ಗದಗ

ಧರ್ಮದ ಕಡೆ ಸಾಗಲು ಸತ್ಸಂಗ ಅವಶ್ಯ: ನೀಲಮ್ಮತಾಯಿ

Published On :

ಲಕ್ಷ್ಮೇಶ್ವರ: ಮಾನವ ಜನ್ಮ ಸಾರ್ಥಕ ಪಡೆದುಕೊಳ್ಳಬೇಕಾದರೆ ಉತ್ತಮ ಜನರ ಒಡನಾಟ ಅವಶ್ಯ. ಮನುಷ್ಯನು ಧರ್ಮದ ಕಡೆಗೆ ಸಾಗುವಂತಾಗಲು ಅದಕ್ಕೆ ಸತ್ಸಂಗ ಅವಶ್ಯ. ಅಧ್ಯಾತ್ಮ ಎನ್ನುವುದು ತನ್ನನ್ನು ತಾನು ಅರಿಯುವಂತೆ ಮಾಡುವಂತಹ ಶಕ್ತಿ ಹೊಂದಿದೆ ಎಂದು ಗದಗ ಅಧ್ಯಾತ್ಮ ವಿದ್ಯಾಶ್ರಮದ ಶಿವಶರಣೆ ನೀಲಮ್ಮತಾಯಿ ಅಸುಂಡಿ ಅಭಿಪ್ರಾಯಪಟ್ಟರು.
ಅವರು ಪಟ್ಟಣ ಪರ್ವತ ಮಲ್ಲಯ್ಯ ದೇವಸ್ಥಾನದಲ್ಲಿ ಈಚೆಗೆ ಪೂಜ್ಯ ಸಿದ್ಧೇಶ್ವರ ಸತ್ಸಂಗ ಬಳಗದಿಂದ ಲಕ್ಷ್ಮೇಶ್ವರದಲ್ಲಿ ಮನೆ-ಮನೆಯಲ್ಲಿ ನಡೆಯುತ್ತಿರುವ ಸತ್ಸಂಗದ 200ನೇ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು. ಇಂದಿನ ಸಮಾಜದಲ್ಲಿ ದೂರದರ್ಶನ ಮತ್ತು ಚಲನಚಿತ್ರಗಳಿಂದ ಜನರು ಅಧ್ಯಾತ್ಮದಲ್ಲಿ ತೊಡಗಿಕೊಳ್ಳುವುದು ಕಡಿಮೆಯಾಗುತ್ತಿದೆ. ಸತ್ಸಂಗದಿಂದ ನಮ್ಮಲ್ಲಿರುವ ಅನೇಕ ಅಜ್ಞಾನಗಳು ನಿವಾರಣೆಯಾಗಲು ಸಾಧ್ಯ. ಶರಣರ ಅನುಭಾವದಿಂದ ನಾವು ಪರಮಸುಖಿಯಾಗಿರಲು ಸಾಧ್ಯ ಎಂದರು. ಸುಖ ಮತ್ತು ಪರಮ ಸುಖಕ್ಕೆ ವ್ಯತ್ಯಾಸವಿದ್ದು, ಇಂದ್ರಿಯಗಳ ಸುಖ ಸುಖವಲ್ಲ. ನಮ್ಮ ಅಂತರಂಗದಿಂದ ಬರುವ ಸುಖ ಪರಮಸುಖವಾಗಿರುತ್ತದೆ ಎನ್ನುವುದನ್ನು ಎಲ್ಲರೂ ತಿಳಿದುಕೊಳ್ಳಬೇಕಾಗಿದೆ. ಸಮಾಜದ ಜಂಜಾಟದಲ್ಲಿ ಒದ್ದಾಡುತ್ತಿರುವ ನಾವು ನಮ್ಮಲ್ಲಿರುವ ದುಗುಡ, ದುಮ್ಮಾನಗಳನ್ನು ದೂರ ಮಾಡಿಕೊಂಡಾಗ ಶಾಂತಿ ದೊರಕಲು ಸಾಧ್ಯ. ಅದಕ್ಕಾಗಿ ಸತ್ಸಂಗ ಮಾಡುವುದು ಅತ್ಯವಶ್ಯಕ ಎಂದು ಹೇಳಿದರು.
ಎಲ್.ಸಿ. ಲಿಂಬಯ್ಯಸ್ವಾಮಿಮಠ ಅಧ್ಯಕ್ಷತೆ ವಹಿಸಿದ್ದರು. ದೇವಣ್ಣ ಬಳಿಗಾರ, ಬಸವರಾಜ ಕೊಟಗಿ, ಅಜ್ಜಣ್ಣ ಮಹಾಂತಶೆಟ್ಟರ ಆಗಮಿಸಿದ್ದರು. ಪ್ರೇಮಕ್ಕ ಬಿಂಕದಕಟ್ಟಿ ಸ್ವಾಗತಿಸಿದರು. ಚಂದ್ರಣ್ಣ ಮಹಾಜನಶೆಟ್ಟರ ಕಾರ್ಯಕ್ರಮ ನಿರೂಪಿಸಿದರು. ಮಹಾನಂದಾ ಕೊಣ್ಣೂರ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.