ಗದಗ

ಬಾಬಾ ರಾಮದೇವ ಹೇಳಿಕೆ ಖಂಡಿಸಿ ಪ್ರತಿಭಟನೆ

Published On :

ಗದಗ: ದಲಿತರ ಕುರಿತು ಬಾಬಾ ರಾಮದೇವ ನೀಡಿರುವ ಹೇಳಿಕೆ ಖಂಡಿಸಿ ಜಿಲ್ಲಾ ಜೈಭೀಮ ಸಂಘಟನೆ ಪದಾಧಿಕಾರಿಗಳು ಶನಿವಾರ ನಗರದ ಗಾಂಧಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಂಘಟನೆಯ ಪದಾಧಿಕಾರಿಗಳು ಬಾಬಾ ರಾಮದೇವ ಅನಗತ್ಯವಾಗಿ ದಲಿತರ ಬಗ್ಗೆ ಮಾತನಾಡಿದರು. ಸಂಘಟನೆಯ ಅಧ್ಯಕ್ಷ ಗಣೇಶ ಹುಬ್ಬಳ್ಳಿ, ರಾಘವೇಂದ್ರ ಪರಾಪುರ, ಮಂಜುನಾಥ ತೌಜುಲ್, ಪರಶುರಾಮ ಸಂಗಾಪುರ, ದೀಪಕ್ ಕಲ್ಮನಿ, ಓಬಳೇಶ ಯಶವಂತಪುರ, ವಿರೂಪಾಕ್ಷಿ ಸಂಗಾಪುರ, ಪ್ರೇಮ್ ಹುಬ್ಬಳ್ಳಿ, ಮಂಜುನಾಥ ಪರಾಪುರ, ಇಸ್ಮಾಯಿಲ್ ಕಲಾದಗಿ, ರಾಷ್ಟ್ರೀನ್ ಜೋಷೆಫ್, ಹರೀಶ ಪೆನಗೊಂಡ, ಹೇಮಂತ ಹುಬ್ಬಳ್ಳಿ, ಶಂಕರ ಹುಬ್ಬಳ್ಳಿ, ಮಂಜುನಾಥ ಕಲ್ಲೂರ, ಪರಶುರಾಮ್ ಕಟ್ಟಿಮನಿ ಪಾಲ್ಗೊಂಡಿದ್ದರು.


ಕೀಟಜನ್ಯ ರೋಗ ಅರಿವಿರಲಿ: ಡಾ. ಎ.ಡಿ. ಸಾಮುದ್ರಿ


ನರೇಗಲ್ಲ:  ಪರಿಸರ ಸ್ವಚ್ಛತೆಯಿಂದ ಕೀಟಜನ್ಯ ರೋಗಗಳಿಂದ ವಿಮುಕ್ತರಾಗಲು ಸಾಧ್ಯ ಎಂದು ನರೇಗಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯಾಧಿಕಾರಿ ಡಾ. ಎ.ಡಿ. ಸಾಮುದ್ರಿ ಹೇಳಿದರು. ಈಚೆಗೆ ಅನ್ನದಾನೇಶ್ವರ ಪಪೂ ಕಾಲೇಜಿನಲ್ಲಿ ವಿಶ್ವ ಆರೋಗ್ಯ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಕೀಟಜನ್ಯ ರೋಗಗಳ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು. 2006ರಿಂದ ಡೆಂಘೀ, ಚಿಕೂನ್ ಗುನ್ಯಾ ರೋಗ ಜನತೆಗೆ ಕಾಡುತ್ತಿದೆ. ದೇಶದ ಮುಕ್ಕಾಲು ಭಾಗದ ಜನ ಸೊಳ್ಳೆಗಳಿಂದ ತೊಂದರೆ ಅನುಭವಿಸುತ್ತಿದ್ದಾರೆ. ಜಗತ್ತಿನಲ್ಲಿ 3 ಸಾವಿರ ಪ್ರಭೇದದ ಸೊಳ್ಳೆಗಳಿದ್ದು ಭಾರತದಲ್ಲಿ 300 ಜಾತಿ ಸೊಳ್ಳೆಗಳಿವೆ. ಸೊಳ್ಳೆಗಳ ನಿರ್ಮೂಲನೆಯಿಂದ ಜನ ನೆಮ್ಮದಿಯಿಂದ ಬದುಕಲು ಸಾಧ್ಯ ಎಂದರು. ಜಕ್ಕಲಿ ಕಿರಿಯ ಆರೋಗ್ಯ ಕೇಂದ್ರದ ಎಸ್.ಎಫ್. ಅಂಗಡಿ, ಎಸ್.ಎನ್. ಪಾಟೀಲ ಮಾತನಾಡಿದರು. ಜಿ.ಎಸ್. ಮಠಪತಿ ಅಧ್ಯಕ್ಷತೆ ವಹಿಸಿದ್ದರು. ಎಂ.ಎ. ಚಾಲಾಮತ್ ನಿರೂಪಿಸಿದರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.