಿನ, ದೇವಪ್ಪ ರಾಮೇನಹಳ್ಳಿ, ಮಂಜು ಮುಧೋಳ, ವಿ.ಸಿ. ಹಂಚಿನಾಳ, ಶಿವು ಹೊಬಳಗಟ್ಟಿ, ಸಿ.ಕೆ. ಗಣಪ್ಪನವರ, ಶಿವಯೋಗಿ ಕೊಪ್ಪಳ ಇತರರಿದ್ದು, ಸಲಹೆ ನೀಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

