ಗದಗ

ಕೆವಿಜಿ ಬ್ಯಾಂಕ್‌ನಿಂದ ರೈತರಿಗೆ ತ್ವರಿತ ಸೇವೆ: ರಡ್ಡಿ

Published On :

ಗದಗ: ಬ್ಯಾಂಕಿಂಗ್ ಕ್ಷೇತ್ರದ ಆಧುನಿಕ ಅವಿಷ್ಕರಗಳಾದ ಎಟಿಎಂ, ನೆಟ್ ಬ್ಯಾಂಕಿಂಗ್ ವ್ಯವಸ್ಥೆಗಳನ್ನು ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಶೀಘ್ರದಲ್ಲಿ ಅಳವಡಿಸಿಕೊಂಡು ಗ್ರಾಮೀಣ ಭಾಗದ ರೈತರಿಗೆ ಮತ್ತು ಎಲ್ಲ ಗ್ರಾಹಕರಿಗೆ ತ್ವರಿತ ಸೇವೆ ನೀಡುವ ಉದ್ದೇಶ ಹೊಂದಿದೆ ಎಂದು ಬ್ಯಾಂಕಿನ ನೂತನ ಅಧ್ಯಕ್ಷ ಎನ್. ಅಶೋಕ ರಡ್ಡಿ ಅಭಿಪ್ರಾಯಪಟ್ಟರು.
ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕಿನ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಪ್ರಥಮ ಬಾರಿಗೆ ನಗರಕ್ಕೆ ಆಗಮಿಸಿ ಕೆವಿಜಿ ಬ್ಯಾಂಕಿನ ಪ್ರಾದೇಶಿಕ ಕಚೇರಿಯಲ್ಲಿ ನಡೆದ ಶಾಖಾಧಿಕಾರಿಗಳ ಸಮ್ಮೇಳನ ಉದ್ದೇಶಿಸಿ ಅವರು ಮಾತನಾಡಿದರು.
ಬ್ಯಾಂಕ್‌ನ ಹೊಸ ಅವಿಷ್ಕಾರಗಳೊಂದಿಗೆ ಸ್ಪರ್ಧಾತ್ಮಕವಾಗಿ ಕಾರ್ಯನಿರ್ವಹಿಸುವ ಮನೋಭಾವ ಹೊಂದಬೇಕು. ಗ್ರಾಹಕ ಸೇವೆಯೇ ದೇವರ ಸೇವೆ ಎಂಬ ಮಂತ್ರದೊಂದಿಗೆ ಕಾರ್ಯನಿರ್ವಹಿಸಿದಾಗ ಮಾತ್ರ ಇತರ ಬ್ಯಾಂಕ್‌ಗಳ ಸ್ಪರ್ಧೆಯಲ್ಲಿ ಕೆವಿಜಿ ಬ್ಯಾಂಕ್ ಮುಂಚೂಣಿಯಲ್ಲಿರಲು ಸಾಧ್ಯ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಠೇವಣಿ, ಸಾಲ ಮತ್ತು ಮರುಪಾವತಿ ಎಂಬ 3 ಘಟಕಗಳಿದ್ದು, ಈ 3 ಘಟಕಗಳಲ್ಲಿ ಪ್ರಗತಿ ಸಾಧಿಸಲು ಶಾಖಾಧಿಕಾರಿಗಳು ಮತ್ತು ಸಿಬ್ಬಂದಿಗಳು ಪರಸ್ಪರ ಹೊಂದಿಕೊಂಡು ತಂಡವಾಗಿ ಕಾರ್ಯನಿರ್ವಹಿಸಿದಾಗ ಮಾತ್ರ ಯಶಸ್ವಿಯಾಗಲು ಸಾಧ್ಯ. ಆಯಾ ಭಾಗದ ಜನರ ಅಗತ್ಯತೆಗಳನ್ನು ಅರಿತುಕೊಂಡು ಸಾಲ ಯೋಜನೆಗಳ ಬಗ್ಗೆ ಅಧ್ಯಯನ ನಡೆಸಬೇಕು ಎಂದರು.
ಬ್ಯಾಂಕ್‌ನ ಪ್ರಬಂಧಕ. ಎ.ಎ. ಉಪಾಧ್ಯ ಪ್ರಾಸ್ತಾವಿಕ ಮಾತನಾಡಿದರು. ಇದೇ ಸಂದರ್ಭ ಠೇವಣಿ, ಸಾಲಗಳ ಮತ್ತು ಅನುತ್ಪಾದಕ ಸಾಲಗಳ ವಿಭಾಗದಲ್ಲಿ ಗುರಿ ಸಾಧಿಸಿದ ಶಾಖಾಧಿಕಾರಿಗಳನ್ನು ಸನ್ಮಾನಿಸಲಾಯಿತು. ಎ.ಕೆ. ದೊನ್ನಿ ಪ್ರಾರ್ಥಿಸಿದರು. ಪ್ರಾದೇಶಿಕ ಕಚೇರಿಯ ಹಿರಿಯ ಪ್ರಬಂಧಕ ಎಸ್.ಎಸ್. ಪಾಟೀಲ ಸ್ವಾಗತಿಸಿದರು. ಗದಗ ಶಾಖೆಯ ಮುಖ್ಯ ಪ್ರಬಂಧ ಬಿ.ಟಿ. ಪೈ ನಿರೂಪಿಸಿದರು. ಗಜೇಂದ್ರಗಡ ಶಾಖೆಯ ಹಿರಿಯ ಪ್ರಬಂಧಕ ವಿ.ಅರ್. ತಿಗಡಿಕರ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.