ಸಂವಿಧಾನದ ಮಹತ್ವ ಅರಿಯಿರಿ: ಪ್ರಕಾಶ ಕಾಳೆ
ಗದಗ: ಭಾರತಕ್ಕೆ ಡಾ. ಅಂಬೇಡ್ಕರ್ ನೀಡಿದ ಸಂವಿಧಾನದ ಮಹತ್ವ ತಿಳಿದು ಪ್ರತಿಯೊಬ್ಬರೂ ಅವರನ್ನು ಪೂಜ್ಯ ಭಾವನೆಯಿಂದ ಕಂಡಾಗ ಎಲ್ಲರಲ್ಲೂ ಸಮಾನತೆ ಬರಲು ಸಾಧ್ಯ ಎಂದು ಜಿಲ್ಲಾ ಚಲವಾದಿ ಸಮಾಜದ ಮಾಜಿ ಅಧ್ಯಕ್ಷ ಪ್ರಕಾಶ ಕಾಳೆ ಹೇಳಿದರು. ತಾಲೂಕಿನ ಹುಯಿಲಗೋಳ ಗ್ರಾಮದಲ್ಲಿ ಈಚೆಗೆ ಡಾ. ಬಿ.ಆರ್. ಅಂಬೇಡ್ಕರ್ ಯುವಕ ಮಂಡಳ ಹಾಗೂ ದುರ್ಗಾದೇವಿ ದೇವಸ್ಥಾನ ಜೀರ್ಣೋದ್ಧಾರ ಸೇವಾ ಸಮಿತಿ ಆಶ್ರಯದಲ್ಲಿ ಏರ್ಪಡಿಸಿದ್ಧ ಅಂಬೇಡ್ಕರ್ ಜಯಂತ್ಯುತ್ಸವದಲ್ಲಿ ಮಾತನಾಡಿದರು. ಜಿಲ್ಲಾ ಯುವ ಪ್ರಶಸ್ತಿ ವಿಜೇತ ಬಸವರಾಜ ಈರಣ್ಣವರ, ಶರಣಪ್ಪ ಕಡಿಯವರ, ರಮೇಶ ಕಡಿಯವರ, ಮಹಾಂತೇಶ ಕಡಿಯವರ, ಶರಣಪ್ಪ ಈರಣ್ಣವರ, ಪರಸಪ್ಪ ಹುರಕನವರ, ಹನಮಂತ ಕಡಿಯವರ, ಮಾರುತಿ ಕಾಳೆ, ಫಕ್ಕೀರಪ್ಪ ಕಾಳೆ, ಯಲ್ಲಪ್ಪ ದೊಡ್ಡಮನಿ, ಕನಕಪ್ಪ ಹುರಕನವರ, ಮಾರತಿ, ಶರಣಪ್ಪ, ದೇವರಾಜ ಈರಣ್ಣವರ, ನಾಗರಾಜ ಕಾಳೆ ಇದ್ದರು. ರಂಗಜ್ಜ ಕಡಿಯವರು ನಿರ್ವಹಿಸಿದರು.
ಆಸ್ತಿ ಮುಟ್ಟುಗೋಲಿಗೆ ಒತ್ತಾಯ
ಗದಗ: ದಲಿತ ಮಹಿಳೆಯರಿಗೆ ಹಗುರವಾಗಿ ಮಾತನಾಡಿದ ಬಾಬಾ ರಾಮದೇವ್ರ ಎಲ್ಲಾ ಆಸ್ತಿಯನ್ನು ಕೂಡಲೇ ಸರ್ಕಾರ ಮುಟ್ಟಗೋಲು ಹಾಕಿ ಪರಿಶಿಷ್ಟ ಜಾತಿ ನಿಗಮಗಳಿಗೆ ಹಸ್ತಾಂತರಿಸಬೇಕು ಎಂದು ಡಿ.ಎಸ್ಎಸ್. ವಿಜಯ ಮುಳಗುಂದ ಆಗ್ರಹಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು, ಇನ್ನು ಮುಂದೆ ಯಾರೂ ಈ ರೀತಿ ಕೆಳವರ್ಗದವರ ಬಗ್ಗೆ ಹಗುರವಾಗಿ ಹಾಗೂ ಯಾವುದೇ ಸಮುದಾಯ, ಧರ್ಮವನ್ನು ಗುರಿಯಾಗಿಟ್ಟುಕೊಂಡು ಬಹಿರಂಗವಾಗಿ ಮಾತನಾಡದಂತೆ ಚುನಾವಣಾ ಆಯೋಗ ಮತ್ತು ಸರ್ಕಾರ ಕಟ್ಟಪ್ಪಣೆ ಹಾಕಬೇಕು. ಚುನಾವಣೆ ಸಂದರ್ಭದಲ್ಲಿ ರಾಷ್ಟ್ರೀಯ ದಲಿತ ನಾಯಕರನ್ನು ದೀನ, ದಲಿತರು ಎಂಬ ಪದವನ್ನು ಬಳಸದಂತೆ ಆಯೋಗವು ಎಚ್ಚರವಹಿಸಬೇಕು. ಬಾಬಾ ರಾಮದೇವ ಭಾರತದ ಎಲ್ಲ ದಲಿತ ಮಹಿಳೆಯರಿಗೆ ನೋವಾಗುವ ರೀತಿಯಲ್ಲಿ ಮಾತನಾಡಿದ್ದು, ಕೂಡಲೇ ಅವರು ಬಹಿರಂಗವಾಗಿ ಕ್ಷಮೆಯಾಚಿಸಬೇಕು. ಒಂದು ಜಾತಿ ಹಾಗೂ ಒಂದು ಸಮುದಾಯದ ಬಗ್ಗೆ ಹಗುರವಾಗಿ ಮಾತನಾಡುವುದನ್ನು ಸಮಿತಿಯು ಖಂಡಿಸುತ್ತದೆ. ಅವರ ಆಸ್ತಿ ಮುಟ್ಟಗೋಲು ಹಾಕಿ ದಲಿತರಿಗೆ ಹಸ್ತಾಂತರಿಸಬೇಕು ಎಂದು ಈ ಮೂಲಕ ಒತ್ತಾಯಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

