ಗದಗ

ಬೆಳೆಹಾನಿ ಪರಿಹಾರಕ್ಕೆ ಆಗ್ರಹಿಸಿ ಮನವಿ

Published On :

ಕನ್ನಡಪ್ರಭ ವಾರ್ತೆ, ನರಗುಂದ, ಸೆ. 20
ತಾಲೂಕಿನ ರೈತರ ಗೋವಿನ ಜೋಳ, ಬಿ.ಟಿ. ಹತ್ತಿ, ಸೂರ್ಯಕಾಂತಿ ಬೆಳೆಗಳು ಸತತ ಸುರಿಯುತ್ತಿರುವ ಮಳೆಯಿಂದ ಸಂಪೂರ್ಣ ಹಾಳಾಗಿದ್ದು, ಹಾಳಾಗಿರುವ ಬೆಳೆಗಳಿಗೆ ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ತಾಲೂಕು ಹಸಿರು ಸೇನೆ ಅಧ್ಯಕ್ಷ ಬಸವರಾಜ ಸಾಬಳೆ ನೇತೃತ್ವದಲ್ಲಿ ಗುರುವಾರ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.
ಬಸವರಾಜ ಸಾಬಳೆ ಮಾತನಾಡಿ, 2 ವರ್ಷ ಭೀಕರ ಬರಗಾಲದಿಂದ ಈ ಭಾಗದ ರೈತರು ಸಂಕಷ್ಟ ಪರಿಸ್ಥಿತಿ ಎದುರಿಸಿದ್ದಾರೆ. ಮುಂಗಾರಿನಲ್ಲಿ ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ತಾಲೂಕಿನಲ್ಲಿ ಸಮರ್ಪಕ ಬಿತ್ತನೆಯಾಗಿಲ್ಲ. ಹಿಂಗಾರು ಮಳೆ ಪ್ರಾರಂಭದಲ್ಲಿ ಉತ್ತಮವಾಗಿ ಸುರಿದ ಹಿನ್ನೆಲೆಯಲ್ಲಿ ರೈತರು ಬಿತ್ತನೆ ಕಾರ್ಯ ಮಾಡಿದ್ದಾರೆ. ಆದರೆ, ಬಿತ್ತನೆಯಾದ ಕೆಲವೇ ದಿನಗಳಲ್ಲಿ ಎಡೆಬಿಡದೇ ಸುರಿದ ಮಳೆಯಿಂದ ಬಿತ್ತನೆ ಮಾಡಿದ ಬೆಳೆಗಳೆಲ್ಲ ಕೊಳೆತು ಕೈಸೇರದಾಗಿವೆ. ಈ ಹಿಂದೆ ಮಳೆಯಾಗದೇ ರೈತರು ಸಂಕಷ್ಟ ಎದುರುಸಿದರೆ ಈಗ ಹೆಚ್ಚಿನ ಮಳೆಯಾಗಿ ರೈತರು ಸಂಕಷ್ಟ ಅನುಭವಿಸುವಂತಾಗಿದೆ. ಈ ವಿಷಯ ಕಂದಾಯ ಇಲಾಖೆ ಅಧಿಕಾರಿಗಳಿಗೆ ಗೊತ್ತಿದ್ದರೂ ಸಹ ಇಲ್ಲಿಯವರೆಗೂ ಪರಿಶೀಲನೆ ಕಾರ್ಯ ಕೈಗೊಳ್ಳದಿರುವುದು ಖಂಡನಾರ್ಹವಾಗಿದೆ ಎಂದರು.
ಬೆಳೆ ವಿಮೆಗೆ ಆಗ್ರಹ: ಪ್ರಸಕ್ತ ವರ್ಷ ಸತತ ಮಳೆಯಿಂದಾಗಿ ಬೆಳೆದ ಬೆಳೆಗಳೆಲ್ಲ ಕೊಳೆತಿದ್ದು, ಪ್ರತಿ ಎಕೆರೆಗೆ ಸುಮಾರು ರು. 10 ಸಾವಿರ ಗಳಷ್ಟು ನಷ್ಟವಾಗಿದೆ. ಅಲ್ಲದೇ ಕಳೆದ 2012-13ನೇ ಸಾಲಿನ ಹಿಂಗಾರಿ ಬೆಳೆಯ ಬೆಳೆವಿಮೆ ಇಲ್ಲಿಯವರೆಗೂ ಬಂದಿಲ್ಲ. ಕಾರಣ ಇದನ್ನು ಅರಿತುಕೊಂಡು ಅಧಿಕಾರಿಗಳು ಕೂಡಲೇ ಬೆಳೆವಿಮೆ ನೀಡಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಆಕ್ರೋಶ ವ್ಯಕ್ತಪಡಿಸಿದರು. ಮನವಿ ಸ್ವೀಕರಿಸಿದ ಶಿರಸ್ತೇದಾರ ವಿ.ಎಚ್. ವಿರಕ್ತಮಠ ಮಾತನಾಡಿ, ತಾವು ನೀಡಿದ ಮನವಿಯನ್ನು ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ರವಾನಿಸಲಾಗುವುದು ಎಂದರು.
ಈ ಸಂದರ್ಭ ಸಿಪಿಐ ಪ್ರಶಾಂತ ಸಿದ್ದನಗೌಡ್ರ, ವೆಂಕಣ್ಣ ಹೂಲಿ, ಎಸ್.ಬಿ. ಜೋಗಣ್ವವರ, ಪಿ.ಆರ್. ಸಾತನ್ನವರ, ಉಮೇಶ ಲದ್ದಿ, ಸಿ.ಜಿ. ಕೋರಿ, ಎಚ್.ವೈ.ಬಾಚಿ, ರವಿ ಯರಗಟ್ಟಿ, ಆರ್.ಬಿ. ತಳವಾರ, ಅಕಬರಸಾಬ ಅತ್ತಾರ, ವಿ.ಬಿ. ಜೋಗಿ ಮುಂತಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.