ಮನಸ್ಸಿನ ಪ್ರಫುಲ್ಲತೆಗೆ ಸಂಗೀತ ಅಗತ್ಯ: ಶಾರದಾ
ರೋಣ: ಮನಸ್ಸಿನ ಪ್ರಫುಲ್ಲತೆಗೆ ಸಂಗೀತ ಅತ್ಯಂತ ಮುಖ್ಯವಾಗಿದ್ದು, ಆ ನಿಟ್ಟಿನಲ್ಲಿ ಹಿಂದುಸ್ತಾನಿ ಮತ್ತು ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಜನತೆ ಪ್ರೀತಿಸಬೇಕು. ಸಂಗೀತ, ಜಾನಪದ ಕಲೆ ಮತ್ತು ಸಂಸ್ಕೃತಿಯ ಉಳಿವಿಗೆ ಜನತೆ ಜಾಗ್ರತರಾಗಬೇಕು ಎಂದು ಜಿಪಂ ಸದಸ್ಯೆ ಶಾರದಾ ಹಿರೇಗೌಡ್ರ ಹೇಳಿದರು.
ತಾಲೂಕಿನ ಕೌಜಗೇರಿ ಗ್ರಾಮದಲ್ಲಿ ವೀರಭದ್ರೇಶ್ವರ ಪಪೂ ಕಾಲೇಜಿನ ಎನ್.ಎಸ್.ಎಸ್. ಶಿಬಿರದ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಡಾ. ಪಂಚಾಕ್ಷರಿ ಹಿರೇಮಠ ಹಾಗೂ ಕಲಾ ತಂಡ ಇತ್ತೀಚೆಗೆ ಏರ್ಪಡಿಸಿದ ಹಿಂದುಸ್ತಾನಿ ಸಂಗೀತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಜೀವನ ಪದ್ಧತಿಯಲ್ಲಿ ಜಾನಪದ ಸಂಸ್ಕೃತಿಯನ್ನು ಅಳವಡಿಸಿಕೊಳ್ಳಬೇಕು ಎಂದರು.
ಹಿಂದುಸ್ತಾನಿ ದಿಗ್ಗಜರಾದ ಭಾರತ ರತ್ನ ಪ. ಭೀಮಸೇನ ಜೋಶಿ ಅವರಿಗೆ ಜನ್ಮ ನೀಡಿದ ಪುಣ್ಯಭೂಮಿ ಎಂಬ ಕೀರ್ತಿ ರೋಣ ತಾಲೂಕಿಗಿದೆ. ಕಲೆ, ಸಾಹಿತ್ಯ, ಜಾನಪದ, ಸಂಗೀತ, ಶಿಕ್ಷಣಕ್ಕೆ ಅಭೂತಪೂರ್ವ ಕೊಡುಗೆಯನ್ನು ನೀಡಿದ ಅನೇಕ ಮಹನೀಯರು ನಮ್ಮಲ್ಲಿದ್ದಾರೆ ಎಂದರು. ಪ್ರಾಚಾರ್ಯ ಆರ್.ಎಚ್. ಶತರಡ್ಡಿ ಅಧ್ಯಕ್ಷತೆ ವಹಿಸಿದ್ದರು. ಡಾ. ಪಂಚಾಕ್ಷರಿ ಹಿರೇಮಠ ಹಾಗೂ ಕಲಾ ತಂಡದಿಂದ ಹಿಂದುಸ್ತಾನಿ ಸಂಗೀತ ಕಾರ್ಯಕ್ರಮ ನಡೆಯಿತು. ತಾಪಂ ಸದಸ್ಯೆ ಶಾಂತಾ ಬೆಳಹಾರ, ಎಂ.ವಿ. ಪಾಟೀಲ್, ಎಸ್.ಕೆ. ಸುರಕೋಡ ಉಪಸ್ಥಿತರಿದ್ದರು. ಎಸ್.ಆರ್. ಬಳಗಾನೂರಮಠ ಸ್ವಾಗತಿಸಿದರು. ಡಿ.ಎನ್. ಮರಡ್ಡಿ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

