ಗ್ರಾಮೀಣ ಪ್ರತಿಭೆ ಪ್ರೋತ್ಸಾಹಿಸಿ: ತಳವಾರ
ರೋಣ: ಗ್ರಾಮೀಣ ಪ್ರದೇಶದಲ್ಲಿನ ಕ್ರೀಡಾಪಟುಗಳಲ್ಲಿ ಆಗಾಧವಾದ ಶಕ್ತಿ, ಸಾಮರ್ಥ್ಯಕ್ಕೆ ವೇದಿಕೆ ಕಲ್ಪಿಸಿ ಪ್ರೋತ್ಸಾಹಿಸಬೇಕು ಎಂದು ಜಿಲ್ಲಾ ಬಿಜೆಪಿ ಎಸ್ಟಿ ಮೋರ್ಚಾ ಅಧ್ಯಕ್ಷ ಬಸವಂತಪ್ಪ ತಳವಾರ ಹೇಳಿದರು.
ಅವರು ಮಂಗಳವಾರ ತಾಲೂಕಿನ ತಳ್ಳಿಹಾಳ ಗ್ರಾಮದಲ್ಲಿ ಕಲ್ಮೇಶ್ವರ ಜಾತ್ರೆ ಹಾಗೂ ಬಸವ ಜಯಂತಿಯ ಅಂಗವಾಗಿ ಡಾ. ಬಾಬು ರಾಜೇಂದ್ರ ಪ್ರಸಾದ ಯುವಕ ಮಂಡಳ ಮತ್ತು ಶರಣ ಬಸವೇಶ್ವರ ಕ್ರಿಕೆಟ್ ಕ್ಲಬ್ ಇವುಗಳ ಆಶ್ರಯದಲ್ಲಿ ಜರುಗಿದ ಹಾರ್ಡ್ ಟೆನ್ನಿಸ್ ನೈನ್- ಎ- ಸೈಡ್ ಕ್ರಿಕೆಟ್ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದರು. ಪಗಡಿ, ಚಿನ್ನಿ ದಾಂಡು, ಕುಂಟಾ ಬಿಲ್ಲೆ, ಚಕ್ರ, ಭಲ್ಲೆ ಎಸೆತ, ಕೆಸರು ಗದ್ದೆ ಓಟ, ಗುಡ್ಡಗಾಡು ಓಟ, ಹಿಂಬರಿಕೆ ಓಟ, ಕಬಡ್ಡಿ, ಖೋಖೋ, ಮರಕೋತಿ ಆಟ, ಕಪ್ಪೆ ನೆಗೆತ, ಚದುರಂಗ ಸೇರಿದಂತೆ ಅನೇಕ ಕ್ರೀಡೆಗಳು ಅಪ್ಪಟ ಗ್ರಾಮೀಣ ಕ್ರೀಡೆಗಳಾಗಿವೆ. ಇವುಗಳನ್ನು ಗ್ರಾಮೀಣರು ಕೊಡುಗೆಯಾಗಿ ನೀಡಿದ್ದಾರೆ. ಇಂದು ಆಧುನಿಕ ಸ್ವರ್ಶದಿಂದ ನಾವಿಂದು ಯಾಂತ್ರಿಕ ಬದುಕಿನತ್ತ ಸಾಗುತ್ತಿದ್ದು, ದೈಹಿಕ ಪರಿಶ್ರಮವಿಲ್ಲದಂತಾಗಿದೆ. ಕ್ರೀಡೆಗಳು ದೈಹಿಕ ಮತ್ತು ಮಾನಸಿಕ ವಿಕಸನಕ್ಕೆ ಸಹಕಾರಿಯಾಗುತ್ತವೆ. ಆದ್ದರಿಂದ ಪ್ರತಿಯೊಬ್ಬರೂ ಕ್ರೀಡೆಗಳಲ್ಲಿ ಭಾಗವಹಿಸುವುದು ಮುಖ್ಯವಾಗಿದೆ ಎಂದರು. ಕ್ರೀಡಾ ತರಬೇತಿದಾರ ಚಂದ್ರಗೌಡ ಪಾಟೀಲ ಮಾತನಾಡಿ, ರಾಜ್ಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಕ್ರಿಕೆಟ್ ಇಂದು ತನ್ನದೆಯಾದ ಛಾಪು ಮೂಡಿಸಿದ್ದು, ಯುವ ಪೀಳಿಗೆಯನ್ನ ಗಣನೀಯ ಸಂಖ್ಯೆಯಲ್ಲಿ ತನ್ನತ್ತ ಸೆಳೆದುಕೊಳ್ಳುತ್ತದೆ. ಕೇವಲ ಕ್ರೀಡೆ ಎಂಬುದು ಕ್ರಿಕೆಟ್ಗೆ ಸೀಮಿತವಾಗದೇ ಇನ್ನುಳಿದ ಕ್ರೀಡೆಗಳತ್ತ ಯುವಕರು ಒಲವು ತೋರಬೇಕು. ಅಂದಾಗ ಎಲ್ಲ ಕ್ರೀಡೆಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸಿದಂತಾಗುತ್ತದೆ. ಆ ದಿಸೆಯಲ್ಲಿ ಯುವಕರ ಪಾತ್ರ ಪ್ರಮುಖವಾಗಿದೆ ಎಂದರು.
ಶಿವನಗೌಡ ಲಿಂಗನಗೌಡ್ರ, ವೀರಪ್ಪ ಮ್ಯಾಗೇರಿ, ಮೈಲಾರಪ್ಪ ಬ್ಯಾಳಿ, ಶರಣಪ್ಪ ಮಾಡಲಗೇರಿ, ಬಸವಂತಪ್ಪ ಹಂಡಿ, ಸಂಗಯ್ಯ ಹಿರೇಮಠ, ಶಿವಯ್ಯ ರುದ್ರಾಪುರಮಠ, ಬಾಳಪ್ಪ ಪೂಜಾರ, ರುದ್ರಪ್ಪ ಹಂಡಿ, ಶೇಖರಯ್ಯ ರೇಣುಕಮಠ, ಹನುಮಂತಪ್ಪ ಬೊಮ್ಮಣ್ಣವರ, ನಿಂಗಯ್ಯ ರುದ್ರಾಪುರಮಠ, ಸಂಗಯ್ಯ ಯಾವಗಲ್ಲಮಠ ಮುಂತಾದವರು ಹಾಜರಿದ್ದರು. ಸಂಗಯ್ಯ ರುದ್ರಾಪುರಮಠ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

