ಗದಗ

ನಾಳೆ ಡಾ. ಪುಟ್ಟರಾಜರ ಸ್ವರಗಾನ ಸ್ಮರಣೋತ್ಸವ

Published On :

ಗದಗ: ಸ್ಥಳೀಯ ಗಾನಯೋಗಿ ಡಾ. ಪುಟ್ಟರಾಜ ಕಲಾ ಸಂಘ ಹಾಗೂ ಗದಗ ಜಿಲ್ಲಾ ಕೃಷಿ ಉಪಕರಣಗಳ ತಯಾರಕರ ಮತ್ತು ವಿತರಕರ ಸಂಘದ ಆಶ್ರಯದಲ್ಲಿ ಲಿಂ. ಡಾ. ಪಂಡಿತ ಪುಟ್ಟರಾಜ ಕವಿ ಗವಾಯಿಗಳವರ ತೃತೀಯ ಸ್ವರಗಾನ ಸ್ಮರಣೋತ್ಸವ ಸೆ. 14ರ ಸಂಜೆ 5.30ಕ್ಕೆ ನಗರದ ವೀರೇಶ್ವರ ಪುಣ್ಯಾಶ್ರಮದಲ್ಲಿ ಜರುಗಲಿದೆ.
ಹೊಸಳ್ಳಿಯ ಜ. ಅಭಿನವ ಬೂದೀಶ್ವರ ಶ್ರೀಗಳು, ನವಲಗುಂದ ಗವಿಮಠದ ಬಸವಲಿಂಗ ಶ್ರೀಗಳು, ಹಾವೇರಿಯ ಹುಕ್ಕೇರಿಮಠದ ಸದಾಶಿವ ಶ್ರೀಗಳು, ಹೂವಿನಶಿಗ್ಲಿಯ ವಿರಕ್ತಮಠದ ಚನ್ನವೀರ ಶ್ರೀಗಳು, ಅಡ್ನೂರ ದಾಸೋಹಮಠದ ಪಂಚಾಕ್ಷರ ಶಿವಾಚಾರ್ಯ ಶ್ರೀಗಳು, ಬಳಗಾನೂರಿನ ಶಿವಶಾಂತವೀರ ಶರಣರು, ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜನವರು ಕಾರ್ಯಕ್ರಮದ ಸಾನ್ನಿಧ್ಯ ವಹಿಸುವರು. ಬಿಎಸ್‌ಆರ್ ಕಾಂಗ್ರೆಸ್ ಸಂಸ್ಥಾಪಕ ಅಧ್ಯಕ್ಷ ಬಿ.ಶ್ರೀರಾಮುಲು ಉದ್ಘಾಟಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಅಧ್ಯಕ್ಷತೆ ವಹಿಸುವರು. ವೀರೇಶ್ವರ ಪುಣ್ಯಾಶ್ರಮದ ವ್ಯವಸ್ಥಾಪಕ ಬಸವರಾಜ ಹಿಡ್ಕಿಮಠ ನೇತೃತ್ವ ವಹಿಸುವರು. ಅತಿಥಿಗಳಾಗಿ ಶಾಸಕ ಜಿ.ಎಸ್.ಪಾಟೀಲ, ಮಾಜಿ ಶಾಸಕ ಡಿ.ಆರ್. ಪಾಟೀಲ, ಗದಗ ಜಿಲ್ಲಾ ಕೃಷಿ ಉಪಕರಣಗಳ ತಯಾರಕರ ಮತ್ತು ವಿತರಕರ ಸಂಘದ ಅಧ್ಯಕ್ಷ ಬಿ.ಎಸ್. ಶಶಿಧರ, ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಜಿ.ಎಸ್. ಗಡ್ಡದೇವರಮಠ, ವಿಪ ಮಾಜಿ ಸದಸ್ಯ ಶಿವರಾಜ ಸಜ್ಜನರ, ಮಾಜಿ ಶಾಸಕ ಶ್ರೀಶೈಲಪ್ಪ ಬಿದರೂರ, ಕುಮಾರಸ್ವಾಮಿ ಹಿರೇಮಠ, ಅನಿಲ ಮೆಣಸಿನಕಾಯಿ, ವೀರೇಶ ಕಿತ್ತೂರ, ಜಮಾತೆ ಇಸ್ಲಾಮಿ ಹಿಂದ್‌ನ ಅಧ್ಯಕ್ಷ ಕೆ.ಐ. ಶೇಖ, ಶಂಭುಲಿಂಗಯ್ಯ ಕಲ್ಮಠ, ಸಿದ್ದಲಿಂಗೇಶ ಮೂರಶಿಳ್ಳಿನ, ಚನ್ನಬಸವಗೌಡ್ರ ದೊಡ್ಡಗೌಡ್ರ, ಕೃಷ್ಣಾ ರಾಠೋಡ, ಬಸವಣ್ಣೆಯ್ಯ ಹಿರೇಮಠ ಆಗಮಿಸುವರು.
ಇದೇ ಸಂದರ್ಭದಲ್ಲಿ ಸಾಧು ಸೋಮನಾಥ ಕಠಾರಿ ಅವರು ಬರೆದ ಡಾ. ಪಂ. ಪುಟ್ಟರಾಜ ಗವಾಯೀಶ್ವರರ ಭಕ್ತಿ ಪ್ರದಾನ ನಾಟಕ ಕೃತಿ ಬಿಡುಗಡೆ ನಡೆಯಲಿದೆ. ನಂತರ ಹಲವು ಮಹನಿಯರ ಸನ್ಮಾನ ಕಾರ್ಯಕ್ರಮ ಜರುಗಲಿದೆಂದು ಸಂಘಟಿಕ ಶಿವಲಿಂಗಶಾಸ್ತ್ರೀ ಸಿದ್ದಾಪುರ ಪ್ರಕಟಣೆಯಲ್ಲಿ   ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.