ರಾಷ್ಟ್ರ ಪ್ರಶಸ್ತಿಗಾಗಿ ಅರ್ಜಿ ಆಹ್ವಾನ
ಗದಗ: ಗದಗ ಜಿಲ್ಲಾ ವ್ಯಾಪ್ತಿಯಲ್ಲಿನ ಅರ್ಹ ವಿಕಲಚೇತನ ಕ್ರೀಡಾಪಟು (ಇಜಡಡಿ ಖಠ್ಟ್ಠಡಿಡ ಕಿಜ್ಠಡ್ಟಟಿ ಢ್ಝಿಝಿ ಕಿಗಿಉ) ಮತ್ತು ಇಜಡಡಿ ಖಡಿಛಡಿಜ ್ಝಟಿ ಕ್ಠ್ಟಿಟ್ಟಡ್ಝಿಟ್ಜಿ ಊಟಠ್ಟಢಿಜ್ಠಜಟಜಟಿಡಿ ್ಟಜಿ ಕಿಗಿಉಡ ಕ್ಷೇತ್ರಗಳಲ್ಲಿನ ವಿಕಲಚೇತನರಿಗೆ ರಾಷ್ಟ್ರ ಪ್ರಶಸ್ತಿಗಾಗಿ ಅರ್ಜಿ ಆಹ್ವಾನಿಸಿದೆ. ಪ್ರಶಸ್ತಿಗಾಗಿ ಅರ್ಜಿ ಸಲ್ಲಿಸಲು ಬಯಸುವ ಅರ್ಹ ವಿಕಲಚೇತನರು ನಿಗದಿತ ನಮೂನೆ ಭರ್ತಿ ಮಾಡಿ ಸೆ. 10ರೊಳಗೆ ದ್ವಿ ಪ್ರತಿಯಲ್ಲಿ ಸಲ್ಲಿಸಲು ಕೋರಲಾಗಿದೆ. ನಿಗದಿತ ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ವೆಬ್ಸೈಟ್ ಡಿಡಿಠ///ಡ್ಟ್ಛ್ಝಛಟಞ್ಡಡಡ್ಝ್ಛಿಜ.ಟ್ಝ್ಛಿ.್ಝಟಿನ್ನು ಅನುಸರಿಸಲು ಕೋರಲಾಗಿದೆ. ಅವಧಿ ಮೀರಿ ಬಂದ ಹಾಗೂ ಅಪೂರ್ಣ ಪ್ರಸ್ತಾವನೆಗಳನ್ನು ಪರಿಗಣಿಸಲಾಗುವುದಿಲ್ಲ. ಪ್ರಸ್ತಾವನೆಯಲ್ಲಿ ನಿಗದಿತ ಅರ್ಜಿ ನಮೂನೆ, ಅಂಗವಿಕಲ ವ್ಯಕ್ತಿಯ ಪರಿಚಯ ಪತ್ರ (ಬಯೋಡಾಟಾ) ಅಂಗವಿಕಲತೆ ತೋರುವ ಭಾವಚಿತ್ರಗಳು, ಅಂಗವಿಕಲತೆಯ ಪ್ರಮಾಣ ಪತ್ರ, ವಾಸಸ್ಥಳ ಪ್ರಮಾಣ ಪತ್ರ, ಶಿಫಾರಸ್ಸು ಪತ್ರಗಳು, ಕ್ರೀಡಾ ಕ್ಷೇತ್ರದಲ್ಲಿ ಭಾಗವಹಿಸಿದ ಕುರಿತು ಭಾವಚಿತ್ರಗಳು, ಇಲಾಖೆ, ಸಂಘಟನೆಗಳಿಂದ ನೀಡಿದ ಆದೇಶದ ಪ್ರತಿಗಳನ್ನು ದಾಖಲೆಯಲ್ಲಿ ಸಲ್ಲಿಸಬೇಕು ಎಂದು ಪ್ರಕಟಣೆ ತಿಳಿಸಿದೆ.
ನಾಳೆ ಮುಕ್ತ ವಾಲಿಬಾಲ್
ಗದಗ: ತಾಲೂಕಿನ ಕೋಟುಮಚಗಿ ಗ್ರಾಮದ ವಿದ್ಯಾನಗರದ ಗಜಾನನ ಮಹೋತ್ಸವ ಪ್ರಯುಕ್ತ ನವಗ್ರಹ ಗೆಳೆಯರ ಬಳಗದ ವತಿಯಿಂದ ಸೆ. 10ರ ಬೆಳಗ್ಗೆ 9.30ಕ್ಕೆ ಗ್ರಾಮದ ಗ್ರಾಪಂ ಆವರಣದಲ್ಲಿ ಮುಕ್ತ ವಾಲಿಬಾಲ್ ಪಂದ್ಯಾವಳಿ ಹಮ್ಮಿಕೊಳ್ಳಲಾಗಿದೆ. ಪ್ರಥಮ ಬಹುಮಾನ ರು. 5001, ದ್ವಿತೀಯ ಬಹುಮಾನ ರು. 3001, ತೃತೀಯ ಬಹುಮಾನ ರು. 2001 ಗಳಾಗಿದ್ದು, ಪ್ರವೇಶ ಫೀ ರು. 301 ಗಳಾಗಿದೆ. ಭಾಗವಹಿಸುವವರು ಈರಪ್ಪ ಅಬ್ಬಿಗೇರಿ-8497810108, ನಿಸಾರ ಪಾನಶಾಪ್-8497848481, ದುರ್ಗಾಪಾನಶಾಪ್-9164126665 ಇಲ್ಲಿಗೆ ಸಂಪರ್ಕಿಸುವಂತೆ ನವಗ್ರಹ ಗೆಳೆಯರ ಬಳಗದ ಪ್ರಕಟಣೆಯಲ್ಲಿ ತಿಳಿಸಿದೆ.
11ರಂದು ಕೆಡಿಪಿ ಸಭೆ
ಗದಗ: ಜಿಲ್ಲಾ ಪಂಚಾಯಿತಿ ಮಾಸಿಕ ಕೆಡಿಪಿ ಸಭೆ ಜಿಪಂ ಸಭಾಂಗಣದಲ್ಲಿ ಜಿಪಂ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಸೆ. 11ರ ಬೆಳಗ್ಗೆ 11ಕ್ಕೆ ಏರ್ಪಡಿಸಲಾಗಿದೆ ಎಂದು ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಿದ್ದನಗೌಡ ನಾಗರಹಳ್ಳಿ ನಿಧನ
ಮುಂಡರಗಿ: ಪಟ್ಟಣದ ರಡ್ಡಿ ಸಮಾಜದ ಮುಖಂಡ ಹಾಗೂ ನಿವೃತ್ತ ಜೆಸ್ಕಾಂ ನೌಕರ ಸಿದ್ದನಗೌಡ ನಾಗರಹಳ್ಳಿ (65) ಅವರು ಭಾನುವಾರ ನಿಧನರಾದರು. ಮೃತರಿಗೆ ಪತ್ನಿ, ಮೂವರು ಪುತ್ರರು, ಓರ್ವ ಪುತ್ರಿ, ಸಹೋದರರು, ಸೊಸೆಯಂದಿರು, ಮೊಮ್ಮಕ್ಕಳು ಹಾಗೂ ಅಪಾರ ಬಂಧು ಬಳಗ ಇದ್ದಾರೆ.
ಸಂತಾಪ: ಶಾಸಕ ರಾಮಕೃಷ್ಣ ದೊಡ್ಡಮನಿ, ಕರಬಸಪ್ಪ ಹಂಚಿನಾಳ, ಹೇಮಂತಗೌಡ ಪಾಟೀಲ, ರಡ್ಡಿ ಸಮಾಜದ ಅಧ್ಯಕ್ಷ ಡಾ. ಬಿ.ಎಸ್. ಮೇಟಿ, ವೈ.ಎನ್. ಗೌಡರ, ಈಶ್ವರಪ್ಪ ಹಂಚಿನಾಳ ಸಂತಾಪ ಸೂಚಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

