ರೇಲ್ವೆ ಸಚಿವ ಖರ್ಗೆ ಭೇಟಿಯಾದ ಸಂಸದ ಉದಾಸಿ
ಹಾವೇರಿ: ಸಂಸದ ಶಿವಕುಮಾರ ಉದಾಸಿ ಅವರು ಕೇಂದ್ರ ರೇಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರನ್ನು ಶುಕ್ರವಾರ ನವದೆಹಲಿಯಲ್ಲಿ ಭೇಟಿಯಾಗಿ, ತಮ್ಮ ಕ್ಷೇತ್ರದ ವಿವಿಧ ಬೇಡಿಕೆ ಕುರಿತು ಮನವಿ ಮಾಡಿಕೊಂಡರು.
ಗದಗ-ಹಾವೇರಿ ಹಾಗೂ ಗದಗ-ವಾಡಿ ನೂತನ ರೇಲ್ವೆ ಮಾರ್ಗ ಆರಂಭ, ಧಾರವಾಡ-ಬೆಂಗಳೂರು ಇಂಟರ್ಸಿಟಿ ಸೇರಿದಂತೆ ಹಲವು ಎಕ್ಸ್ಪ್ರೆಸ್ ರೈಲುಗಳಿಗೆ ಯಲವಿಗಿ ಹಾಗೂ ಬ್ಯಾಡಗಿಯಲ್ಲಿ ನಿಲುಗಡೆ ಕಲ್ಪಿಸುವ ಕುರಿತು ಖರ್ಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಬೆಂಗಳೂರು-ದೆಹಲಿ ಸಂಪರ್ಕ ಕ್ರಾಂತಿ ರೈಲಿಗೆ ಹಾವೇರಿಯಲ್ಲಿ ನಿಲುಗಡೆ ಕಲ್ಪಿಸಬೇಕೆಂದೂ ಉದಾಸಿ ಮನವಿ ಮಾಡಿದ್ದಾರೆ. ಗದಗ-ಬಿಜಾಪುರ ಮಧ್ಯೆ ಬೆಳಗ್ಗೆ 6 ಗಂಟೆ ಬಳಿಕ ಮಧ್ಯಾಹ್ನ 2.30ರ ವರೆಗೂ ಯಾವುದೇ ರೈಲುಗಳಿಲ್ಲ. ನೂತನ ರೈಲು ಸೇವೆ ಆರಂಭಿಸಬೇಕೆಂದು ಉದಾಸಿ ಆಗ್ರಹಿಸಿದರು. ಗದಗ-ಹೊಂಬಳ ರಸ್ತೆಗೆ ಹೊಂದಿಕೊಂಡು ರೇಲ್ವೆ ಲೆವೆಲ್ ಕ್ರಾಸಿಂಗ್ (ಎಲ್ಸಿ-32) ಗೇಟನ್ನು ಬಳಸಿ ರೈತರು ಹೊಲಗಳಿಗೆ ಹಾಗೂ ಮೂರು ರುದ್ರಭೂಮಿಗಳಿಗೆ ಗ್ರಾಮಸ್ಥರು ಶವಸಂಸ್ಕಾರಕ್ಕೆ ತೆರಳುತ್ತಿದ್ದಾರೆ. ರೇಲ್ವೆ ಗೇಟ್ ಮುಚ್ಚಿದಾಗ ತೊಂದರೆ ಆಗುತ್ತಿದೆ. ಬ್ಯಾಡಗಿಯ ವಿಶ್ವಪ್ರಸಿದ್ಧ ಮೆಣಸಿನಕಾಯಿ ಮಾರುಕಟ್ಟೆಗೆ ಬರುವವರಿಗೂ ಲೆವೆಲ್ ಕ್ರಾಸಿಂಗ್ 227ರ ಗೇಟ್ನಿಂದ ವಹಿವಾಟಿಗೆ ಅಡ್ಡಿಯಾಗುತ್ತಿದೆ. ಈ ಎಕಡೂ ಕಡೆ ರೇಲ್ವೆ ಮೇಲ್ಸೇತುವೆ ಅಥವಾ ಕೆಳಸೇತುವೆ ನಿರ್ಮಿಸುವಂತೆ ಆಗ್ರಹಿಸಿದ್ದಾರೆ. ಅಲ್ಲದೆ, ಗದಗ, ಹಾವೇರಿ, ರಾಣಿಬೆನ್ನೂರು, ಬ್ಯಾಡಗಿ, ಯಲವಿಗಿ ಹಾಗೂ ದೇವರಗುಡ್ಡ ರೇಲ್ವೆ ನಿಲ್ದಾಣಗಳನ್ನು ಮೇಲ್ದರ್ಜೆಗೆ ಏರಿಸುವಂತೆಯೂ ಒತ್ತಾಯಿಸಿದ್ದಾರೆ. ಗದಗ, ಹಾವೇರಿ, ರಾಣಿಬೆನ್ನೂರು ಹಾಗೂ ಬ್ಯಾಡಗಿ ನಿಲ್ದಾಣದಲ್ಲಿ ಸ್ಥಳ ಕಾಯ್ದಿರಿಸುವ ಮಿತಿಯನ್ನು ಹೆಚ್ಚಿಸುವಂತೆಯೂ ಬೇಡಿಕೆ ಮಂಡಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

