ಗದಗ

ಸಂತೆ ಮಾರುಕಟ್ಟೆಯಲ್ಲಿ ಕಾನೂನು ಅರಿವು ಜಾಥಾ

Published On :

ಕನ್ನಡಪ್ರಭ ವಾರ್ತೆ, ರೋಣ, ಏ. 24
ತಾಲೂಕು ಕಾನೂನು ಸೇವೆಗಳ ಸಮಿತಿ, ತಾಲೂಕು ನ್ಯಾಯವಾದಿಗಳ ಸಂಘ ಮತ್ತು ಸರ್ಕಾರಿ ಸಹಾಯಕ ಅಭಿಯೋಜಕ ಇಲಾಖೆ ಇವರುಗಳ ಆಶ್ರಯದಲ್ಲಿ ಸಾರ್ವಜನಿಕರಿಗಾಗಿ ಕಾನೂನು ಅರಿವು-ನೆರವು ಜಾಗೃತ ಜಾಥಾ ಗುರವಾರ ಪಟ್ಟಣದಲ್ಲಿ ನಡೆದ ಸಂತೆ ಮಾರುಕಟ್ಟೆಗೆ ತೆರಳಿ ಅಲ್ಲಿನ ಕಾಯಿಪಲ್ಯೆ ವ್ಯಾಪಾರಸ್ಥರಿಗೆ ಮತ್ತು ಗ್ರಾಹಕರಿಗೆ ಕಾನೂನು ಕುರಿತು ಅರಿವು ಮೂಡಿಸುವ ಸಾರ್ವಜನಿಕರಿಗಾಗಿ ಕಾನೂನು ಕುರಿತಾದ ಕಿರು ಮಾಹಿತಿ ಪುಸ್ತಕ ವಿತರಿಸಲಾಯಿತು.
ಬಳಿಕ ನಡೆದ ಕಾರ್ಯಕ್ರಮದಲ್ಲಿ ಸರ್ಕಾರಿ ಸಹಾಯಕ ಅಭಿಯೋಜಕ ನಾರಾಯಣ ಆರಿ ಮಾತನಾಡಿ, ಕಾನೂನಿನಲ್ಲಿ ಪ್ರತಿಯೊಬ್ಬರಿಗೂ ಸ್ವತಂತ್ರವಾಗಿ ಜೀವಿಸುವ ಹಕ್ಕನ್ನು ಕಲ್ಪಿಸಲಾಗಿದೆ. ಜಾತಿ, ಮತ, ಪಂಥಗಳಲ್ಲಿನ ತಾರತಮ್ಯತೆ ಹೋಗಲಾಡಿಸಿ ಸರ್ವರೂ ಸಮಾನತೆಯಿಂದ ಬಾಳುವ ನಿಯಮ ಕಾನೂನಿನಲ್ಲಿದೆ. ಕಾನೂನಿನಲ್ಲಿ ಯಾವ ಯಾವ ವಿಷಯಗಳು ಅಡಕವಾಗಿವೆ. ಕಾನೂನು ಎಂದರೆ ಏನು ಎಂಬ ಇತ್ಯಾದಿ ವಿಷಯಗಳ ಕುರಿತು ಜನ ಸಾಮಾನ್ಯರಿಗೆ ತಿಳಿಸುವ ಮಹತ್ವದ ಯೋಜನೆಯನ್ನು ರಾಜ್ಯ ಕಾನೂನು ಪ್ರಾಧಿಕಾರ ವಿನೂತನ ರೀತಿಯಲ್ಲಿ ಹಮ್ಮಿಕೊಂಡಿದೆ. ಪ್ರತಿಯೊಬ್ಬರೂ ಕಾನೂನು ಜ್ಞಾನ ಹೊಂದಿ, ಅದನ್ನ ಸಮರ್ಪಕವಾಗಿ ಪಾಲಿಸಬೇಕು. ಅಂದಾಗ ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆ ನೆಲೆಯೂರುತ್ತದೆ ಎಂದರು. ನ್ಯಾಯವಾದಿ ವಿ.ಡಿ. ಪವಾಸ್ಕರ ಮಾತನಾಡಿ, ಜನಸಾಮಾನ್ಯರಿಗೂ ಕಾನೂನು ಕುರಿತು ಅರಿವು ಮೂಡಿಸುವದರ ಜತೆಗೆ ಕಾನೂನು ಸೇವಾ ಪ್ರಾಧಿಕಾರವು ವಾರ್ಷಿಕ ರು. 1.25 ಲಕ್ಷ ವರಮಾನಕ್ಕಿಂತ ಕಡಿಮೆ ಇರವು (ಬಡತನ ರೇಖೆ) ಇರುವ ಕುಟುಂಬಗಳ ವ್ಯಾಜ್ಯಗಳನ್ನು ಉಚಿತವಾಗಿ ಪರಿಹರಿಸುವ ನಿಟ್ಟಿನಲ್ಲಿ ಸಮಿತಿ ಕಾನೂನು ಸಲಹೆ ನೀಡುತ್ತಿದೆ. ಅಲ್ಲದೆ ಬಹಳ ದಿನಗಳಿಂದ ಇತ್ಯರ್ಥಗೊಳ್ಳದೇ ಹಾಗೆಯೇ ಉಳಿದಿರುವ ವ್ಯಾಜ್ಯಗಳನ್ನು ವಾದಿ ಮತ್ತು ಪ್ರತಿವಾದಿಗಳಿಬ್ಬರಿಗೆ ಕಾನೂನು ತಿಳಿವಳಿಕೆ ಹೇಳಿ ಪರಸ್ಪರ ರಾಜಿ ಸಂಧಾನದ ಮೂಲಕ ವ್ಯಾಜ್ಯಗಳನ್ನು ಪರಿಸುವಲ್ಲಿ ಜನತಾ ನ್ಯಾಯಾಲಯವನ್ನು ವಿಶೇಷ ಪಾತ್ರ ವಹಿಸುತ್ತಿದೆ. ಈಗಾಗಲೇ ಇದರಡಿಯಲ್ಲಿ ಅನೇಕ ಪ್ರಕರಣಗಳು ಇತ್ಯರ್ಥಗೊಂಡಿವೆ. ಸಮಾಜದಲ್ಲಿ ಸಾಮರಸ್ಯತೆ, ಸಹೋದರತೆಯನ್ನು ಮೂಡಿಸಿ ಸ್ವಾಸ್ತ್ಯತೆ ಕಾಪಾಡುವುದೇ ಕಾನೂನಿನ ಉದ್ದೇಶವಾಗಿದೆ ಎಂದರು. ತಾಲೂಕು ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಸ್.ಎಂ. ಡಂಬಳ ಮಾತನಾಡಿ, ಕಾನೂನು ಪಾಲನೆ ಮುಖ್ಯವಾಗಿದೆ. ಪ್ರತಿಯೊಬ್ಬರೂ  ನ್ಯಾಯಯುತವಾಗಿ ಕಾರ್ಯ ನಿರ್ವಹಿಸುವಲ್ಲಿ ಕಾನೂನು ಪರಿಕಲ್ಪನೆ ಅತಿ ಮುಖ್ಯವಾಗಿದೆ ಎಂದರು. ನ್ಯಾಯವಾದಿಗಳ ಸಂಘದ ಕಾರ್ಯದರ್ಶಿ ಆರ್.ಎಸ್. ಮುಗಳಿ, ಎಫ್.ಎಚ್. ಕಾಡದೇವರಮಠ, ವೈ.ಡಿ. ನದಾಫ, ಜಿ.ಆರ್. ಯಳವತ್ತಿ, ಎಲ್.ಎನ್. ಬಾಣದ, ರಾಜೇಂದ್ರ ಉದ್ದಾರ ಇತರರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.