ಗದಗ

ಸಿಡಿಲಿಗೆ ಇಬ್ಬರ ಸಾವು, ಇಬ್ಬರಿಗೆ ಗಂಭೀರ ಗಾಯ

Published On :

ಗದಗ: ಸಿಡಿಲಿನ ಅಬ್ಬರ ಇಬ್ಬರನ್ನು ಬಲಿ ಪಡೆದಿದ್ದು, ಇನ್ನಿಬ್ಬರಿಗೆ ಗಂಭೀರವಾಗಿ ಗಾಯಗೊಂಡಿರುವ ಘಟನೆ ಶನಿವಾರ ಜರುಗಿದೆ. ಶಿರಹಟ್ಟಿ ತಾಲೂಕಿನ ಕೊಗನೂರಲ್ಲಿ ಸಿಡಿಲು ಬಡಿದು ವ್ಯಕ್ತಿಯೋರ್ವ ಮೃತಪಟ್ಟಿದ್ದಾನೆ. ತಂಗೊಡದ ಮೂವರಿಗೆ ಸಿಡಿಲು ಬಡಿದಿದೆ. ಇದರಲ್ಲಿ ಓರ್ವ ಮೃತಪಟ್ಟಿದ್ದು, ಇರ್ವ ರಿಗೆ ಗಾಯಗಳಾಗಿವೆ. ಬಾಬುಸಾಬ್ ದಾವಲಸಾಬ್ ಚವರಿ(50) ಮೃತ ದುರ್ದೈವಿ. ರವಿ ಉಳವಪ್ಪ ಮೇಲಿನಮನಿ ಹಾಗೂ ಚನ್ನಪ್ಪ ತಿರಕಪ್ಪ ಒಕ್ಕಲರಗೆ ಗಾಯವಾಗಿದೆ. ತಂಗೋಡದಿಂದ ಕೊಗನೂರಿಗೆ ಹೋಗಿದ್ದಾಗ ಈ ಘಟನೆ ಜರುಗಿದೆ. ಶಿರಹಟ್ಟಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮತ್ತು ರೋಣ ತಾಲೂಕಿನ ಹುನಗುಂಡಿ ಗ್ರಾಮದ ಅಣ್ಣಪ್ಪ ಸೋಮನಕಟ್ಟಿ(14) ಹೊಲದಿಂದ ಬರುವಾಗ ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ. ಶಿರಹಟ್ಟಿ ತಾಲೂಕಿನ ಕೂಗನೂರು ಸುತ್ತಮುತ್ತಲು ಹಾಗೂ ರೋಣ ತಾಲೂಕಿನ ಹಿರೇಹಾಳ-ಕೊತಬಾಳ ಗ್ರಾಮಗಳ ರಸ್ತೆಯ ಮಾರ್ಗಮಧ್ಯೆ ಮರ ಉರುಳಿ ರಸ್ತೆ ಸಂಚಾರಕ್ಕೆ ಅಡತಡೆಯುಂಟಾಯಿತು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.