ಅ. 23ನ್ನು ಮಹಿಳಾ ದಿನಾಚರಣೆಯನ್ನಾಗಿ ಆಚರಿಸಲಿ
ಕನ್ನಡಪ್ರಭ ವಾರ್ತೆ, ಗದಗ, ಅ. 27
ಕಿತ್ತೂರ ರಾಣಿ ಚನ್ನಮ್ಮ ದೇಶಕ್ಕಾಗಿ ಹೋರಾಡಿ ದೇಶ ಸಂರಕ್ಷಣೆ ಮಾಡುವಲ್ಲಿ ಶ್ರಮಿಸಿದ್ದು, ಚೆನ್ನಮ್ಮಳ ವಿಜಯೋತ್ಸದ ದಿನವಾದ ಅ. 23ನ್ನು ಪ್ರತಿವರ್ಷ ಮಹಿಳಾ ದಿನಾಚರಣೆಯನ್ನಾಗಿ ಸರ್ಕಾರ ಆಚರಿಸುವಂತಾಗಬೇಕು ಎಂದು ಮಾಜಿ ಶಾಸಕ ಶ್ರೀಶೈಲಪ್ಪ ಬಿದರೂರ ಹೇಳಿದರು.
ಅವರು ಈಚೆಗೆ ನಗರದ ಕಿತ್ತೂರರಾಣಿ ಚನ್ನಮ್ಮಾ ವೃತ್ತದಲ್ಲಿ ವೀರಶೈವ ಪಂಚಮಸಾಲಿ ಸಮಾಜ ಗದಗ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ವೀರರಾಣಿ ಕಿತ್ತೂರು ಚನ್ನಮ್ಮಳ ವಿಜಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಚನ್ನಮ್ಮಳ ಶೌರ್ಯ, ಸಾಮರ್ಥ್ಯ ಮತ್ತು ಯುದ್ಧದ ಕಲೆ ಎಲ್ಲರಿಗೂ ಅಚ್ಚರಿಮೂಡಿಸುವಂತಹದ್ದು, ಚನ್ನಮ್ಮಳ ಸ್ಥೈರ್ಯ ಇತಿಹಾಸದಲ್ಲಿ ದಾಖಲಾಗಿದೆ. ಸ್ತ್ರೀಯಾಗಿ ದೇಶಕ್ಕೋಸ್ಕರ ಪುರುಷರಿಗಿಂತಲೂ ಮಿಗಿಲಾಗಿ ಹೋರಾಡಿ ಈ ನಾಡಿನ ಕೀರ್ತಿಯನ್ನು ಹೆಚ್ಚಿಸಿದ್ದಾಳೆ ಎಂದರು.
ಸಮಾಜದ ಜಿಲ್ಲಾಧ್ಯಕ್ಷ ಎಫ್.ವಿ. ಮರಿಗೌಡ್ರ, ನಗರಸಭೆಯ ಮಾಜಿ ಸದಸ್ಯ ನಿಂಗಪ್ಪ ಪಡಗದ, ಪ್ರಧಾನ ಕಾರ್ಯದರ್ಶಿ ಬಸವರಾಜ ಅಪ್ಪಣ್ಣವರ, ವೀರಣ್ಣ ಕರಬಿಷ್ಠಿ, ಶಿವಣ್ಣ ನಾಗರಾಳ, ಜಗದೀಶ ಚನ್ನಪ್ಪಗೌಡ್ರ, ಮುತ್ತು ರೋಣದ, ಎಸ್.ಎಂ. ಪಾಟೀಲ, ಎಂ.ಎಸ್. ಪರ್ವತಗೌಡ್ರ, ಕಲ್ಲಪ್ಪ ಅಂಗಡಿ, ಪಂಚಮಸಾಲಿ ಸಮಾಜದ ಯುವ ಜಿಲ್ಲಾಧ್ಯಕ್ಷ ವಸಂತ ಪಡಗದ, ಶೇಖಣ್ಣ ಕನ್ಯಾಳ, ಅಮರೇಶ ಬೂದಿಹಾಳ, ರಾಮಣ್ಣ ಫಲದೊಡ್ಡಿ, ಹಳ್ಳೆಪ್ಪನವರ, ಡಾ. ಜವಾಯಿ, ಸದು ಕರಿಗೌಡ್ರ, ಎಸಿ.ವಿ. ನೇಗಲಿ, ಎಸ್.ಎಸ್. ಬಾವಳ್ಳಿ, ಸಿದ್ದಣ್ಣ ತುರಖಾನಿ, ಮಹಿಳಾ ಅಧ್ಯಕ್ಷೆ ಪಾರ್ವತಿದೇವಿ ಮರಿಗೌಡ್ರ, ಸಾವಿತ್ರಿದೇವಿ ಪಾಟೀಲ, ನೀಲಮ್ಮ ಬುಳ್ಳಾನವರ, ಮೀನಾಕ್ಷಿ ಬೆನಕಣ್ಣವರ, ಜಾನಕಿಬಾಯಿ ಮಲ್ಲಾಪುರ, ಎಂ.ಬಿ. ದೇಸಾಯಿ, ಮಹಾಲಿಂಗಪ್ಪ ಪಡಗದ, ಶಶಿಧರ ದಿಂಡೂರ, ಮುಳ್ಯಾಳ, ಬಿಳೇಯಲಿ, ಎಂ.ಕೆ. ಮಟ್ಟಿ, ರಾಚಪ್ಪ ಕಮತರ, ಉಳವಪ್ಪ ಹೊಂಬಳ ಮುಂತಾದವರು ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

