ಗದಗ

ಪ್ರಭುಲಿಂಗಲೀಲೆ ಅತ್ಯಂತ ಜನಪ್ರಿಯ: ಸಾಹಿತಿ ಹಿಂಡಿ

Published On :

ಗದಗ: ಪ್ರಭುಲಿಂಗಲೀಲೆಯು ವೀರಶೈವ ಧರ್ಮಕ್ಕೆ ಸಂಬಂಧಿಸಿದ ಸಾಹಿತ್ಯ ಕೃತಿಗಳಲ್ಲಿ ಅತ್ಯಂತ ಜನಪ್ರಿಯವಾದದ್ದು ಎಂದು ಗದುಗಿನ ಹಿರಿಯ ಸಾಹಿತಿ ಬಿ.ಎಸ್. ಹಿಂಡಿ ಹೇಳಿದರು.
ಅವರು ನಗರದ ಜಿಲ್ಲಾ ಕಸಾಪ ಕಾರ್ಯಾಲಯದಲ್ಲಿ ಕಸಾಪ ನೇತೃತ್ವದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಶನಿವಾರ ಸಾಹಿತ್ಯ ಸಂಜೆ ಕಾರ್ಯಕ್ರಮದಲ್ಲಿ ಅತಿಥಿ ಉಪನ್ಯಾಸಕರಾಗಿ ಮಾತನಾಡಿದರು. ಕವಿ ಇದನ್ನು ರಚಿಸಿದ ಕೆಲವೇ ಕಾಲದಲ್ಲಿ ಇದು ಸಂಸ್ಕೃತ, ಮರಾಠಿ, ತೆಲುಗು, ತಮಿಳು, ಭಾಷೆಗಳಿಗೆ ಭಾಷಾಂತರಗೊಂಡಿತ್ತೆಂದು ವಿಮರ್ಶಕರು ಹೇಳುತ್ತಾರೆ. ಭಾಷೆ, ದೇಶ, ಗಡಿಗಳನ್ನು ಮೀರಿ ಬಹುಜನರ ಮಾನ್ಯತೆಗೆ ಪಾತ್ರವಾದ ಶ್ರೇಷ್ಠ ಕೃತಿ ಚಾಮರಸನ ಪ್ರಭುಲಿಂಗಲೀಲೆ.   ಕನ್ನಡ ಪ್ರಮುಖ ಷಟ್ಪದಿ ಕವಿಗಳಲ್ಲಿ ಒಬ್ಬನಾದ ಚಾಮರಸ 12ನೇ ಶತಮಾನದಲ್ಲಿ ಹಿರಿಯ ಅನುಭಾವಿ ಅಲ್ಲಮಪ್ರಭುನನ್ನು ಕುರಿತು ಭಾಮಿನಿ ಷಟ್ಪದಿಯಲ್ಲಿ ಬರೆದಿರುವ ಕೃತಿ ಪ್ರಭುಲಿಂಗಲೀಲೆ, ಸಂಕೇತ, ಪ್ರತಿಮೆಗಳನ್ನು, ಗಂಭೀರಕರಿಸಿಕೊಂಡು ಅಲ್ಲಮಪ್ರಭುವಿನ ಕಥಾನಕದ ಜತೆಗೆ ಬಸವಣ್ಣ, ಅಕ್ಕಮಹಾದೇವಿ, ಸಿದ್ಧರಾಮ, ಮುಕ್ತಾಯಕ್ಕ, ಗೊಗ್ಗಯ್ಯ, ಗೋರಕ್ಷ ಮುಂತಾದವರು ಕಥಾನಕಗಳೂ ಬೆಸೆದುಕೊಂಡು ಬರುತ್ತದೆ ಎಂದರು. ಜಿಲ್ಲಾ ಕಸಾಪ ಅಧ್ಯಕ್ಷ ಡಾ. ಶಿವಪ್ಪ ಕುರಿ ಮಾತನಾಡಿದರು. ಶರಣಬಸವ ಕಾಶಪ್ಪನವರ ಕವನ ವಾಚಿಸಿದರು. ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಶರಣು ಗೋಗೇರಿ, ಡಾ. ಸಂಗಮೇಶ ತಮ್ಮನಗೌಡ್ರ, ಮಲ್ಲೇಶ ಡಿ.ಎಚ್., ಪ್ರಾ. ಕೆ.ಎಚ್.ಬೇಲೂರ, ಸಿ.ಜಿ. ಹುಡೇದಗಡ್ಡಿ, ಎ.ಬಿ. ಹಿರೇಮಠ, ಕಿಶೋರಬಾಬು ನಾಗರಕಟ್ಟಿ, ಶಶಿಕಾಂತ ಕೊರ್ಲಹಳ್ಳಿ, ಎಂ.ಪಿ. ರಮೇಶ, ಜಿ.ಎಸ್. ಯತ್ನಟ್ಟಿ,  ಮುಂತಾದವರು ಉಪಸ್ಥಿತರಿದ್ದರು.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.