ಗದಗ

ಬೆಳಗಟ್ಟಿಗೆ ಬಸ್ ಬಿಡುವಂತೆ ಕರವೇ ಆಗ್ರಹ

Published On :

ಲಕ್ಷ್ಮೇಶ್ವರ: ಶಿರಹಟ್ಟಿ ತಾಲೂಕಿನ ಬೆಳಗಟ್ಟಿ, ಸಾಸಲವಾಡ, ಹೆಬ್ಬಾಳ ಗ್ರಾಮಗಳ ವಿದ್ಯಾರ್ಥಿಗಳಿಗೆ ಪ್ರತಿದಿನ ಬೆಳ್ಳಟ್ಟಿಯ ಶಾಲಾ-ಕಾಲೇಜುಗಳಿಗೆ ಹೋಗಿ ಬರಲು ತುಂಬಾ ತೊಂದರೆ ಅನುಭವಿಸುತ್ತಿದ್ದು, ಅದಕ್ಕಾಗಿ ಬೆಳ್ಳಟ್ಟಿಯಿಂದ ವಡವಿ ಹೊಸೂರುಗೆ ಬಡುತ್ತಿರುವ ಬಸ್‌ನ್ನು ಬೆಳಗಟ್ಟಿ ಹಾಗೂ ಮುಂದಿನ ಗ್ರಾಮಗಳವರೆಗೆ ಬಿಡಬೇಕು ಎಂದು ಆಗ್ರಹಿಸಿ ಶಿರಹಟ್ಟಿ ತಾಲೂಕು ಗ್ರಾಮೀಣ ಕರವೇ ಅಧ್ಯಕ್ಷ ನೀಲನಗೌಡ ಪಾಟೀಲ ಆಗ್ರಹಿಸಿದ್ದಾರೆ.
ಸೋಮವಾರ ಪಟ್ಟಣದ ಡಿಪೋ ಮ್ಯಾನೇಜರ್ ಅವರಿಗೆ ಬೆಳಗಟ್ಟಿ ಗ್ರಾಮಗಳಿಗೆ ಬಸ್‌ನ್ನು ಬಿಡುವಂತೆ ಆಗ್ರಹಿಸಿ ಮನವಿ ಅರ್ಪಿಸಿ ಮಾತನಾಡಿದರು. ಬೆಳ್ಳಟ್ಟಿಯಿಂದ ವಡವಿ ಗ್ರಾಮಗಳವರೆಗೆ ಈಗ ಬಿಡುತ್ತಿರುವ ಬಸ್‌ನ್ನು ಅಲ್ಲಿಂದ ಮುಂದಿನ ಗ್ರಾಮಗಳಾದ ಬೆಳಗಟ್ಟಿ, ಸಾಸಲವಾಡ, ಹೆಬ್ಬಾಳ, ಚೌಡಾಳ ಗ್ರಾಮಗಳ ವರೆಗೆ ಮುಂದುವರಿಸಬೇಕು. ಇದರಿಂದ ಈ ಗ್ರಾಮಗಳ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ. ಕೇವಲ ಪ್ರತಿದಿನ ಒಂದು ಬಸ್ ಮಾತ್ರ ಬೆಳಗ್ಗೆ 9ಕ್ಕೆ ಈ ಗ್ರಾಮಗಳಿಗೆ ಬಂದು ಹೋಗುತ್ತದೆ. ನಂತರ ಯಾವುದೇ ಬಸ್ ಬರುವುದಿಲ್ಲ. ಇದರಿಂದ ಪ್ರತಿದಿನ 5-6 ಕಿ.ಮೀ. ನಡೆದುಕೊಂಡು ಶಾಲಾ-ಕಾಲೇಜುಗಳಿಗೆ ವಿದ್ಯಾರ್ಥಿಗಳು ಹಾಗೂ ಮಹಿಳೆಯರು, ಮಕ್ಕಳು, ವೃದ್ಧರು ನಡೆದುಕೊಂಡೇ ಬೆಳ್ಳಟ್ಟಿ ತಲುಪಬೇಕು ಹಾಗೂ ಮಳೆಗಾಲದಲ್ಲಿ ವಿದ್ಯಾರ್ಥಿಗಳು ಪಠ್ಯ ಪುಸ್ತಕಗಳನ್ನು ತೊಯಿಸಿಕೊಂಡು ಹೋಗಬೇಕಾದ ಪರಿಸ್ಥಿತಿ ಇದೆ. ಅದಕ್ಕಾಗಿ ಶೀಘ್ರವಾಗಿ ಈ ಗ್ರಾಮಗಳಿಗೆ ಹೆಚ್ಚಿನ ಬಸ್‌ನ್ನು ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಬಿಡಬೇಕು ಎಂದು ಆಗ್ರಹಿಸಿದರು.
ಡಿಪೋ ಮ್ಯಾನೇಜರ್ ಪರವಾಗಿ ಮನವಿ ಸ್ವೀಕರಿಸಿದ ಹಿರಿಯ ವ್ಯವಸ್ಥಾಪಕ ಬದಿ ಮಾತನಾಡಿ, ಇನ್ನೆರಡು ದಿನಗಳಲ್ಲಿ ಬಸ್ ಸೌಕರ್ಯ ಮಾಡಿಕೊಡಲಾಗುವುದು ಭರವಸೆ ನೀಡಿದರು. ವಿದ್ಯಾರ್ಥಿಗಳಾದ ಶ್ರೀಧರ ಬಸಾಪುರ, ಪ್ರವೀಣ ಬಾರಕೇರ, ಮಹಾಂತೇಶ ಆರವಳ್ಳಿ, ಫಕ್ಕಿರೇಶ ಮಾದರ, ಫಕ್ಕಿರಗೌಡ ಪಾಟೀಲ, ಉಮೇಶ ದುಗ್ಗತ್ತಿ, ರಮೇಶ ಉಳ್ಳಾಗಡ್ಡಿ, ಸಂತೋಷ ಆರವಳ್ಳಿ, ಮಾರುತಿ ನಾಯಕ್, ಮಂಜುನಾಥ ಹತ್ತಿ, ಶರಣಪ್ಪ ಬಾರಕೇರ, ಚಂದ್ರಶೇಖರ ಉಳ್ಳಾಗಡ್ಡಿ ಮೊದಲಾದವರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.