ಸ್ವಯಂ ಉದ್ಯೋಗ ಜೀವನಕ್ಕೆ ಸೋಪಾನ: ಆನಂದ ಪೋತ್ನೀಸ್
ಕನ್ನಡಪ್ರಭ ವಾರ್ತೆ, ಗದಗ, ಸೆ. 22
ಸ್ವಯಂ ಉದ್ಯೋಗದ ಮೂಲಕ ಜೀವನವನ್ನು ಸುಂದರವಾಗಿ ರೂಪಿಸಿಕೊಳ್ಳಲು ಸಾಧ್ಯವಿದೆ. ಸರ್ಕಾರಿ ಉದ್ಯೋಗಕ್ಕೆ ಬೆನ್ನು ಹತ್ತದೆ ಯೋಜನಾಬದ್ಧತೆ ಅಳವಡಿಸಿಕೊಂಡು ಉದ್ಯಮ ಸ್ಥಾಪಿಸಿದರೆ ನೂರಾರು ಜನರಿಗೆ ಉದ್ಯೋಗದ ಅವಕಾಶ ನೀಡಬಹುದಾಗಿದೆ ಎಂದು ಆನಂದ ಪೋತ್ನೀಸ್ ಅಭಿಪ್ರಾಯಪಟ್ಟರು.
ಅವರು ಜೆ.ಟಿ. ಕಾಲೇಜಿನಲ್ಲಿ ಧಾರವಾಡದ ಕರ್ನಾಟಕ ಉದ್ಯಮಶೀಲತಾ ಕೇಂದ್ರ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಜಿಲ್ಲಾ ಕೈಗಾರಿಕೆ ಕೇಂದ್ರ ಹಾಗೂ ಜ. ತೋಂಟದಾರ್ಯ ಕಾಲೇಜಿನ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಬಿಎ, ಬಿಕಾಂ, ಬಿಬಿಎ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ 3 ದಿನಗಳ ಉದ್ಯಮಶೀಲತಾ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಸದ್ಯ ಭಾರತಕ್ಕೆ 5 ಲಕ್ಷ ಚಾರ್ಟರ್ಡ್ ಅಕೌಂಟಂಟ್ಗಳ ಅಗತ್ಯವಿದೆ. ಆದರೆ, 2 ಲಕ್ಷ ಚಾರ್ಟರ್ಡ್ ಅಕೌಂಟಂಟ್ಗಳು ಮಾತ್ರ ಲಭ್ಯರಿದ್ದಾರೆ. ಕಂಪನಿ ಸೆಕ್ರೆಟರಿ ಕಾಸ್ಟ್ ಅಕೌಂಟಂಟ್ಸ್ಗಳ ಬೇಡಿಕೆ ಅಪಾರವಾಗಿದ್ದು, ಆ ದಿಕ್ಕಿನಲ್ಲಿ ವಿದ್ಯಾರ್ಥಿಗಳು ಗಮನ ಹರಿಸಿ ಸಿಎ, ಕಂಪನಿ ಸೆಕ್ರೆಟರಿ ಕಾಸ್ಟ್ ಅಕೌಂಟಂಟ್ಸ್ ಪದವಿಗಳಲ್ಲಿ ಅಧ್ಯಯನ ಕೈಗೊಂಡರೆ ಉದ್ಯೋಗ ಖಾತರಿಯಾಗಿ ಲಭಿಸುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಎಸ್.ಎಸ್. ಯಂಕಂಚಿ ಮಾತನಾಡಿ, ಯಾವುದೇ ಪದವಿಯ ವಿದ್ಯಾರ್ಥಿಗಳು ಚಾರ್ಟರ್ಡ್ ಅಕೌಂಟಂಟ್(ಸಿಎ) ಪದವಿ ಅಧ್ಯಯನ ಮಾಡಲು ಮುಕ್ತ ಅವಕಾಶವಿದ್ದು ಬಿಎ, ಬಿಕಾಂ, ಬಿಸಿಎ, ಬಿಬಿಎ, ಬಿಎಸ್ಸಿ ವಿದ್ಯಾರ್ಥಿಗಳು ಇದರ ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಸಿಎ ಅಧ್ಯಯನ ಮಾಡಲು ಹೆಚ್ಚಿನ ಹಣದ ಅವಶ್ಯಕತೆಯಿಲ್ಲ. ಇಲ್ಲಿ ಬಹಳ ಮುಖ್ಯವಾಗಿ ಶ್ರದ್ಧೆ, ಆಸಕ್ತಿ ಅವಶ್ಯಕ ಎಂದರು.
ಎಸ್.ವಿ.ಕುಂದಗೋಳ ಉಪಸ್ಥಿತರಿದ್ದರು. 3 ದಿನಗಳ ತರಬೇತಿ ಕಾರ್ಯಕ್ರಮದಲ್ಲಿ 130ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಬಿಬಿಎ ಮಹಾವಿದ್ಯಾಲಯದ ಪ್ರಾಚಾರ್ಯ ಎಂ.ಬಿ. ಚನ್ನಪ್ಪಗೌಡರ ಸ್ವಾಗತಿಸಿದರು. ಗೀತಾ ಕಲ್ಯಾಣಿ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

