ಗದಗ

ನ. 2ರಂದು ಜಕ್ಕಲಿಯಲ್ಲಿ ನುಡಿಹಬ್ಬ: ಶಿವಣ್ಣ ಕುರಿ

Published On :

ನರೇಗಲ್ಲ: ಗದಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನೇತೃತ್ವದಲ್ಲಿ ನ. 2ರಿಂದ ತಿಂಗಳಾಂತ್ಯದವರೆಗೆ ಕನ್ನಡ ರಾಜೋತ್ಸವದ ಅಂಗವಾಗಿ ನುಡಿಹಬ್ಬ ಕಾರ್ಯಕ್ರಮವನ್ನು ರೋಣ ತಾಲೂಕಿನ ಜಕ್ಕಲಿ ಗ್ರಾಮದಿಂದ ಆರಂಭಿಸಲು ಉದ್ದೇಶಿಸಲಾಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಶಿವಣ್ಣ ಕುರಿ ಹೇಳಿದರು. ಸಮೀಪದ ಜಕ್ಕಲಿ ಗ್ರಾಮದಲ್ಲಿರುವ ಪಟ್ಟಣದ ತಾಪಂನ ಮಾಜಿ ಸದಸ್ಯ ಬಾಬಣ್ಣ ಅರಹುಣಸಿ ನಿವಾಸದಲ್ಲಿ ಜರುಗಿದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಕನ್ನಡ ಭಾಷೆಗೆ ಕರ್ನಾಟಕ ಏಕೀಕರಣದ ರೂವಾರಿ ದಿ. ಅಂದಾನಪ್ಪ ದೊಡ್ಡಮೇಟಿ ಅವರ ಕೊಡುಗೆ ಅಪಾರವಾಗಿದೆ. ನ. 2ರಿಂದ ಪ್ರಾರಂಭವಾಗುವ ನುಡಿಹಬ್ಬ ಗದಗ ಜಿಲ್ಲಾದ್ಯಂತ ನಡೆಯುತ್ತದೆ. ಅಂತಿಮವಾಗಿ ನುಡಿಹಬ್ಬ ಮುಂಡರಗಿಯಲ್ಲಿ ತಿಂಗಳಾಂತ್ಯದಲ್ಲಿ ಸಂಪನ್ನಗೊಳ್ಳುತ್ತದೆ. ನಾಡು, ನುಡಿ, ಭಾಷೆ ಕುರಿತ ಅರ್ಥಪೂರ್ಣ ಚರ್ಚೆಗಳು ನಡೆಯಲಿವೆ. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸ್ಥಳೀಯ ಕಲಾವಿದರು ಹಾಗೂ ಹೊರಗಿನಿಂದ ಬಂದ ಕಲಾ ತಂಡಗಳಿಗೆ ಆದ್ಯತೆ ನೀಡಲಾಗುತ್ತದೆ. ಕನ್ನಡಮ್ಮನ ಕಾರ್ಯಕ್ರಮಕ್ಕೆ ಜಕ್ಕಲಿ ಗ್ರಾಮದ ಹಿರಿಯರು ನೀಡಿದ ಉತ್ತಮ ಸಲಹೆ, ಸೂಚನೆಗಳನ್ನು ಹಾಗೂ ಸಹಕಾರ ನೀಡುವುದಾಗಿ ತಿಳಿಸಿದ್ದು, ಸಂತಸದ ಸಂಗತಿಯಾಗಿದೆ ಎಂದರು. ತಾಪಂ ಮಾಜಿ ಸದಸ್ಯ ಬಾಬಣ್ಣ ಅರಹುಣಸಿ ಮಾತನಾಡಿ, ಜಿಲ್ಲಾ ಕಸಾಪ ರಾಜ್ಯೋತ್ಸವದ ಅಂಗವಾಗಿ ನುಡಿಹಬ್ಬ ಕಾರ್ಯಕ್ರಮವನ್ನು ನಮ್ಮ ಊರಿನಿಂದ ಪ್ರಾರಂಭಗೊಳಿಸುತ್ತಿರುವುದು ಉತ್ತಮ ಕಾರ್ಯವಾಗಿದ್ದು, ದಿ. ಅಂದಾನಪ್ಪ ದೊಡ್ಡಮೇಟಿ ಅವರು ನಾಡು, ನುಡಿಗೆ ಸಲ್ಲಿಸಿದ ಅಮೂಲ್ಯ ಕೊಡುಗೆಗಳು ಅವಿಸ್ಮರಣೀಯವಾಗಿದೆ. ನಾವು ನಮ್ಮ ಗ್ರಾಮದಿಂದ ನುಡಿಹಬ್ಬ ಪ್ರಾರಂಭೋತ್ಸವಕ್ಕೆ ಎಲ್ಲ ರೀತಿಯಲ್ಲಿ ಸಹಕಾರ ನೀಡುವುದಾಗಿ ತಿಳಿಸಿದರು. ಸುದ್ದಿಗೋಷ್ಠಿ ಪೂರ್ವದಲ್ಲಿ ರೋಣ ತಾಲೂಕು ಕಸಾಪ ಅಧ್ಯಕ್ಷ ಡಾ. ಶಿವರಾಜ ಗುರಿಕಾರ, ಸದಸ್ಯರು ಜಕ್ಕಲಿ ಗ್ರಾಮಕ್ಕೆ ಭೇಟಿ ನೀಡಿ ನುಡಿಹಬ್ಬ ಜಕ್ಕಲಿಯಿಂದ ಪ್ರಾರಂಭಗೊಳಿಸುವ ಕುರಿತು ಮಾಜಿ ಶಾಸಕ ಜ್ಞಾನದೇವ ದೊಡ್ಡಮೇಟಿ ಅವರೊಂದಿಗೆ ಚರ್ಚಿಸಲಾಯಿತು. ಗ್ರಾಪಂ ಅಧ್ಯಕ್ಷ ಮಲ್ಲಣ್ಣ ಮೇಟಿ, ಶಿವನಾಗಪ್ಪ ದೊಡ್ಡಮೇಟಿ, ಬಿ.ಬಿ. ಗೌಡರ, ಶಿಕ್ಷಕ ಶೇಖಪ್ಪ ಕೇಸರಿ, ಗದಗ ಜಿಲ್ಲಾ ಸರ್ಕಾರಿ ಪ್ರಾಥಮಿಕ ಶಾಲೆಗಳ ನೌಕರರ ಸಂಘದ ಅಧ್ಯಕ್ಷ ಡಿ.ಎಸ್. ತಳವಾರ, ತಾಲೂಕು ಅಧ್ಯಕ್ಷ ಡಾ. ಶಿವರಾಜ ಗುರಿಕಾರ, ಪ್ರೊ. ಸಿ.ಜಿ. ಹುಡೇದಗಡ್ಡಿ, ಶರಣು ಗೋಗೇರಿ, ಎಂ.ಎಸ್. ಧಡೇಸೂರಮಠ, ರಾಜು ಮೇಟಿ, ಉಮೇಶ ಮೇಟಿ ಮುಂತಾದವರು ಉಪಸ್ಥಿತರಿದ್ದರು.
ನಿಂಗಪ್ಪ ನೇಮಕ
ರೋಣ: ಕರ್ನಾಟಕ ರಕ್ಷಣಾ ವೇದಿಕೆಯ ರೋಣ ತಾಲೂಕು ಪ್ರಧಾನ ಕಾರ್ಯದರ್ಶಿಯನ್ನಾಗಿ ನರೇಗಲ್ಲ ಸಮೀಪದ ಕೋಡಿಕೊಪ್ಪದ ನಿಂಗಪ್ಪ ಹೊನ್ನಾಪುರ ಅವರನ್ನು ನೇಮಕಗೊಳಿಸಲಾಗಿದೆ ಎಂದು ಕರವೇ ಜಿಲ್ಲಾಧ್ಯಕ್ಷ ಹನುಮಂತ ಅಬ್ಬಿಗೇರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.