ಸಂತ ಸೇನಾ ಮಹಾರಾಜರ ತತ್ವ ಇಂದಿಗೂ ಪ್ರಸ್ತುತ
ಕನ್ನಡಪ್ರಭ ವಾರ್ತೆ, ಗದಗ, ಸೆ. 3
ಸಂತ ಸೇನಾ ಮಹಾರಾಜರ ತತ್ವಗಳು ಇಂದಿಗೂ ಪ್ರಸ್ತುತವಾಗಿದೆ. ಜಾತ್ಯತೀತ ಮನೋಭಾವನೆಯಿಂದ ಸರ್ವ ಧರ್ಮಗಳನ್ನು ಸರಿಸಮಾನವಾಗಿ ಕಂಡು ಸ್ವಾಸ್ಥ್ಯ ಸಮಾಜವನ್ನು ಕಟ್ಟಲು ಪ್ರಯತ್ನಿಸಿದವರು ಸಂತ ಸೇನಾ ಮಹಾರಾಜರು ಎಂದು ಗದಗ ಜಿಲ್ಲಾ ಕ್ಷೌರಿಕ ಹಿತರಕ್ಷಣಾ ವೇದಿಕೆಯ ಜಿಲ್ಲಾ ಗೌರವಾಧ್ಯಕ್ಷ ಪರಶುರಾಮ ಕೋಟೆಕಲ್ಲ ಹೇಳಿದರು.
ಅವರು ಈಚೆಗೆ ಗದಗ ಜಿಲ್ಲಾ ಕ್ಷೌರಿಕ ಹಿತರಕ್ಷಣಾ ವೇದಿಕೆಯ ನೇತೃತ್ವದಲ್ಲಿ ಹಮ್ಮಿಕೊಂಡ ಸಂತ ಸೇನಾ ಮಹಾರಾಜರ ಪುಣ್ಯತಿಥಿ ಆಚರಣೆ ಹಾಗೂ ಉಚಿತ ಕ್ಷೌರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಂತ ಸೇನಾ ಮಹಾರಾಜ ನಾಬಿಕ ಮರಾಠಾ (ಸವಿತಾ) ಸಮಾಜದ ಹಿರಿಯ ಮುಖಂಡ ರಾಜು ಮಾನೆ, ಪಾಂಡು ಕಾಳೆ, ದೀಪಕ ಮಾನೆ ಮಾತನಾಡಿ, ಜನರಲ್ಲಿ ಮನೆ ಮಾಡಿದ್ದ ಕಂದಾಚಾರ ಮೂಢನಂಬಿಕೆಗಳನ್ನು ತೊಲಗಿಸಿ ಆಧ್ಯಾತ್ಮಿಕ ಕಡೆಗೆ ಸೆಳೆಯಲು ಭಜನೆಗಳನ್ನು ಕೀರ್ತನೆಗಳನ್ನು ರಚಿಸಿ ಮರಾಠಿ ಸಾಹಿತ್ಯವನ್ನು ಶ್ರೀಮಂತಗೊಳಿಸಿದವರು ಸಂತ ಸೇನಾ ಮಹಾರಾಜರು ಎಂದರು. ಕ್ಷೌರಿಕ ಸಮಾಜದ ಯುವ ಮುಖಂಡ ಸುರೇಶ ಬೂದೂರ ಹಾಗೂ ಜಂಬಣ್ಣ ಕಡಮೂರ ಮಾತನಾಡಿ, ಸಂತ ಸೇನಾ ಮಹಾರಾಜರ ಜೀವನ ಸಾಧನೆ ಮಟ್ಟದಲ್ಲಿದ್ದು ಕ್ಷೌರಿಕ ಸಮಾಜವನ್ನು ಉದ್ಧಾರ ಮಾಡುವ ಮೂಲಕ ಮೇರು ಕೃತಿಗಳನ್ನು ರಚಿಸುವಲ್ಲಿ ಕಾರಣೀಭೂತ ವ್ಯಕ್ತಿಯಾಗಿ ಸಮಾಜದಲ್ಲಿ ಸರಿ ಸಮಾನತೆಯನ್ನು ತಂದಿದ್ದಾರೆ ಎಂದರು. ದೀಪಕ ಮಾನೆ ಮುಂತಾದವರು ಮಾತನಾಡಿದರು. ಈ ಸಂದರ್ಭದಲ್ಲಿ ಸಂತ ಸೇನಾ ಮಹಾರಾಜರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಜತೆಗೆ ಚಿಕ್ಕಮಕ್ಕಳಿಗೆ ಉಚಿತ ಕ್ಷೌರ ಕಾರ್ಯಕ್ರಮ ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ಪ್ರಕಾಶ ಮಾನೆ, ಬಸವರಾಜ ಬಹದ್ದೂರಬಂಡಿ, ಕೃಷ್ಣಾ ಬೂದೂರ, ಗಣೇಶ ಕಡಮೂರ, ಸಾಗರ ಹಡಪದ, ನಿಂಗರಾಜ ಕಡಮೂರ ಹಾಗೂ ಕ್ಷೌರಿಕ ಸಮಾಜದ ಹಿರಿಯರು, ಯುವಕರು ಹಾಗೂ ಇತರರು ಉಪಸ್ಥಿತರಿದ್ದರು. ಗದಗ ಜಿಲ್ಲಾ ಕ್ಷೌರಿಕ ಹಿತರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಹಾಗೂ ವೇದಿಕೆಯ ರಾಜ್ಯ ಜಂಟಿಕಾರ್ಯದರ್ಶಿ ಕೃಷ್ಣಾ ಹಡಪದ ಸ್ವಾಗತಿಸಿ, ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

