ಗಾಳಿ, ಮಳೆ: ನಾಲ್ಕು ಮನೆ ಜಖಂ, ಮೂವರಿಗೆ ಗಾಯ
ರೋಣ: ರಭಸದಿಂದ ಬಿಸಿದ ಗಾಳಿ, ಮಳೆಗೆ ನಾಲ್ಕು ಮನೆಯ ಮೇಲ್ಛಾವಣಿಯ ತಗಡು ಕಿತ್ತು ಹೋಗಿ ಜಖಂಗೊಂಡಿದ್ದು, ಮನೆಯಲ್ಲಿದ್ದ ಮೂವರಿಗೆ ಗಾಯಗಳಾದ ಘಟನೆ ತಾಲೂಕಿನ ಮುಗಳಿ ಗ್ರಾಮದಲ್ಲಿ ಶುಕ್ರವಾರ ಸಾಯಂಕಾಲ ಸಂಭವಿಸಿದೆ.
ಗಾಯಗೊಂಡವರನ್ನು ಮುಗಳಿ ಗ್ರಾಮದ ಯಮನವ್ವ ಹಿರೇಮನಿ(40), ಯಲ್ಲವ್ವ ಹಿರೇಮನಿ(25) ಮತ್ತು ಮುದಕವ್ವ ಹಿರೇಮನಿ(19) ಎಂದು ಗುರುತಿಸಲಾಗಿದೆ. ಗಾಯಾಳುಗಳನ್ನು ತಹಸೀಲ್ದಾರ್ ವಾಹನದ ಮೂಲಕ ಪಟ್ಟಣದ ಭಾರತರತ್ನ ಡಾ. ಭೀಮಸೇನ ಜೋಶಿ ಸಾರ್ವಜನಿಕ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಲಾಯಿತು. ಇದರಲ್ಲಿ ಯಮನವ್ವ ಹಿರೇಮನಿ ಎಂಬುವರಿಗೆ ತೀವ್ರ ಗಾಯಗಳಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಗದಗ ಜಿಲ್ಲಾ ಆಸ್ಪತ್ರೆಗೆ ಕಳುಹಿಸಲಾಯಿತು. ಮನೆ ಮೇಲಿನ ತಗಡು ಜಖಂ: ರಭಸದಿಂದ ಬಿಸಿದ ಗಾಳಿ ಮತ್ತು ಮಳೆಯ ಪರಿಣಾಮವಾಗಿ ತಾಲೂಕಿನ ಮುಗಳಿ ಗ್ರಾಮದ ಅಯ್ಯಪ್ಪ ದಂಡಿನ, ಯಲ್ಲವ್ವ ದಂಡಿನ, ಮಾಯಪ್ಪ ಹಿರೇಮನಿ ಮತ್ತು ಶರಣಪ್ಪ ಹಿರೇಮನಿ ಎಂಬುವರ ಮನೆಗಳ ಮೇಲ್ಛಾವಣಿಗೆ ಹೊದಿಸಲಾಗಿದ್ದ ತಗಡುಗಳು ಹಾರಿ ಹೋಗಿದ್ದು, ಎಲ್ಲೆಂದರಲ್ಲಿ ಮುರಿದು ತುಂಡುಗಳಾಗಿ ಬಿದ್ದಿವೆ. ಈ ತಗಡುಗಳಿಂದಲೇ ಮೂವರಿಗೆ ಗಾಯಗಳಾಗಿವೆ ಎಂದು ಸ್ಥಳಕ್ಕೆ ಭೇಟಿ ನೀಡಿದ್ದ ಗ್ರಾಮ ಲೆಕ್ಕಾಧಿಕಾರಿ ಶರಣಪ್ಪ ಹಿರೇಮನಿ 'ಕನ್ನಡಪ್ರಭ'ಕ್ಕೆ ತಿಳಿಸಿದರು.
ಅಲ್ಲಲ್ಲಿ ಗುಡುಗು ಮಿಂಚು ಸಹಿತ ಮಳೆ: ತಾಲೂಕಿನ ಬಾಸಲಾಪುರ, ಕೊತಬಾಳ, ಮು ಗಳಿ, ಇಟಗಿ, ಹೊಸಹಳ್ಳಿ, ಜಿಗಳೂರ, ರೋಣ ಪಟ್ಟಣ, ಅರಹುಣಸಿ, ಮುದ್ನಗುಡಿ ಸೇರಿದಂತೆ ಹಲವಡೆ ಶುಕ್ರವಾರ ಸಾಯಂಕಾಲ ರಭಸವಾಗಿ ಗಾಳಿ ಬಿಸಿದ್ದು, ಗುಡುಗು, ಮಿಂಚು ಸಹಿತ ಸುಮಾರು ಅರ್ಧ ಗಂಟೆ ಮಳೆಯಾಗಿದೆ. ಇಟಗಿ ಗ್ರಾಮದ ಭೀಮಾಂಭಿಕಾದೇವಿ ದೇವಸ್ಥಾನ ಮುಂದೆ ಹಾಕಲಾಗಿದ್ದ ಮೇಲ್ವದಿಕೆಯ ತಗಡುಗಳು ರಭಸವಾಗಿ ಬಿಸಿದ ಗಾಳಿಗೆ ಎಲ್ಲೆಂದರಲ್ಲಿ ಕಿತ್ತು ಹೋಗಿ ಬಿದ್ದಿವೆ. ಕೆಲ ಗ್ರಾಮಗಳಲ್ಲಿ ತಗಡಿನ ಮನೆಗಳಿಗೆ ಹಾನಿಯುಂಟಾಗಿದೆ ಎಂದು ತಿಳಿದು ಬಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

