ಅಧ್ಯಾತ್ಮದ ಚಿಂತನೆ ಬೆಳೆಸುವ ಕೆಲಸವಾಗಲಿ
ಕನ್ನಡಪ್ರಭ ವಾರ್ತೆ, ಮುಂಡರಗಿ, ಸೆ. 8
ಶ್ರಾವಣ ಮಾಸದಲ್ಲಿ ಜನರ ಮನಸ್ಸನ್ನು ಸ್ವಚ್ಛಗೊಳಿಸುವ ನಿಟ್ಟಿನಲ್ಲಿ ಶ್ರೀಮಠದಲ್ಲಿ ವೆಂಕಟಾಪುರ ಅಜ್ಜನವರ ಭವ್ಯ ಜೀವನ ದರ್ಶನ ಪ್ರವಚನ ಜರುಗಿದ್ದು ಸಂತಸದ ಸಂಗತಿಯಾಗಿದೆ. ವೆಂಕಟಾಪುರ ಅಜ್ಜನವರ ಕಾಳಜಿ ಎಲ್ಲರಿಗೂ ಮಾರ್ಗದರ್ಶನವಾಗಿದೆ ಎಂದು ನಾಡೋಜ ಜ. ಅನ್ನದಾನ ಶ್ರೀಗಳು ಹೇಳಿದರು.
ಅವರು ಈಚೆಗೆ ಪಟ್ಟಣದ ಅನ್ನದಾನೀಶ್ವರ ಸಂಸ್ಥಾನಮಠದಲ್ಲಿ ಶ್ರಾವಣ ಮಾಸದ ನಿಮಿತ್ತ ಒಂದು ತಿಂಗಳಿಂದ ನಡೆದು ಬಂದಿರುವ ವೆಂಕಟಾಪುರ ಅಜ್ಜನವರ ಭವ್ಯ ಜೀವನ ದರ್ಶನ ಪ್ರವಚನದ ಮಹಾಮಂಗಲೋತ್ಸವ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಮಾತನಾಡಿದರು. ಕಲುಷಿತ ಸಮಾಜದಲ್ಲಿ ಜನರಲ್ಲಿ ಆಧ್ಯಾತ್ಮದ ಚಿಂತನೆಯನ್ನು ಬೆಳೆಸುವ ಕೆಲಸವಾಗಬೇಕು. ಸಕಲ ಜೀವಾತ್ಮಗಳಲ್ಲಿ ಲೇಸನ್ನೇ ಬಯಸಿ ಶ್ರೀಮಠದ ಬೆಳವಣಿಗೆಗೆ ಸತತ ಕಾರ್ಯನಿರ್ವಹಿಸಿದ ಗುರುಗಳ ಸೇವೆ ಮರೆಯುವಂತಿಲ್ಲ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀಮಠದ ಉತ್ತರಾಧಿಕಾರಿ ಮಲ್ಲಿಕಾರ್ಜುನ ಶ್ರೀಗಳು ಮಾತನಾಡಿ, ಭಕ್ತರಲ್ಲಿ ಶ್ರೀಮಠದ ಬಗ್ಗೆ ಆದರ-ಅಭಿಮಾನ ಇರಬೇಕು. ನಮ್ಮ ಮಠವೆಂಬ ಗೌರವದಿಂದ ಶ್ರೀಮಠದ ಸರ್ವ ಕಾರ್ಯದಲ್ಲಿ ಭಾಗಿಯಾಗಬೇಕು ಎಂದರು. ಅತಿಥಿಗಳಾಗಿ ಆಗಮಿಸಿದ್ದ ನರಗುಂದದ ವಿರಕ್ತಮಠದ ಚೆನ್ನಬಸವ ಶ್ರೀಗಳು ಮಾತನಾಡಿ, ಜ. ಅನ್ನದಾನೀಶ್ವರ ಮಠ ಆಶ್ರಯ-ಅರಿವು-ಅನ್ನ ಇವು ಮೂರಕ್ಕೂ ಹೆಸರು ಮಾಡಿದೆ. ಸಾಹಿತ್ಯ, ಶಿಕ್ಷಣ, ಧಾರ್ಮಿಕ ಕ್ಷೇತ್ರದಲ್ಲಿ ಶ್ರೀಮಠ ಮುಂಚೂಣಿಯಲ್ಲಿದೆ. ಪೂಜ್ಯರು ಸಾಹಿತ್ಯ ಕ್ಷೇತ್ರದಲ್ಲಿ ಹೆಸರು ಮಾಡಿದ್ದಾರೆ. ಇಂತಹ ಪೂಜ್ಯರನ್ನು ಪಡೆದಿರುವ ಇಲ್ಲಿಯ ಜನರೇ ಧನ್ಯರು ಎಂದರು. 1 ತಿಂಗಳಿಂದ ಪ್ರವಚ ನಡೆಸಿಕೊಂಡು ಬಂದಿರುವ ವೀರಣ್ಣ ಶಾಸ್ತ್ರಿಗಳನ್ನು, ಸಂಗೀತ ನೀಡಿರುವ ಬಸವರಾಜ ಗವಾಯಿ ಮತ್ತು ತಬಲಾ ಸಾಥ ನೀಡಿದ ನಾಗಭೂಷಣ ಹಿರೇಮಠ ಇವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಮತ್ತು ವಾಣಿಜ್ಯ ರತ್ನ ಪ್ರಶಸ್ತಿ ಪುರಸ್ಕೃತ ಕೊಪ್ಪಳದ ಪ್ರಬಣ್ಣ ಹೆಬ್ಬಾಳ ಮತ್ತು ಶ್ರೀಮಠದ ಕಾಲೇಜು ಕಟ್ಟಡಕ್ಕೆ ದಾನ ನೀಡಿದ ಗಂಗಮ್ಮ ಹೆಬ್ಬಾಳ ಹಾಗೂ ರೇವಣಪ್ಪ ಸಜ್ಜನ ಇವರಿಗೆ ಗುರುರಕ್ಷೆ ನೀಡಲಾಯಿತು. ಕಾರ್ಯಕ್ರಮದಲ್ಲಿ ನಿರಂಜನ ಶ್ರೀಗಳು, ಪ್ರವಚನ ಸಮಿತಿಯ ಅಧ್ಯಕ್ಷ ಎಸ್.ಬಿ. ಹಿರೇಮಠ, ಅಜ್ಜಯ್ಯ ಇಟಗಿಮಠ, ಆರ್.ಆರ್. ಹೆಗ್ಗಡಾಳ, ವಿ.ಸಿ. ಹಂಚಿನಾಳ, ಪ್ರದೀಪ ಗುಡದಪ್ಪನವರ, ಕುಮಾರ ಬನ್ನಿಕೊಪ್ಪ, ಶಂಕ್ರಪ್ಪ ಬಾರಿಕಾಯಿ, ವಿ.ಎಸ್. ಚವಡಿ ಮುಂತಾದವರು ಉಪಸ್ಥಿತರಿದ್ದರು. ಡಾ. ಎಂ.ಬಿ. ಬೆಳವಟಗಿಮಠ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

