ಸಂಗೀತದಿಂದ ಮನಸ್ಸು ಹಗುರ: ಶಾಂತಲಿಂಗ ಶ್ರೀ
ನರಗುಂದ: ಈ ಆಧುನಿಕ ಯುಗದಲ್ಲಿ ಪ್ರತಿಯೊಬ್ಬರೂ ಒಂದಿಲ್ಲೊಂದು ಒತ್ತಡದಲ್ಲಿ ಜೀವನ ಸಾಗಿಸುತ್ತಾರೆ. ಒತ್ತಡದಲ್ಲಿರುವವರು ಸಂಗೀತ ಕೇಳುವುದರಿಂದ ಮನಸ್ಸು ಹಗುರವಾಗುತ್ತದೆ ಎಂದು ದೊರೆಸ್ವಾಮಿ ವಿರಕ್ತಮಠದ ಶಾಂತಲಿಂಗ ಶ್ರೀಗಳು ಹೇಳಿದರು. ಅವರು ತಾಲೂಕಿನ ಭೈರನಹಟ್ಟಿ ಗ್ರಾಮದ ಗುರು ಬ್ರಹ್ಮಾನಂದ ಶಿವಾನುಭವ ಧರ್ಮ ಸಂಸ್ಥೆ ಏರ್ಪಡಿಸಿದ್ದ 219ನೇ ಶಿವಾನುಭವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು. ದೇಶದಲ್ಲಿ ಸಂಗೀತಕ್ಕೆ ತನ್ನದೇ ಇತಿಹಾಸವಿದೆ. ಗದುಗಿನ ಲಿಂ. ಪಂಚಾಕ್ಷರಿ ಗವಾಯಿಗಳು ಮತ್ತು ಪುಟ್ಟರಾಜ ಕವಿ ಗವಾಯಿಗಳು ಸಂಗೀತವನ್ನು ಸಮಾಜದ ಎಲ್ಲ ವರ್ಗದವರಿಗೆ ತಲುಪಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಸಂಗೀತ ಮೊದಲು ಉಳ್ಳವರ ವರ್ಗಕ್ಕೆ ಮಾತ್ರ ಸೀಮಿತವಾಗಿದ್ದರಿಂದ ಉಳಿದ ಜನಾಂಗಕ್ಕೆ ಸಂಗೀತದ ಶಿಕ್ಷಣ ಸಿಗುತ್ತಿರಲಿಲ್ಲ. ಆದರೆ ಪುಟ್ಟರಾಜರು ಸಂಗೀತವನ್ನು ಅರಮನೆಯಿಂದ ಗುರುಮನೆಗೆ ತಂದ ಕೀರ್ತಿಯೂ ಇವರಿಗೆ ಸಲ್ಲುತ್ತದೆ. ಸುಮಧುರ ಸಂಗೀತ ಕೇಳುವುದರಿಂದ ಮನುಷ್ಯನ ಮನಸ್ಸು ಹಗುರವಾಗುತ್ತದೆ ಎಂದರು. ಉಪನ್ಯಾಸ ನೀಡಿದ ಶಿಕ್ಷಕ ಕೆ.ಬಿ. ಅರಕೇರಿ, ನಮ್ಮ ನಾಡಿನ ಮಠ ಮಾನ್ಯಗಳು ಅನಾದಿಕಾಲದಿಂದ ಧರ್ಮ, ಆಧ್ಯಾತ್ಮ, ಶಿಕ್ಷಣ, ದಾಸೋಹ, ಮತ್ತು ಸಾಮಾಜಿಕ ಕಾರ್ಯಗಳನ್ನು ಮಾಡುತ್ತ ಜನಮಾನಸದಲ್ಲಿರುವ ಜಂಜಡ ಬಿಡಿಸಿ, ಶಿವಾನುಭವಗಳ ಮೂಲಕ ಮಾನವನನ್ನು ಪವಿತ್ರಗೊಳಿಸುತ್ತಿವೆ ಎಂದರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಗದುಗಿನ ಪೂಜಾ ಬೇವೂರ ಸುಗಮ ಸಂಗೀತ ಕಾರ್ಯಕ್ರಮ ನೀಡಿದರು. ಈ ಸಂದರ್ಭದಲ್ಲಿ ಶ್ರೀಕಾಂತ ಹೂಲಿ, ಸಂಜಯ ತೆಂಬದಮನಿ, ತಾಲೂಕು ನೌಕರರ ಸಂಘದ ಅಧ್ಯಕ್ಷ ಡಿ.ಎಚ್. ಅಜ್ಜಿ, ಗೌರವಾಧ್ಯಕ್ಷ ಐ.ಆರ್. ಹಡಗಲಿ, ಕಾರ್ಯದರ್ಶಿ ಎಸ್.ಸಿ. ಹಿರೇನಿಂಗನಗೌಡ್ರ, ಎಂ.ಜಿ. ಪಾಟನಕರ, ಜಿ.ಬಿ. ಕಂಪಣ್ಣವರ, ಆರ್.ಬಿ.ಚಿನಿವಾಲಕ, ಪಿ.ಎಸ್. ಎಣ್ಣೆಗೇರಿ, ಪಿ.ಸಿ. ಕಲಹಾಳ ಮುಂತಾದವರು ಹಾಜರಿದ್ದರು. ಭೀಮಣ್ಣ ಅಕ್ಕೇರಿ ನಿರೂಪಿಸಿದರು. ಮಹಾಂತೇಶ ಹಿರೇಮಠ ಸ್ವಾಗತಿಸಿ, ವಂದಿಸಿದರು.
ಮುಡಿಯಪ್ಪ ನಿಧನ
ಗದಗ: ತಾಲೂಕಿನ ಕೋಟುಮಚಗಿ ಗ್ರಾಮ ಪಂಚಾಯಿತಿ ಸದಸ್ಯ ಹಾಗೂ ಗದಗ ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಮುಡಿಯಪ್ಪ ಶಿಂಗ್ಟಾಲಕೇರಿ (36) ಗುರುವಾರ ಹೃದಯಾಘಾತದಿಂದ ನಿಧನರಾದರು. ಮೃತರಿಗೆ ಪತ್ನಿ, ಮೂವರು ಪುತ್ರರು ಹಾಗೂ ಓರ್ವ ಪುತ್ರಿ, ಅಪಾರ ಬಂಧು-ಬಳಗ ಇದ್ದರು.
ಸಂತಾಪ: ಇವರ ನಿಧನಕ್ಕೆ ಮಾಜಿ ಸಚಿವ ಹಾಗೂ ಜಿಲ್ಲಾ ಬಿಜೆಪಿ ಅಧ್ಯಕ್ಷ ಕಳಕಪ್ಪ ಬಂಡಿ, ಜಿಪಂ ಉಪಾಧ್ಯಕ್ಷ ರಮೇಶ ಮುಂದಿನಮನಿ, ಪಿಎಲ್ಡಿ ಬ್ಯಾಂಕ್ನ ಮಾಜಿ ಅಧ್ಯಕ್ಷ ವಿದ್ಯಾಧರ ದೊಡ್ಡಮನಿ, ಗ್ರಾಪಂ ಮಾಜಿ ಅಧ್ಯಕ್ಷ ಪಾಲಾಕ್ಷಯ್ಯ ಬಳಿಗೇರಿಮಠ, ಪಿಡಿಒ ಚಂದುಸ್ವಾಮಿ ದೊಡ್ಡಮನಿ, ಕೋಟುಮಚಗಿ ಗ್ರಾಪಂನ ಸರ್ವ ಸದಸ್ಯರು, ಸಿಬ್ಬಂದಿ ಸಂತಾಪ ಸೂಚಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

