12ರಂದು ಗ್ರಾಮೀಣ ದಸರಾ ಕ್ರೀಡಾಕೂಟ
ರೋಣ: 2013-14ನೇ ಸಾಲಿನ ರೋಣ ತಾಲೂಕು ಮಟ್ಟದ ಗ್ರಾಮೀಣ ಮತ್ತು ದಸರಾ ಕ್ರೀಡಾಕೂಟಗಳು ಪಟ್ಟಣದ ಜಿಲ್ಲಾ ಯುವಜನ ಕ್ರೀಡಾ ಇಲಾಖೆ ಮತ್ತು ಯುವಶಕ್ತಿ ಯುವಕ ವಿವಿಧೋದ್ದೇಶ ಸಂಘಗಳ ಆಶ್ರಯದಲ್ಲಿ ಪಟ್ಟಣದ ದ್ರೋಣಾಚಾರ್ಯ ಕ್ರೀಡಾಂಗಣದಲ್ಲಿ ಸೆ. 12ರಂದು ಏರ್ಪಡಿಸಲಾಗಿದೆ. ದಸರಾ ಕ್ರೀಡಾಕೂಟದಲ್ಲಿ ಭಾಗವಹಿಸುವವರಿಗೆ ಯಾವುದೇ ವಯೋವುತಿ ನಿರ್ಬಂಧವಿರುವುದಿಲ್ಲ. ಗ್ರಾಮೀಣ ಕ್ರೀಡಾಕೂಟದಲ್ಲಿ ಭಾಗವಹಿಸುವವರು 16 ವರ್ಷದೊಳಗಿನ ವಯೋವುತಿಯವರಾಗಿರಬೇಕು. ಇದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಹಾಜರು ಪಡಿಸಬೇಕು ಮತ್ತು ಸೈನಿಕರು, ಅರೇ ಸೈನಿಕರು ಭಾಗವಹಿಸುವಂತಿಲ್ಲ. ಗ್ರಾಮೀಣ ಕ್ರೀಡಾಕೂಟದಲ್ಲಿ ಭಾಗವಹಿಸುವವರಿಗೆ 31-12-2013 ಕ್ಕೆ 16 ವರ್ಷ ಮೀರಿರಬಾರದು. ಶಾಲೆಯಲ್ಲಿ ದಾಖಲಾತಿ ಇಲ್ಲದಿದ್ದಲ್ಲಿ ತಹಸೀಲ್ದಾರ್ರರಿಂದ ಪ್ರಮಾಣಪತ್ರ ತರಬೇಕು.
ದಸರಾ ಕ್ರೀಡಾಕೂಟ ಸ್ಪರ್ಧೆಗಳು: ಪುರುಷರಿಗೆ 100, 200, 400, 800, 1500, 5000 ಮೀ ಓಟ, ಉದ್ದ ಜಿಗಿತ, ಎತ್ತರ ಜಿಗಿತ, ಗುಂಡು ಎಸೆತ, ಚಕ್ರ ಎಸೆತ, ಬಲ್ಲೆ ಎಸೆತ ಮತ್ತು 4್ಢ100 ಮೀ. ರಿಲೆ ನಡೆಯುವವು. ಮಹಿಳೆಯರಿಗಾಗಿ 100, 200, 400, 800, 1500, 3000, ಮೀ. ಓಟ, ಉದ್ದ ಜಿಗಿತ, ಎತ್ತರ ಜಿಗಿತ, ಗುಂಡು ಎಸೆತ, ಚಕ್ರ ಎಸೆತ, ಬಲ್ಲೆ ಎಸೆತ, 4್ಢ100 ಮೀ. ರಿಲೆ ನಡೆಯುವವು. ಗುಂಪು ಆಟಗಳಾದ ಕಬಡ್ಡಿ, ಖೋಖೋ, ವಾಲಿಬಾಲ್ ನಡೆಯಲಿವೆ.
ಗ್ರಾಮೀಣ ಕ್ರೀಡಾಕೂಟ ಸ್ಪರ್ಧೆಗಳು: ಬಾಲಕರಿಗೆ 100, 400, 800, 1500, 3000, ಮೀ. ಓಟಗಳು ಉದ್ದ ಜಿಗಿತ, ಎತ್ತರ ಜಿಗಿತ, ಗುಂಡು ಎಸೆತ, ಚಕ್ರ ಎಸೆತ, 4್ಢ 100 ಮೀ. ರಿಲೆ ಹಮ್ಮಿಕೊಳ್ಳಲಾಗಿದೆ. ಬಾಲಕಿಯರಿಗೆ 100, 400, 800, 1500, 3000, ಮೀ. ಓಟಗಳು ಉದ್ದ ಜಿಗಿತ, ಎತ್ತರ ಜಿಗಿತ, ಗುಂಡು ಎಸೆತ, ಚಕ್ರ ಎಸೆತ, 4್ಢ100 ಮೀ. ರಿಲೆ ಹಮ್ಮಿಕೊಳ್ಳಲಾಗಿದೆ. ಗುಂಪು ಆಟಗಳಾದ ಕಬಡ್ಡಿ, ಖೋಖೋ, ವಾಲಿಬಾಲ್ ಹಮ್ಮಿಕೊಳ್ಳಲಾಗಿದೆ.ಗ್ರಾಮೀಣ ಮತ್ತು ದಸರಾ ಕ್ರೀಡಾಕೂಟಗಳದಲ್ಲಿ ಭಾವಹಿಸುವ ಕ್ರೀಡಾಪಟುಗಳು ಸೆ. 12ರಂದು ಬೆಳಗ್ಗೆ 9.00 ಗಂಟೆಗೆ ಜರುಗುವ ಉದ್ಘಾಟನಾ ಸಮಾರಂಭದಲ್ಲಿ ಕಡ್ಡಾಯವಾಗಿ ಭಾಗವಹಿಸಬೇಕು.ಅರ್ಹ ಮತ್ತು ಆಸಕ್ತ ಕ್ರೀಡಾಪಟುಗಳು ಸೆ. 8 ರೊಳಗೆ ಹೆಸರು ನೋಂದಾಯಿಸಬೇಕು. ಹೆಚ್ಚಿನ ಮಾಹಿತಿಗಾಗಿ ತಾಲೂಕು ಯುವಜನ ಸೇವಾ ಇಲಾಖೆಯ ಸಹಾಯಕ ಕ್ರೀಡಾಧಿಕಾರಿ ಜಗದೀಶ ಬೂದಿಹಾಳ (ಮೊ-8884817780) ಮಲ್ಲನಗೌಡ ರಾಯನಗೌಡ್ರ (ಮೊ-9886422147) ಪ್ರವೀಣ ತೆಗ್ಗಿನಮನಿ (ಮೊ-7353681143) ಮತ್ತು ಸುಭಾಸ ಅಳ್ಳೊಳ್ಳಿ (ಮೊ-9036959407 ) ಇವರನ್ನು ಸಂಪರ್ಕಿಸಬೇಕು ಎಂದು ಯುವಶಕ್ತಿ ಯುವಕ ವಿವಿಧೋದ್ದೇಶ ಸಂಘ ರೋಣದ ಪ್ರಕಟಣೆಯಲ್ಲಿ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

