ಗದಗ

ರೇಲ್ವೆ ಬೇಡಿಕೆ: ಕೇಂದ್ರ ಸಚಿವ ಖರ್ಗೆ ಜತೆ ಚರ್ಚೆ

Published On :

ಗದಗ: ಹಾವೇರಿ ಲೋಕಸಭಾ ವ್ಯಾಪ್ತಿಯಲ್ಲಿನ ವಿವಿಧ ರೇಲ್ವೆ ಬೇಡಿಕೆಗಳ ಈಡೇರಿಕೆ ಕುರಿತು ಕೇಂದ್ರ ರೇಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಜತೆಗೆ ಸೆ. 27ರಂದು ನವದೆಹಲಿಯಲ್ಲಿ ಚರ್ಚಿಸಲು ಸಮಯ ನಿಗದಿಯಾಗಿದೆ ಎಂದು ಹಾವೇರಿ ಸಂಸದ ಶಿವಕುಮಾರ ಉದಾಸಿ ಹೇಳಿದರು. ಜಿಲ್ಲಾಡಳಿತ ಭವನದಲ್ಲಿ ಬುಧವಾರ ಪ್ರಗತಿ ಪರಿಶೀಲನಾ ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಈ ಕುರಿತು ಸಚಿವರಿಂದ ಈಗಾಗಲೇ ಸಕಾರಾತ್ಮಕ ಪ್ರತಿಕ್ರಿಯೆ ದೊರೆತಿದೆ. ಈ ಭಾಗದ ಜನತೆಯ ಬಹುದಿನದ ಬೇಡಿಕೆಯಾದ ಗದಗ-ವಾಡಿ, ಬ್ಯಾಡಗಿ ಎಕ್ಸ್‌ಪ್ರೆಸ್, ಗದಗ, ಹಾವೇರಿ ನಿಲ್ದಾಣ ಮೇಲ್ದರ್ಜೆಗೇರಿಸುವುದು, ಯಲವಿಗಿ ಮತ್ತು ಬ್ಯಾಡಗಿ ರೇಲ್ವೆ ನಿಲ್ದಾಣಗಳಲ್ಲಿ ಪ್ರಮುಖ ರೈಲುಗಳ ನಿಲುಗಡೆ ಸೇರಿದಂತೆ ಹಲವಾರು ಬೇಡಿಕೆಗಳ ಕುರಿತು ಚರ್ಚೆ ನಡೆಯಲಿದೆ ಎಂದರು. ಈಚೆಗೆ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಜರುಗಿದ ಸಭೆಯಲ್ಲಿ ಗದಗ-ವಾಡಿ ರೇಲ್ವೆ ಮಾರ್ಗದ ಕುರಿತು ಚರ್ಚೆ ನಡೆದಿದೆ ಎಂದರು.
ನೋ ಕಾಮೆಂಟ್ಸ್: ಮುಂಬರುವ ಲೋಕಸಭಾ ಚುನಾವಣೆ ಕುರಿತಂತೆ ಕೆಜೆಪಿ-ಬಿಜೆಪಿ ಹೊಂದಾಣಿಕೆಯ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಅವರು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.  ಯು.ಆರ್. ಅನಂತಮೂರ್ತಿ ನೀಡಿದ ಹೇಳಿಕೆಗೂ ಅವರು ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.
ಪಟ್ಟಭದ್ರ ಹಿತಾಸಕ್ತಿಗಳಿಂದ ಇಲ್ಲ ಸಲ್ಲದ ಆರೋಪ
ಹಾವೇರಿ: ರಾಜಕೀಯವಾಗಿ ಮೂಲೆಗುಂಪು ಮಾಡುವ ಉದ್ದೇಶದಿಂದ ಕೆಲಪಟ್ಟಭದ್ರ ಹಿತಾಸಕ್ತಿಗಳು ತಮ್ಮ ಹಾಗೂ ತಮ್ಮ ಪುತ್ರರ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿವೆ ಎಂದು ಮಾಜಿ ಶಾಸಕ ನೆಹರು ಓಲೇಕಾರ ಪ್ರತಿಕ್ರಿಯಿಸಿದ್ದಾರೆ. ನಗರಸಭೆಯಲ್ಲಿ ಖೊಟ್ಟಿ ದಾಖಲೆ ಸೃಷ್ಟಿಸಿ, ತಾವು ಹಾಗೂ ತಮ್ಮ ಪುತ್ರರು ರು. 5.50 ಲಕ್ಷ ಲಪಟಾಯಿಸಿದ್ದೇವೆ ಎಂಬ ಆರೋಪದಲ್ಲಿ ಸತ್ಯಾಂಶವಿಲ್ಲ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ನಗರಸಭೆ ಕಾಮಗಾರಿಯಲ್ಲಿ ತಾವಾಗಲಿ, ಪುತ್ರರಾಗಲಿ ವ್ಯವಹಾರ ಮಾಡಿಲ್ಲ.  ನಗರಸಭೆಯಿಂದ ಏಕಕಾಲಕ್ಕೆ ಕೋಟಿಗಟ್ಟಲೇ ಹಣ ಪಡೆಯಲು ಸಾಧ್ಯವೇ ಇಲ್ಲ. ತಮ್ಮ ಪುತ್ರರು ರು. 6 ಹಾಗೂ 10 ಲಕ್ಷ ಮೌಲ್ಯದ ಕಾಮಗಾರಿ  ಮಾಡಿದ್ದಾರೆ. ಟೆಂಡರ್ ಪ್ರಕ್ರಿಯೆ ಪಾರದರ್ಶಕವಾಗಿ ನಡೆದಿದೆ. ಹೈಕೋರ್ಟ್ ತಮ್ಮ ಮೇಲಿನ ಆರೋಪಕ್ಕೆ ಸಂಬಂಧಿಸಿದಂತೆ ತಡೆಯಾಜ್ಞೆ ನೀಡಿದೆ ಎಂದೂ ತಿಳಿಸಿದರು. ತಮ್ಮ ಮೇಲಿನ ಪ್ರಕರಣ ಇತ್ಯರ್ಥವಾದ ನಂತರ ಆರೋಪ ಮಾಡಿದವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲಾಗುವುದು. ವಿದ್ಯಾ ಸಂಸ್ಥೆಗೆ ಸಿಎ ಸೈಟ್ ನೀಡಿದ ಪ್ರಕರಣದಲ್ಲಿ ತಮಗೆ ನ್ಯಾಯ ದೊರಕಿದೆ ಎಂದು ಎಂದರು. ಬಾಬುಸಾಬ ಮೋಮಿನಗಾರ, ಜಗದೀಶ ಮಲಗೋಡ, ಸುರೇಶ ಹೊಸಮನಿ, ಶಿವಯೋಗಿ ವನಹಳ್ಳಿ, ಹನುಮಂತಪ್ಪ ದೇವಗೇರಿ, ಚಂದ್ರಹಾಸ ಕ್ಯಾತಣ್ಣನವರ, ಸಾಜೀದಹ್ಮದ ದಾರೂಗಾರ, ರಾಜು ಆನವಟ್ಟಿ  ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.