ಸಾಧನೆಗೆ ಪರಿಶ್ರಮ ಮುಖ್ಯ: ವರಗಪ್ಪನವರ್
ರೋಣ: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕಠಿಣ ಸವಾಲುಗಳನ್ನು ದಿಟ್ಟವಾಗಿ ಎದುರಿಸಿ, ಸತತ ಅಧ್ಯಯನಶೀಲರಾಗಿ ಪರಿಶ್ರಮಿಸಿದಲ್ಲಿ ಸಾಧನೆಯ ಹಾದಿ ಸುಗಮ ಎಂದು ಸಮಾಜ ಕಲ್ಯಾಣ ಇಲಾಖೆ ಜಿಲ್ಲಾಧಿಕಾರಿ ಪ್ರಶಾಂತ ವರಗಪ್ಪನವರ್ ಹೇಳಿದರು.
ಅವರು ಶುಕ್ರವಾರ ಪಟ್ಟಣ ಬಸನಗೌಡ ಗಿರಡ್ಡಿ ಪ್ರಥಮ ದರ್ಜೆ ಕಾಲೇಜಿನಲ್ಲಿ 2013-14ನೇ ಸಾಲಿನ ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳ ಸಮಾರೋಪ ಸಮಾರಂಭ ಹಾಗೂ ಬಿಎ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಮತ್ತು ದೀಪದಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ವಿದ್ಯಾರ್ಥಿ ಜೀವನ ಅತ್ಯಂತ ಅಮೂಲ್ಯವಾಗಿದ್ದು, ಆ ದಿಸೆಯಿಂದಲೇ ನಮ್ಮಲ್ಲಿರುವ ಪ್ರತಿಭೆ, ಸಾಮರ್ಥ್ಯಕ್ಕನುಗುಣವಾಗಿ ಅಧ್ಯ ಯನ ಕ್ಷೇತ್ರವನ್ನು ಆಯ್ಕೆಮಾಡಿಕೊಂಡು ಸಾಧನೆಯತ್ತ ಮುನ್ನುಗ್ಗಬೇಕು. ಒಂದೇ ಕ್ಷೇತ್ರಕ್ಕೆ ಸೀಮಿತರಾಗದೇ ಬಹುಮುಖ ವ್ಯಕ್ತಿತ್ವವನ್ನು ಹೊಂದುವಲ್ಲಿ ಶ್ರಮ ಮತ್ತು ಅಧ್ಯಯನಶೀಲತೆ ಅತೀ ಮುಖ್ಯ ಎಂದರು. ತಹಸೀಲ್ದಾರ್ ಎ.ಜಿ. ಪಂಡಿತ, ಗದಗ ಪ್ರಥಮ ದರ್ಜೆ ಸರ್ಕಾರಿ ಕಾಲೇಜ್ ಸಹಾಯಕ ಪ್ರಾಧ್ಯಾಪಕ ಅಪ್ಪಣ್ಣ.ಎನ್. ಹಂಜೆ, ಡಾ. ಎಂ.ವೈ. ಜಟ್ಟೆಣ್ಣವರ ಅಧ್ಯಕ್ಷತೆ ವಹಿಸಿದ್ದರು. ಶಿವು ಹುಲ್ಲೂರ, ಕೆ.ಬಿ. ರಡ್ಡೇರ, ಪುರಸಭೆ ಸದಸ್ಯ ಶಫೀಕ ಮೂಗನೂರ, ಎ.ಎಂ. ಮಮ್ಮಟಗೇರಿ, ಮಲ್ಲಿಕಾರ್ಜುನ ರಾಯನಗೌಡ್ರ, ಹಿರಿಯಪ್ಪ ಹಲಗಿ, ಎಸ್.ಎನ್. ಸುರಕೋಡ, ಆರ್.ಎನ್. ಉಮಚಗಿ, ಶಬ್ಬೀರ ಖಾಜಿ, ಎಫ್.ಎಸ್. ಅಂಗಡಿ, ವಿ.ವೈ. ಬ್ಯಾಳಿ, ವಿದ್ಯಾರ್ಥಿ ಪ್ರತಿನಿಧಿಗಳಾದ ಜಗದೀಶ ಕೋಟಣ್ಣವರ, ಜಯಶ್ರೀ ರಡ್ಡೇರ ಮುಂತಾದವರು ಉಪಸ್ಥಿತರಿದ್ದರು. ಶಿವು ಜಗಾಪುರ ನಿರ್ವಹಿಸಿದರು. ಉಪನ್ಯಾಸಕಿ ಆರ್.ಎಂ. ಬಾರಕೇರ ವಾರ್ಷಿಕ ವರದಿ ವಾಚಿಸಿದರು. ಎಚ್.ಎಚ್. ಕುರಿ ಸ್ವಾಗತಿಸಿದರು. ಎಲ್.ಎಂ.ರಾಠೋಡ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

