ಅಪೂರ್ಣ ತಡೆಗೋಡೆ: ಎಚ್ಚರ ತಪ್ಪಿದರೆ ಅವಘಡ
ಇಲ್ಲಿನ ಕಾಲಕಾಲೇಶ್ವರ ಗ್ರಾಮದಿಂದ ದಿಂಡೂರಿಗೆ ಇರುವ ರಸ್ತೆ ಪಕ್ಕದಲ್ಲಿ ನಿರ್ಮಿಸಿರುವ ತಡೆಗೊಡೆ ಕಾಮಗಾರಿ ಪೂರ್ಣಗೊಳ್ಳದೆ ಅರ್ಧಕ್ಕೆ ನಿಂತಿದೆ. ಇದು ಅಪಾಯಕ್ಕೆ ಮುನ್ನುಡಿಯಾಗಿದ್ದು, ಇಲ್ಲಿ ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಸಂಚರಿಸಬೇಕು. ಎಚ್ಚರ ತಪ್ಪಿದರೆ ಅವಘಡ ನಿಶ್ಚಿತ.
ರಸ್ತೆ ಬದಿಯ ಸರವಿನಲ್ಲಿ ಮಳೆ ನೀರು ಹರಿದು ರಸ್ತೆ ಕೊಚ್ಚಿ ಹೋಗಬಾರದೆನ್ನುವ ಉದ್ದೇಶದಿಂದ ಅರ್ಧ ಕಿಲೋಮೀಟರ್ ವರೆಗೂ ತಡೆಗೋಡೆ ನಿರ್ಮಿಸಲಾಗಿದೆ. ಆದರೆ ಇದು ಮಧ್ಯದಲ್ಲಿ ಅಪೂರ್ಣವಾಗಿದೆ. ಇದರಿಂದ ಸಂಚರಿಸುವ ವಾಹನಗಳಿಗೆ ತೊಂದರೆ ಯಾಗುತ್ತಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಎಲ್ಲಕ್ಕೂ ಇದೇ ರಸ್ತೆ: ಕಾಲಕಾಲೇಶ್ವರ ಗ್ರಾಮದಿಂದ ಒಳರಸ್ತೆಯಾಗಿ ದಿಂಡೂರ, ಲಕ್ಕಲಕಟ್ಟಿ, ನಾಗೇಂದ್ರಗಡ ಸೇರಿದಂತೆ ಹಲವು ಭಾಗಗಳಿಗೆ ಈ ರಸ್ತೆ ಮೂಲಕವೇ ಸಂಚರಿಸಬೇಕಾಗಿದೆ. ಇತರ ಗ್ರಾಮಗಳ ಸಂಪರ್ಕಿಸುವ ಮಹತ್ವ ರಸ್ತೆಯಲ್ಲಿ ಕಳೆದ 6 ವರ್ಷಗಳ ಹಳೆಯ ತಡೆಗೊಡೆ ಅಪೂರ್ಣವಾಗಿದ್ದು, ಶಾಲಾ, ಕಾಲೇಜು ವಿದ್ಯಾರ್ಥಿಗಳು, ರೈತರು, ನೌಕರರು ಕೃಷಿ ಕೂಲಿಕಾರರು, ಅನೇಕ ವಾಹನಗಳು ಇದೇ ರಸ್ತೆಯಲ್ಲಿ ನಿತ್ಯ ಸಂಚರಿಸುತ್ತಿವೆ. ಆದರೆ ರಸ್ತೆಯ ಬದಿಯಲ್ಲಿ ತಡೆಗೋಡೆ ಇಲ್ಲದ್ದರಿಂದ ವಾಹನ ಸವಾರರು ತೊಂದರೆ ಅನುಭವಿಸಿದ್ದಾರೆ.
ಕತ್ತಲೆಯ ಕೂಪ: ರಸ್ತೆ ಪಕ್ಕದಲ್ಲಿ ತಡೆಗೋಡೆ ತಗ್ಗು ಪ್ರದೇಶದಲ್ಲಿರುವುದರಿಂದ ಮಳೆಗಾಲದಲ್ಲಿ ಹೊಲಗಳು ಮತ್ತು ಹಳ್ಳದಿಂದ ಹರಿದು ಬರುವ ನೀರು ರಸ್ತೆ ಮೇಲೆಯೆ ಹರಿಯುತ್ತಿದೆ. ಮಳೆ ಬಂದಂಥ ಸಂದರ್ಭದಲ್ಲಿ ಸಂಚಾರಕ್ಕೆ ಅಡ್ಡಿ ಯಾಗುತ್ತಿದೆ. ರಾತ್ರಿ ವೇಳೆಯಲ್ಲಿ ದೀಪದ ವ್ಯವಸ್ಥೆ ಇಲ್ಲದ್ದರಿಂದ ಎತ್ತಿನಗಾಡಿ, ಸೈಕಲ್ ಸೇರಿದಂತೆ ದ್ವಿಚಕ್ರವಾಹನಗಳ ಸಂಚಾರ ಕಷ್ಟವಾಗಿದ್ದು, ಕತ್ತಲಲ್ಲಿ ಕಂದಕಕ್ಕೆ ಬೀಳಬೇಕಾಗುತ್ತದೆ. ಪ್ರಾಣಾಪಾಯ ಸಂಭವಿಸುವ ಮುನ್ನವೇ ಸಂಬಂಧಿಸಿದ ಅಧಿಕಾರಿಗಳು ಎಚ್ಚೆತ್ತುಕೊಂಡು ತಡೆಗೋಡೆ ನಿರ್ಮಾಣಕ್ಕೆ ಕ್ರಮ ವಹಿಸಬೇಕಿದೆ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

