ಮಟ್ಕಾ ಬುಕ್ಕಿ ವಿರುದ್ಧ ಗೂಂಡಾ ಪ್ರಕರಣ
ರೋಣ: ಜಿಲ್ಲಾಧಿಕಾರಿ ಆದೇಶದ ಮೇರೆಗೆ ಮಟ್ಕಾ (ಓಸಿ) ಬುಕ್ಕಿಯಾದ ಪಟ್ಟಣದ ಕಲ್ಯಾಣ ನಗರದ ನಿವಾಸಿ ಶಿವಕುಮಾರ (ಶಿವಪುತ್ರಪ್ಪ) ಸೋಮಪ್ಪ ಶೆಟ್ಟರ್ನನ್ನು ಬಂಧಿಸಿ ಗೂಂಡಾ ಪ್ರಕರಣ ದಾಖಲಿಸಿ, ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗಿದೆಂದು ಸಿಪಿಐ ವೆಂಕಟಪ್ಪ ನಾಯಕ ತಿಳಿಸಿದರು.
ಸೋಮವಾರ ಸಂಜೆ ಪಟ್ಟಣದ ಪೋಲಿಸ್ ಠಾಣೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯಲ್ಲಿಯೇ ಇದೊಂದು ವಿಶಿಷ್ಟ ರೀತಿಯ ಪ್ರಕಣವಾಗಿದ್ದು, ಈ ಹಿಂದೆ ಮಟ್ಕಾ ದಂಧೆಕೋರರ ಮೇಲೆ ಗೂಂಡಾ ಕಾಯ್ದೆಯಂತಹ ಪ್ರಕಣಗಳನ್ನು ದಾಖಲಿಸಿರಲಿಲ್ಲ. ಇದೇ ಮೊದಲ ಬಾರಿಗೆ ಜಿಲ್ಲೆಯಲ್ಲಿಯೇ ಮಟ್ಕಾ (ಓಸಿ) ಬುಕ್ಕಿಯಾಗಿದ್ದ ಶಿವಕುಮಾರ ಶೆಟ್ಟರ್ ವಿರುದ್ಧ ಗೂಂಡಾ ಪ್ರಕರಣ ದಾಖಲಿಸಲಾಗಿದೆ. ಈ ವ್ಯಕ್ತಿ 2001ರಿಂದ ಮಟ್ಕಾ ಬುಕ್ಕಿಯಾಗಿದ್ದು, ಇವನ ಮೇಲೆ ಈ ವರೆಗೆ 16 ಪ್ರಕರಣಗಳು ದಾಖಲಾಗಿವೆ. ಇದರಲ್ಲಿ 8 ಪ್ರಕರಣಗಳಿಗೆ ಶಿಕ್ಷೆಯಾಗಿದೆ. ಹೀಗಿದ್ದರೂ ಸುಧಾರಣೆ ಹೊಂದದೇ ತನ್ನ ಹಳೇ ದಂಧೆಯಲ್ಲಿಯೇ ಮುಂದುವರಿದಿದ್ದ. ಈ ವ್ಯಕ್ತಿಯ ಮೇಲೆ ರೋಣ ಠಾಣೆಯಲ್ಲಿ ರೌಡಿ ಶೀಟರ್ ಪ್ರಕರಣ ದಾಖಲಾಗಿದೆ. 4 ತಿಂಗಳಿನಿಂದ ಆತನ ಚಲನವಲನ ಮೇಲೆ ನಿಗಾ ಇಟ್ಟು ಪೂರಕ ಮಾಹಿತಿ ಸಂಗ್ರಹಿಸಲಾಗಿದೆ ಎಂದರು.
ಅಪರೂಪದ ಪ್ರಕರಣ: ಜಿಲ್ಲೆಯಲ್ಲಿಯೇ ಇದೊಂದು ಅಪರೂಪದ ಪ್ರಕರಣವಾಗಿದ್ದು, ಮಟ್ಕಾ ಬುಕ್ಕಿಯಾದ ಶಿವಕುಮಾರ ಶೆಟ್ಟರ್ ಮೇಲೆ ಗೂಂಡಾ ಪ್ರಕರಣ ದಾಖಲಿಸಬೇಕು ಎಂದು ರೋಣ ಸಿಪಿಐ ವೆಂಕಟಪ್ಪ ನಾಯಕ, ಪಿಎಸ್ಐ ಡಿ.ಬಿ. ಪಾಟೀಲ ಅವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಟಿ. ಬಾಲಕೃಷ್ಣ ಅವರ ಮೂಲಕ ಜಿಲ್ಲಾಧಿಕಾರಿಗೆ ಶಿಫಾರಸು ಮಾಡಿದ್ದರು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾಧಿಕಾರಿ ಎನ್.ಎಸ್. ಪ್ರಸನ್ನಕುಮಾರ ಗೂಂಡಾ ಪ್ರಕರಣ ದಾಖಲಿಸಿ ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲು ಆದೇಶಿಸಿದ್ದಾರೆ. ಇದೊಂದು ಜಾಮೀನು ರಹಿತ ಪ್ರಕಣವಾಗಿದೆ ಎಂದು ತಿಳಿಸಿದರು.
ಎಚ್ಚರಿಕೆ ಗಂಟೆ: ಪಿಎಸ್ಐ ಡಿ.ಬಿ. ಪಾಟೀಲ ಮಾತನಾಡಿ, ಇನ್ಮುಂದೆ ತಾಲೂಕಿನಲ್ಲಿ ಯಾವುದೇ ರೀತಿಯ ಸಮಾಜಘಾತುಕ ಚಟುವಟಿಕೆಯಲ್ಲಿ ತೊಡಗಿದವರ ಮೇಲೆ ನಿಗಾ ಇಡಲು ಪೊಲೀಸ್ ತಂಡ ರಚಿಸಿದೆ. ತಪ್ಪಿತಸ್ಥರ ಮೇಲೆ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಜರುಗಿಸಲಾಗುವುದು. ಈ ಮೂಲಕ ಕಳ್ಳರಿಗೆ, ಜೂಜುಕೋರರಿಗೆ, ಮಟ್ಕಾ ದಂಧೆಕೋರರಿಗೆ, ಖದೀಮರಿಗೆ ಎಚ್ಚರಿಕೆ ಗಂಟೆಯಾಗಿದೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

