ಗುರುವಿನ ಸ್ಮರಣೆಯಿಂದ ಸಕಲ ಕಷ್ಟ ನಿವಾರಣೆ
ಮುಂಡರಗಿ: ವೆಂಕಟಾಪುರ ಅಜ್ಜನವರು ಮುಂಡರಗಿ ಶ್ರೀಮಠವನ್ನು ಶೈಕ್ಷಣಿಕವಾಗಿ ಮತ್ತು ಧಾರ್ಮಿಕವಾಗಿ ಬಹು ಎತ್ತರಕ್ಕೆ ಬೆಳೆಸಿದವರು. ಅಂತಹ ಗುರುವಿನ ಸ್ಮರಣೆ ಮಾಡುವುದು ಸಮಾಜದ ಕರ್ತವ್ಯ. ಗುರುವಿನ ಸ್ಮರಣೆಯಿಂದ ಸಕಲ ಕಷ್ಟಗಳು ದೂರವಾಗುತ್ತವೆ ಎಂದು ಜ. ನಾಡೋಜ ಡಾ. ಅನ್ನದಾನೀಶ್ವರ ಶ್ರೀಗಳು ಹೇಳಿದರು.
ಅವರು ಪಟ್ಟಣದ ಜ. ಅನ್ನದಾನೀಶ್ವರ ಸಂಸ್ಥಾನಮಠದಲ್ಲಿ ಈಚೆಗೆ ಹಮ್ಮಿಕೊಳ್ಳಲಾಗಿದ್ದ ವೆಂಕಟಾಪುರ ಅಜ್ಜನವರ 47ನೇ ಪುಣ್ಯಾರಾಧನೆ ಮತ್ತು ವೈರಾಗ್ಯ ನಿಧಿ ಅಕ್ಕಮಹಾದೇವಿಯ ಜಯಂತಿ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು. ವೆಂಕಟಾಪುರ ಅಜ್ಜನವರು ಮುಂಡರಗಿ ಪೀಠದ ಅಧಿಕಾರವನ್ನು ವಹಿಸಿಕೊಂಡ ನಂತರ ಪ್ರತಿ ಹೆಜ್ಜೆಯಲ್ಲಿ ಜಯ ಕಂಡುಕೊಳ್ಳುತ್ತಾ ಶ್ರೀಮಠವನ್ನು ನಾಡು ಗುರುತಿಸುವಂತೆ ಮಾಡಿದರು ಎಂದರು.
ನಿವೃತ್ತ ಪ್ರಾಚಾರ್ಯ ಎಸ್.ಬಿ.ಕೆ. ಗೌಡರ ಮಾತನಾಡಿ, ದೇವರ ಕರುಣೆ, ತಾಯಿಯ ವಾತ್ಸಲ್ಯ ಮತ್ತು ಗುರುವಿನ ಆಶೀರ್ವಾದ ಈ ಮೂರು ಬಾಳು ಬಂಗಾರವಾಗಲು ಪ್ರತಿಯೊಬ್ಬನಿಗೂ ಬೇಕು. ಅಂತಹ ಗುಣಗಳನ್ನು ಹೊಂದಿದ್ದ ವೆಂಕಟಾಪುರ ಅಜ್ಜನವರು ಭಕ್ತರಿಗೆ ಆಶೀರ್ವಾದ ಮಾಡುವ ಮೂಲಕ ಭಕ್ತರನ್ನು ಉದ್ಧಾರ ಮಾಡಿದವರು ಎಂದರು. ಉಪನ್ಯಾಸಕಿ ಸಾವಿತ್ರಿ ಮುಜಮದಾರ ಅವರು ಅಕ್ಕಮಹಾದೇವಿಯ ಜ್ಞಾನ ಸಂಪತ್ತು ಕುರಿತು ಮಾತನಾಡಿದರು. ಜಡೆ ವಿರಕ್ತಮಠದ ಡಾ. ಮಹಾಂತಸ್ವಾಮಿಗಳು, ಹೊಸರಿತ್ತಿ ಗುದ್ಲೀಶ ಶ್ರೀಗಳು, ವೆಂಕಟಾಪುರ ಅಜ್ಜನವರ ಮತ್ತು ಅಕ್ಕಮಹಾದೇವಿ ಕುರಿತು ಮಾತನಾಡಿದರು. ಬೆಂಗಳೂರು ಜಂಗಮಠದ ನಿಜಗುಣ ಮಹಾಸ್ವಾಮಿಗಳು, ದುಂಡಸಿಯ ಕುಮಾರ ಶ್ರೀಗಳು, ಅಂದಪ್ಪ ಬೆಲ್ಲದ, ಎಸ್.ಸಿ. ಡಂಬಳ, ಶಂಕ್ರಪ್ಪ ಬಾರಿಕಾಯಿ, ಕಾಂತರಾಜ ಹಿರೇಮಠ, ದೇವಪ್ಪ ರಾಮೇನಹಳ್ಳಿ, ಎಸ್.ವಿ. ಚವಡಿ, ಬಸವರಾಜ ಬನ್ನಿಕೊಪ್ಪ, ಎನ್.ಜಿ. ಹಾಲಗಿ, ಎಂ.ಎಸ್. ಶಿವಶೆಟ್ಟರ, ಲಕ್ಷ್ಮೀದೇವಿ ಬೆಳವಟಗಿಮಠ ಮುಂತಾದವರು ಉಪಸ್ಥಿತರಿದ್ದರು. ಲೀಲಾ ಅಕ್ಕೂರ ಸ್ವಾಗತಿಸಿದರು. ಚೇತನಾ ಹೊಸಮಠ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

