ಭಾರತೀಯ ಸಂಸ್ಕೃತಿ ರೂಢಿಸಿಕೊಳ್ಳಿ: ವಿರೂಪಾಕ್ಷಪ್ಪ
ಗದಗ: ಮಕ್ಕಳಿಗೆ ಭಾರತೀಯ ಸಂಸ್ಕೃತಿ ಮತ್ತು ಸಂಸ್ಕಾರವನ್ನು ರೂಢಿಸಬೇಕಿದೆ ಎಂದು ವರ್ತಕ ವಿರೂಪಾಕ್ಷಪ್ಪ ಬಳ್ಳೂಳ್ಳಿ ಹೇಳಿದರು. ಅವರು ಗದಗ ಸಿದ್ದಲಿಂಗ ನಗರದ ಯಳಂದೂರು ಬಸವಲಿಂಗ ಶ್ರೀ ಸ್ಮಾರಕ ಯೋಗ ಪಾಠಶಾಲೆ ಹಾಗೂ ತೋಂಟದಾರ್ಯ ಜಾತ್ರಾ ಮಹೋತ್ಸವ ಸಮಿತಿಯ ಆಶ್ರಯದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಸಂಸ್ಕೃತಿ, ಸಂಸ್ಕಾರ ಬೇಸಿಗೆ ಶಿಬಿರದ ಮುಕ್ತಾಯ ಸಮಾರಂಭದಲ್ಲಿ ಮಾತನಾಡಿದರು. ಕೆ.ಎಚ್. ಬೇಲೂರ, ಸುನಂದಾ ಜಾನೋಪಂತರ, ಸುಮಂಗಲಾ ಹದ್ಲಿ, ಸುಜಾತಾ ಹಿರೇಮಠ, ಜ್ಯೋತಿ ಜಾನೋಪಂತರ, ಸುಮಂಗಲಾ ಹದ್ಲಿ, ಚನ್ನಬಸವಣ್ಣ ಕಾಮಣ್ಣವರ, ವಿನಾಯಕ ಶೆಟ್ಟರ, ವಿಜಯಲಕ್ಷ್ಮಿ ಮೇಕಳೆ, ಶಾಂತಾ ಇದ್ದರು. ಸಾಂಸ್ಕೃತಿಕ ಕಾರ್ಯಕ್ರಮ ನಡೆದವು. ಶಿವಪ್ರಸಾದ ಹಿರೇಮಠರಿಂದ ಯೋಗಾಸನ ಪ್ರದರ್ಶನ, ಅನನ್ಯ ಮತ್ತು ಸಂತೃಪ್ತಿಯಿಂದ ನೃತ್ಯ ಪ್ರದರ್ಶನ ನಡೆಯಿತು.
ವೃತ್ತಿ ಶಿಕ್ಷಣ ಸಾಮಾನ್ಯ ಪ್ರವೇಶ ಪರೀಕ್ಷೆ
ಗದಗ: ವೃತ್ತಿ ಶಿಕ್ಷಣದ ಸಾಮಾನ್ಯ ಪ್ರವೇಶ ಪರೀಕ್ಷೆ ಮೇ 1 ಮತ್ತು 2ರಂದು ನಡೆಯಲಿದೆ. ಜಿಲ್ಲೆಯಲ್ಲಿ 4 ಪ್ರವೇಶ ಪರೀಕ್ಷೆ ಕೇಂದ್ರಗಳಿದ್ದು, 1,744 ವಿದ್ಯಾರ್ಥಿಗಳು ಹಾಜರಾಗಲಿದ್ದಾರೆ ಎಂದು ಜಿಲ್ಲಾಧಿಕಾರಿ ಎನ್.ಎಸ್. ಪ್ರಸನ್ನಕುಮಾರ ಹೇಳಿದರು. ಈಚೆಗೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜರುಗಿದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅಕ್ರಮ ನಡೆಯದಂತೆ, ವ್ಯವಸ್ಥಿತ ಹಾಗೂ ಸುಗಮ ಪರೀಕ್ಷೆಗೆ ಎಲ್ಲ ಅಗತ್ಯ ಕ್ರಮ ಜರುಗಿಸಲು ಡಿಸಿ ಸೂಚಿಸಿದರು. ಪೊಲೀಸ್ ಬಂದೋಬಸ್ತ್ ಒದಗಿಸಬೇಕು. ಅಭ್ಯರ್ಥಿಗಳಿಗೆ ಆಸನಗಳ, ಗಾಳಿ-ಬೆಳಕಿನ ವ್ಯವಸ್ಥೆ ಕುಡಿಯುವ ನೀರಿನ ಸೌಲಭ್ಯದ ವ್ಯವಸ್ಥೆ ಕಲ್ಪಿಸಬೇಕೆಂದು ಡಿಸಿ ತಿಳಿಸಿದರು. ವೀಕ್ಷಕರ, ಕಸ್ಟೋಡಿಯನ್, ಪ್ರಶ್ನೆ ಪತ್ರಿಕೆ ಹಾಗೂ ಉತ್ತರ ಪತ್ರಿಕೆಗಳ ಉಸ್ತುವಾರಿ ತಂಡ ರಚಿಸಲಾಗಿದೆ. ಕೇಂದ್ರಗಳ 500 ಮೀಟರ್ ಪ್ರದೇಶ ವ್ಯಾಪ್ತಿಯಲ್ಲಿ ನಿಯೋಜಿತ ಅಧಿಕಾರಿಗಳು ಮತ್ತು ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳನ್ನು ಹೊರತುಪಡಿಸಿ ಯಾರೂ ಪ್ರವೇಶಿಸದಂತೆ ಪ್ರತಿಬಂಧಕಾಜ್ಞೆ ಜಾರಿಗೊಳಿಸಲಾಗುತ್ತದೆ. ನಿಯೋಜಿತ ಮೇಲ್ವಿಚಾರಕರು, ವಿದ್ಯಾರ್ಥಿಗಳು ಮೊಬೈಲ್, ಇತರೆ ಸಂಪರ್ಕ ಸಾಧನ ಉಪಯೋಗಿಸುವುದನ್ನು ನಿಷೇಧಿಸಲಾದೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

