ಗದಗ

ನಿವೃತ್ತಿ ವೇತನ ಯೋಜನೆ ವಿಸ್ತರಿಸಿ: ಹೊರಟ್ಟಿ

Published On :

ಗದಗ: 2006 ಏ. 1ರ ಬಳಿಕ ಅನುದಾನಕ್ಕೆ ಒಳಪಟ್ಟ ಹಾಗೂ ನೇಮಕಾತಿ ಹೊಂದಿದ ಅನುದಾನಿತ ಶಿಕ್ಷಣ ಸಂಸ್ಥೆಗಳ ಸಿಬ್ಬಂದಿಗೆ ವಂತಿಗೆ ಆಧಾರಿತ ನಿವೃತ್ತಿ ವೇತನ ಯೋಜನೆ ಬಗ್ಗೆ ಹೊರಡಿಸಿದ ಆದೇಶದಲ್ಲಿ ಸರ್ಕಾರಿ ಶಿಕ್ಷಣ ಸಂಸ್ಥೆಗಳ ಸಿಬ್ಬಂದಿಗೆ ನೀಡಿದ ಸೌಲಭ್ಯಗಳನ್ನು ಅಳವಡಿಸಿ ಆದೇಶ ಹೊರಡಿಸುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮಾಜಿ ಶಿಕ್ಷಣ ಸಚಿವ ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಪತ್ರ ಬರೆದು ಆಗ್ರಹಿಸಿದ್ದಾರೆ.
ರಾಜ್ಯದಲ್ಲಿ 2006 ಏ. 1ರ ಬಳಿಕ ನೇಮಕವಾದ ಎಲ್ಲ ನೌಕರರಿಗೆ ಹೊಸ ವಂತಿಗೆ ಆಧಾರಿತ ನಿವೃತ್ತಿ ವೇತನ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಈ ಕುರಿತು ಸರ್ಕಾರಿ ಯೋಜನೆಯ ಆದೇಶವನ್ನು ಹೊರಡಿಸುವಾಗ 2006 ಏ. 1ರ ಬಳಿಕ ನೇಮಕಗೊಂಡ ಸರ್ಕಾರಿ ನೌಕರರಿಗೆ ನೀಡಿದ ಸೌಲಭ್ಯವನ್ನು ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರಿಗೆ ವಿಸ್ತರಿಸದೇ ಇರುವುದು ನೋವಿನ ಸಂಗತಿ. ಸರ್ಕಾರ ಮೂಲ ವೇತನ ಹಾಗೂ ತುಟ್ಟಿ ಭತ್ಯೆಯ ಶೇ. 10ರಷ್ಟು ಹಣವನ್ನು ಜಮಾ ಮಾಡುತ್ತದೆ.
ಆದರೆ, 2006 ಏ. 1ರ ಅನಂತರ ನೇಮಕಗೊಂಡ ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರಿಗೆ ಬೇರೆ ರೀತಿಯ ವ್ಯವಸ್ಥೆ ಕಲ್ಪಿಸಲಾಗಿದೆ. ಅಂದರೆ ಅನುದಾನಿತ ನೌಕರರು ತಮ್ಮ ಮೂಲವೇತನ ಹಾಗೂ ತುಟ್ಟಿಭತ್ಯೆಯ ಶೇ. 10ರಷ್ಟು ಹಣವನ್ನು ಈ ಯೋಜನೆಯಡಿ ತೊಡಗಿಸಬೇಕು. ಉಳಿದ ಶೇ. 10ರಷ್ಟು ಹಣವನ್ನು ಆಡಳಿತ ಮಂಡಳಿಗಳು ಭರಿಸಬೇಕೆಂಬ ಅವೈಜ್ಞಾನಿಕ ಹಾಗೂ ಕಾರ್ಯ ಸಾಧುವಲ್ಲದ ಆದೇಶ ಹೊರಡಿಸಿದೆ. ಅಲ್ಲದೇ ಈ ಆದೇಶವು ನೈಸರ್ಗಿಕ ನ್ಯಾಯಕ್ಕೆ ವಿರುದ್ಧವಾಗಿದೆ ಎಂದು ಆರೋಪಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.