ವಿವಾದಿತ ಸಿದ್ಧರಾಮ ಚರಿತೆ ನಿಷೇಧಕ್ಕೆ ಆಗ್ರಹ
ಗದಗ: ಬಸವಣ್ಣ ಸೇರಿದಂತೆ ಶಿವಶರಣರ ಕುರಿತು ಅವಹೇಳನ ಮಾಡುವ ಸಿದ್ಧರಾಮ ಚರಿತೆ ಹೊಂದಿರುವ ವಿವಾದಿತ ಕೃತಿಯನ್ನು ಮಹಾರಾಷ್ಟ್ರ ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳಬೇಕೆಂದು ನವ ಕರ್ನಾಟಕ ಜನಪರ ಅಭಿವೃದ್ಧಿ ವೇದಿಕೆಯ ರಾಜ್ಯ ಕಾರ್ಯಾಧ್ಯಕ್ಷ ಪಿ. ಸುಬ್ರಮಣ್ಯಂ ರಡ್ಡಿ ಆಗ್ರಹಿಸಿದರು.
ಅವರು ಜ. ತೋಂಟದಾರ್ಯ ಮಠದ ಎದುರು ಲಿಂಗಾಯತ ಪ್ರಗತಿಶೀಲ ಸಂಘ ವಿವಿಧ ಸಂಘಟನೆ ಆಶ್ರಯದಲ್ಲಿ ಡಾ. ತೋಂಟದ ಸಿದ್ಧಲಿಂಗ ಸ್ವಾಮೀಜಿ ನೇತೃತ್ವದಲ್ಲಿ ಸೋಮವಾರ ಆಯೋಜಿಸಿದ್ದ ಬೃಹತ್ ಪ್ರತಿಭಟನೆ ಬೆಂಬಲಿಸಿ ಮಾತನಾಡಿದರು.
ವೇದಿಕೆಯ ಕಾರ್ಮಿಕ ಘಟಕದ ರಾಜ್ಯಾಧ್ಯಕ್ಷ ಎಸ್.ಎಸ್. ರಡ್ಡೇರ ಮಾತನಾಡಿ, ಶಿವಶರಣರನ್ನು ಅವಮಾನಿಸುವ ಮೂಲಕ ಇತಿಹಾಸ ತಿರುಚಿ ಬಸವಾಭಿಮಾನಿಗಳ ಭಾವನೆಗೆ ಧಕ್ಕೆ ತರುವ ಹೀನ ಕೃತ್ಯ ಎಸಗಿದ್ದು ಖಂಡನಾರ್ಹ. ಸಿದ್ಧರಾಮ ಚರಿತ್ರೆ ಮೂಲ ಸ್ವರೂಪ ಬದಲಾಯಿಸುವ ಹಕ್ಕು ಯಾರಿಗೂ ಇಲ್ಲ. ಕಾರಣ ಈ ಕೃತ್ಯ ಎಸಗಿದವರ ಮೇಲೆ ಶಿಸ್ತಿನ ಕ್ರಮ ಕೈಕೊಳ್ಳಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.
ಲಿಂಗಾಯತ ಪ್ರಗತಿಶೀಲ ಸಂಘದ ಪ್ರತಿಭಟನೆಯಲ್ಲಿ ನವ ಕರ್ನಾಟಕ ಜನಪರ ಅಭಿವೃದ್ಧಿ ವೇದಿಕೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಐ. ಮುಳಗುಂದ, ಜಿಲ್ಲಾ ಕಾರ್ಯದರ್ಶಿ ಅಂಬರೀಶ ಕರೆಕಲ್ಲ, ರಾಜ್ಯ ಕಾರ್ಯದರ್ಶಿ ಎನ್.ಕೆ. ಕೊರ್ಲಹಳ್ಳಿ, ಎಸ್.ಸಿ. ಘಟಕದ ರಾಜ್ಯಾಧ್ಯಕ್ಷ ರಾಮು ಬಳ್ಳಾರಿ, ಅಲ್ಪಸಂಖ್ಯಾತರ ಘಟಕದ ಕಾರ್ಯದರ್ಶಿ ಅಬ್ದುಲ್ಖಾದರ ಗಡಾದ, ಜಿಲ್ಲಾ ಹಿರಿಯ ಉಪಾಧ್ಯಕ್ಷ ಎಂ.ಎಸ್. ಪರ್ವತಗೌಡರ, ರಾಜ್ಯ ನಿರ್ದೇಶಕ ಸಿ.ಜಿ.ಬಿ. ಹಿರೇಮಠ, ವೇದಿಕೆ ಪದಾಧಿಕಾರಿಗಳು ಬೆಂಬಲಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

