ಗದಗ

ನೆಹರು ಮನೆತನದ ಆಡಳಿತದಿಂದ ದೇಶ ಕಾಪಾಡಿ

Published On :

ಕನ್ನಡಪ್ರಭ ವಾರ್ತೆ, ನರಗುಂದ, ಏ. 15
ಸ್ವಾತಂತ್ರ್ಯ ದೊರೆತ ಬಳಿಕ ದೇಶವನ್ನು ಕಾಂಗ್ರೆಸ್ ಆಳಿದೆ. ಹೀಗಾಗಿ ದೇಶದ ಅಭಿವೃದ್ಧಿ ಕುಂಠಿತವಾಗಿದೆ. ದೇಶ ಸಮಗ್ರ ಅಭಿವೃದ್ಧಿ ಹೊಂದಬೇಕಾದಲ್ಲಿ ನೆಹರು ಮನೆತನದಿಂದ ದೇಶ ಹೊರತನ್ನಿ ಎಂದು ಮಾಜಿ ಸಚಿವ ಸಿ.ಸಿ. ಪಾಟೀಲ ಹೇಳಿದರು.
ಅವರು ಸೋಮವಾರ ಪಟ್ಟಣದ ಎನ್‌ಎಸ್‌ಟಿ ಮಿಲ್, ಜಮಲಾಪುರ ಬಡಾವಣೆಗಳಲ್ಲಿ ಮನೆ ಮನೆಗೆ ತೆರಳಿ ಬಿಜೆಪಿ ಅಭ್ಯರ್ಥಿ ಪಿ.ಸಿ. ಗದ್ದಿಗೌಡರ ಪರ ಮತ ಯಾಚಿಸಿ, ಬಳಿಕ ಮಾತನಾಡಿದರು. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು 67 ವರ್ಷಗಳಲ್ಲಿ ಕಾಂಗ್ರೆಸ್ ಕೆಟ್ಟ ಆಡಳಿತದಿಂದ ದೇಶವೇ ತಲೆ ತಗ್ಗಿಸುವಂತಾಗಿದೆ. ಇದಕ್ಕೆ ಮೂಲ ಕಾರಣ ಇಂದಿಗೂ ಕಾಂಗ್ರೆಸ್‌ನಲ್ಲಿ ನೆಹರು ಕುಟುಂಬದವರ ಮಾತೆ ಅಂತಿಮವಾಗಿದೆ. ಅವರು ಹೇಳಿದಂತೆ ಉಳಿದ ಕಾಂಗ್ರೆಸ್ ನಾಯಕರು ಕೇಳಿ, ದೇಶದಲ್ಲಿ ಭ್ರಷ್ಟಾಚಾರ, ಭಯೋತ್ಪಾದನೆ, ಬಡತನ, ನಿರುದ್ಯೋಗ, ಸಮಸ್ಯೆ ಸೃಷ್ಟಿಯಾಗುವಂತಾಗಿದೆ. ಇಂತಹ ಪಕ್ಷಕ್ಕೆ ಮತದಾರರು ಈ ಲೋಕಸಭಾ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಿ, ನೆಹರು ಮನೆತನದ ಕಪಿಮುಷ್ಟಿಯಿಂದ ದೇಶವನ್ನು ಹೊರತನ್ನಿ ಎಂದು ಮನವಿ ಮಾಡಿದರು. ವಾಸು ಜೋಗಣ್ಣವರ, ಚಂದ್ರು ಪವಾರ, ಉಮೇಶ ಯಮೋಜಿ, ರುದ್ರಯ್ಯ ಶಿರಂದಮಠ, ಸಂಗಪ್ಪ ಕೆರೂರ, ರವಿ ಪಾಟೀಲ, ಅಜ್ಜು ಪಾಟೀಲ, ಸುನೀಲ್ ಕುಷ್ಟಗಿ, ಶಿದ್ದಪ್ಪ ಮಳಕೆ, ಗೋವಿಂದ ಶಿಂದೆ, ಸಿದ್ದಪ್ಪ, ಅಪ್ಪಣ್ಣ ಕರಮಡಿ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.