ಗದಗ

ಬಸವರಾಜ ಹೊಂಬಾಳಿ ಏಷಿಯನ್ ಕರಾಟೆ ಚಾಂಪಿಯನ್ಗೆ ಆಯ್ಕೆ

Published On :

ಗದಗ: ಮೇ 1ರಿಂದ 5ರ ವರೆಗೆ ಮಲೇಶಿಯಾದ ಪರಾಕೆಯಲ್ಲಿ ನಡೆಯಲಿರುವ ಏಷಿಯನ್ ಕರಾಟೆ ಚಾಂಪಿಯನ್ಗೆ ಗದುಗಿನ ಯುವ ಕರಾಟೆ ಪಟು ಬಸವರಾಜ ಹೊಂಬಾಳಿ ಆಯ್ಕೆಯಾಗಿದ್ದು, ಜಿಲ್ಲೆಯ 30 ವರ್ಷಗಳ ಇತಿಹಾಸದಲ್ಲಿ ಇದು ಪ್ರಥಮ ಎಂದು ಜಿಲ್ಲೆಯ ಹಿರಿಯ ಕರಾಟೆ ತರಬೇತುದಾರ ಪರಶುರಾಮ ಹಬೀಬ ಹೇಳಿದರು.
ಅವರು ಭಾನುವಾರ ನಗರದ ಖಾಸಗಿ ಹೂಟೇಲ್ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಗುಜರಿಯೋ ಕರ್ನಾಟಕ ಕರಾಟೆ ಅಸೋಸಿಯೇಶನ್ ಸಹಯೋಗದಲ್ಲಿ ವಿದೇಶದಲ್ಲಿ ನಡೆಯುತ್ತಿರುವ ಈ ಸ್ಪರ್ಧೆಗೆ ಆಯ್ಕೆಯಾಗಿದ್ದು, 55ರಿಂದ 60 ಕೆಜಿ ವಿಭಾಗದಲ್ಲಿ ಬ್ಲಾಕ್ ಬೆಲ್ಟ್ ವಿಭಾಗದಲ್ಲಿ ಭಾಗವಹಿಸುತ್ತಿದ್ದಾರೆ. ಇದು ಗದಗ ಜಿಲ್ಲೆಯ ದೊಡ್ಡ ಸಾಧನೆ ಎಂದರು. ಮುಷ್ಠಿ ಕರಾಟೆ ಪೌಂಡೇಶನ್ ಅಧ್ಯಕ್ಷ ಶ್ರೀನಿವಾಸ ಹುಯಿಲಗೋಳ ಮಾತನಾಡಿ, ಈಗಾಗಲೇ ರಾಜ್ಯ ಹಾಗೂ ರಾಷ್ಟ್ರ ಹಲವಾರು ಪಂದ್ಯಾವಳಿಗಳಲ್ಲಿ ತಮ್ಮ ಶಿಷ್ಯ ಬಳಗದೊಂದಿಗೆ ಪಾಲ್ಗೊಂಡು ಹಲವಾರು ಪ್ರಶಸ್ತಿ ಪಡೆಯುವಲ್ಲಿ ಯಶಸ್ವಿಯಾಗಿರುವ ಇವರು, ವಿದೇಶದಲ್ಲಿಯೂ ಗದುಗಿನ ಕೀರ್ತಿ ಪತಾಕೆ ಹಾರಿಸುವಂತಾಗಲಿ ಎಂದು ಹಾರೈಸಿದರು.
ಆಯ್ಕೆಯಾಗಿರುವ ಬಸವರಾಜ ಹೊಂಬಾಳಿ ಮಾತನಾಡಿ, ಪಂದ್ಯಾವಳಿಗಳ ರೂಪುರೇಷೆಗಳು ಮತ್ತು ಅವರು ವಿದೇಶಕ್ಕೆ ತೆರಳುತ್ತಿರುವ ಸಂಸ್ಥೆಯ ಕುರಿತು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ತರಬೇತುದಾರ ಜಗದೀಶ ಅಡಿಗ, ವಾದಿರಾಜ ಕುಲಕರ್ಣಿ ಮುಂತಾದವರು ಹಾಜರಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.