ಗದಗ

ಪುಲಿಕೇಶಿ ನೂತನ ಅಧ್ಯಕ್ಷರಾಗಿ ಪುನರಾಯ್ಕೆ

Published On :

ಲಕ್ಷ್ಮೇಶ್ವರ: ಪಟ್ಟಣದ ಸೋಮೇಶ್ವರ ರೈತರ ಸಹಕಾರಿ ನೂಲಿನ ಗಿರಣಿಯ 2014-19 ರ ಸಾಲಿನ ಆಡಳಿತ ಮಂಡಳಿಗೆ ನೂತನ ಅಧ್ಯಕ್ಷರಾಗಿ ಪುಲಿಕೇಶಿ ಉಪನಾಳ ಹಾಗೂ ಉಪಾಧ್ಯಕ್ಷರಾಗಿ ಫಕ್ಕೀರಪ್ಪ ಗುಡಗೇರಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸೋಮವಾರ ನಡೆದ ನೂತನ ನಿರ್ದೇಶಕ ಮಂಡಳಿಯ ಸಭೆಯಲ್ಲಿ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಯು ನಡೆದು ಕಳೆದ ಎರಡು ಅವಧಿಯಲ್ಲಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಪುಲಕೇಶಿ ಉಪನಾಳ ಅವರು ಮತ್ತೆ ಮೂರನೇ ಬಾರಿಗೆ ಅವಿರೋಧವಾಗಿ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಫಕ್ಕೀರಪ್ಪ ಚನ್ನಪ್ಪ ಗುಡಗೇರಿ ಆಯ್ಕೆಯಾದರು. ಚುನಾವಣಾಧಿಕಾರಿಯಾಗಿ ಆರ್.ಸಿ. ಚಕ್ರಸಾಲಿ ಹಾಗೂ ಎಸ್.ವ್ಹಿ. ಯಂಡಿಗೇರಿಯವರು ಕಾರ್ಯನಿರ್ವಹಿಸಿದರು. ನಿಗದಿತ ವೇಳೆಯಲ್ಲಿ ಯಾವುದೇ ಅಭ್ಯರ್ಥಿಗಳು ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿಗಳು ಅವಿರೋಧ ಆಯ್ಕೆ ಘೋಷಿಸಿದರು. ಒಟ್ಟು 18 ನಿರ್ದೇಶಕ ಸ್ಥಾನಗಳಲ್ಲಿ 3 ಸ್ಥಾನಗಳು ಅವಿರೋಧ ಆಯ್ಕೆಯಾಗಿದ್ದವು. ಉಳಿದ 15 ಸ್ಥಾನಗಳಿಗೆ ಏ. 20ರಂದು ಚುನಾವಣೆಯು ನಡೆದಿದ್ದು, ನೂಲಿನ ಗಿರಣಿಯ ಸಂಸ್ಥಾಪಕ ದಿ. ಗೂಳಪ್ಪ ಉಪನಾಳ ಗುಂಪಿನಿಂದ ಚುನಾವಣೆ ನಡೆದ ಒಟ್ಟು 15 ಸ್ಥಾನಗಳಿಗೆ ಸ್ಪರ್ಧೆ ಮಾಡಿ ಎಲ್ಲ ಸ್ಥಾನಗಳನ್ನು ಗೆದ್ದುಕೊಳ್ಳುವ ಮೂಲಕ ಪ್ರಾಬಲ್ಯ ಮೆರೆದಿದ್ದರು. ಈ ಸಂದರ್ಭದಲ್ಲಿ ಮಿಲ್ಲಿನ ಮಾಜಿ ಅಧ್ಯಕ್ಷ ಎನ್.ಬಿ. ಪವಾರ ಉಪಸ್ಥಿತರಿದ್ದರು.
ನಿರ್ದೇಶಕ ವಸಂತರಾವ ಜೋಶಿ, ಗುರುಸಿದ್ದಪ್ಪ ಮೆಣಸಿನಕಾಯಿ, ಚನ್ನಪ್ಪ ಕೋಡೆಪ್ಪ ಗುಂಜಳ, ಚಂಬಣ್ಣ ಬಾಳಿಕಾಯಿ, ನಿಂಗನಗೌಡ್ರ ಪಾಟೀಲ್, ನಿಂಗಪ್ಪ ರಗಟಿ, ಫಕ್ಕೀರಪ್ಪ ಗುಡಗೇರಿ, ಬಸವರಾಜ ಮುದಿಮಲ್ಲನವರ, ಶಿವಲಿಂಗಪ್ಪ ಬಳಿಗಾರ, ಶಿವಾನಂದ ಹರ್ತಿ, ಶಂಕ್ರಪ್ಪ ಗೊರವರ, ಸಿದ್ದಪ್ಪ ಕುಡವಕ್ಕಲಿಗೇರ, ಸೋಮೇಶ ಉಪನಾಳ, ರಾಮಪ್ಪ ನಾಗನೂರ, ನೀಲಪ್ಪ ಹತ್ತಿ ಸೇರಿದಂತೆ ಮತ್ತಿತರರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.