ಗದಗ

ಪ್ರತಿ ನೌಕರನ ಜೀವನದಲ್ಲಿ ನಿವೃತ್ತಿ ಇದೆ

Published On :

ಕನ್ನಡಪ್ರಭ ವಾರ್ತೆ, ಮುಂಡರಗಿ, ಏ. 30
ಸರ್ಕಾರಿ, ಖಾಸಗಿ ಸಂಸ್ಥೆಯ ಪ್ರತಿ ನೌಕರನಗೂ ನಿವೃತ್ತಿ ಇದ್ದೇ ಇದೆ. ಆದರೆ, ನಾವು ವೃತ್ತಿನಿರತರಾಗಿದ್ದಾಗ ನಮ್ಮ ಕಾರ್ಯಕ್ರಮ ಹಾಗೂ ಆಡಳಿತ ಮಾತ್ರ ಸದಾ ನೆನಪಿರುತ್ತವೆ ಎಂದು ಜ. ಅನ್ನದಾನೀಶ್ವರ ವಿದ್ಯಾ ಸಮಿತಿಯ ಗೌರವ ಕಾರ್ಯದರ್ಶಿ ಎ.ಕೆ. ಬೆಲ್ಲದ ಹೇಳಿದರು.
ಅವರು ಬುಧವಾರ ಸ್ಥಳೀಯ ಜ. ಅನ್ನದಾನೀಶ್ವರ ಸಂಯುಕ್ತ ಪಪೂ ಕಾಲೇಜಿನಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಪ್ರಾ. ವಿ.ಎಫ್. ಅಂಗಡಿ ಹಾಗೂ ಎಸ್.ಕೆ. ಹೊಳೆಯಣ್ಣವರ ಅವರ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದರು. ಶಿಕ್ಷಕ ವೃತ್ತಿ ಅತಿ ಸೂಕ್ಷ್ಮವಾದ ವೃತ್ತಿ. ಮಕ್ಕಳಿಗೆ ಪಾಠ ಮಾಡಿ ಅವರನ್ನು ಸಮಾಜದ ಉತ್ತಮ ಪ್ರಜೆಯನ್ನಾಗಿ ಮಾಡುವ ಹೊಣೆ ಪ್ರತಿ ಶಿಕ್ಷಕರ ಮೇಲಿದೆ. ಶಿಕ್ಷಕ ವೃತ್ತಿಯಲ್ಲಿ ದೊರೆಯುವ ಸುಖ ಮತ್ತೊಂದು ವೃತ್ತಿಯಲ್ಲಿ ಸಿಗಲ್ಲ. ಇಂದು ನಿವೃತ್ತರಾದ ಈರ್ವರ ನಿವೃತ್ತಿ ಜೀವನ ಸುಖಕರವಾಗಲಿ ಎಂದು ಹಾರೈಸಿದರು. ವಿದ್ಯಾ ಸಮಿತಿಯ ವಿಶೇಷ ಆಡಳಿತಾಧಿಕಾರಿ ಎಸ್.ಎಂ. ಹೊಸಮಠ ಮಾತನಾಡಿ, ವಿ.ಎಫ್. ಅಂಗಡಿ ಮೊದಲು ಹಿಂದಿ ಭಾಷೆಯ ಉಪನ್ಯಾಸಕರಾಗಿ ವಿದ್ಯಾರ್ಥಿಗಳ ನೆಚ್ಚಿನ ಶಿಕ್ಷಕರಾಗಿ ಸೇವೆ ಸಲ್ಲಿಸಿದವರು. ಕಳೆದ 1 ವರ್ಷದಿಂದ ಪ್ರಾಚಾರ್ಯರಾಗಿಯೂ ಪ್ರಾಮಾಣಿಕವಾಗಿ ಶಿಸ್ತುಬದ್ಧ ಆಡಳಿತ ನಡೆಸಿ ಮುಂಬರುವ ಪ್ರಾಚಾರ್ಯರಿಗೆ ಮಾರ್ಗದರ್ಶಕರಾಗಿದ್ದಾರೆ. ಎಸ್.ಕೆ. ಹೊಳೆಯಣ್ಣವರ ಒಳ್ಳೆಯ ಅನುಭವಿ ಉಪನ್ಯಾಸಕರಾಗಿ ಸೇವೆ ಸಲ್ಲಿದ್ದಾರೆ. ಇವರ ಸೇವೆ ಇನ್ನೂ ಸಂಸ್ಥೆಗೆ ಅವಶ್ಯವಿದೆ ಎಂದರು. ಇದೇ ಸಂದರ್ಭದಲ್ಲಿ ಸೇವೆಯಿಂದ ನಿವೃತ್ತಿ ಹೊಂದಿದ ಪ್ರಾ. ವಿ.ಎಫ್. ಅಂಗಡಿ ಮತ್ತು ಎಸ್.ಕೆ. ಹೊಳೆಯಣ್ಣವರ ಅವರಿಗೆ ಸಮಿತಿಯ ವತಿಯಿಂದ ಸನ್ಮಾನಿಸಲಾಯಿತು. ಎಸ್.ಬಿ. ಹಿರೇಮಠ, ಡಾ. ಆರ್.ಎಚ್. ಜಂಗಣವಾರಿ, ಪಿ.ಬಿ. ಹಿರೇಮಠ, ಆರ್.ಆರ್. ಇನಾಮದಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೇ ಸಂದರ್ಭದಲ್ಲಿ ನೂತನ ಪ್ರಾಚಾರ್ಯರಾಗಿ ಅಧಿಕಾರ ವಹಿಸಿಕೊಂಡ ಕಾಲೇಜಿನ ಜೀವಶಾಸ್ತ್ರದ ಉಪನ್ಯಾಸಕ ಡಿ. ಪ್ರಕಾಶ ಅವರನ್ನು ಸ್ವಾಗತಿಸಲಾಯಿತು. ಕಾಲೇಜು ಮೇಲ್ವಿಚಾರಣಾ ಸಮಿತಿ ಕಾರ್ಯಾಧ್ಯಕ್ಷ ಬಿ.ಎಸ್. ಹಿರೇಗೌಡ್ರ, ಶಂಕ್ರಪ್ಪ ಬಾರಿಕಾಯಿ, ಆರ್.ಎಲ್. ಪೊಲೀಸ್‌ಪಾಟೀಲ, ಎಚ್.ವೈ. ಭಜಂತ್ರಿ, ಎಂ.ಜಿ. ಗಚ್ಚಣ್ಣವರ, ಪಿ.ಕೆ. ಪಾಟೀಲ, ಎಸ್.ಎಸ್. ಪಾಟೀಲ, ಎಸ್.ಪಿ. ಕೊಪ್ಪಳ ಮತ್ತು ಸಿಬ್ಬಂದಿ ಪಾಲ್ಗೊಂಡಿದ್ದರು. ಸಿ.ಎಸ್. ಅರಸನಾಳ ಸ್ವಾಗತಿಸಿ, ನಿರೂಪಿಸಿದರು. ಎನ್.ಎಫ್.ಅಕ್ಕೂರ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.