ಗದಗ-ಬೆಟಗೇರಿಗೆ ಹೆಚ್ಚಿನ ರೈಲ್ವೆ ಸೌಲಭ್ಯ ಕಲ್ಪಿಸಿ
ಗದಗ: ಗದಗ-ಬೆಟಗೇರಿ ಹಾಗೂ ಸುತ್ತಲಿನ ಗ್ರಾಮಗಳ ಸಾರ್ವಜನಿಕರ ಅನಕೂಲಕ್ಕಾಗಿ ಬೇಕಾಗಿರುವ ಗಾಡಿಗಳ ವಿಸ್ತರಣೆ ಇನ್ನಿತರ ವಿಷಯಗಳ ಕುರಿತಂತೆ ಸಂಸದ ಶಿವಕುಮಾರ ಉದಾಸಿ ಹಾಗೂ ರೈಲ್ವೆ ಮ್ಯಾನೇಜರ್ಗೆ ಕೂಡಲೇ ಮನವಿ ಸಲ್ಲಿಸುವ ಮೂಲಕ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವಂತೆ ಬೆಟಗೇರಿ ರೈಲ್ವೆ ಹೋರಾಟ ಸಮಿತಿ ನಿರ್ಧರಿಸಿತು.
ಬೆಟಗೇರಿ ರೈಲ್ವೆ ಹೋರಾಟ ಸಮಿತಿ ಸಭೆ ಬೆಟಗೇರಿಯ ಕೆಸಿಆರ್ ಪಾರ್ಕ್ನಲ್ಲಿ ಸಮಿತಿ ಹಿರಿಯ ಸದಸ್ಯ ಬಸವರಾಜ ಗಿಡ್ನಂದಿ ಅಧ್ಯಕ್ಷತೆಯಲ್ಲಿ ಸೋಮವಾರ ಜರುಗಿತು.
ಬಾಗಲಕೋಟೆಯಿಂದ ಸೊಲ್ಲಾಪುರ ಮಾರ್ಗವಾಗಿ ಯಶವಂತಪುರಕ್ಕೆ ಹೊಗುವ ಗಾಡಿ ನಂ- 13708 ಹಾಗೂ ಯಶವಂತಪುರದಿಂದ ಬಾಗಲಕೋಟೆಗೆ ಬರುವ ಬಸವಾ ಎಕ್ಸ್ಪ್ರೆಸ್ ಗಾಡಿ ನಂ: 13707 ಗಾಡಿಯನ್ನು ಸೊಲ್ಲಾಪುರದಿಂದ ಗದಗ-ಗುಂತಕಲ್ ಗದಗ ಮಾರ್ಗವಾಗಿ ಬೆಂಗಳೂರಿಗೆ ಓಡಿಸಬೇಕು. ಯಶವಂತಪುರದಿಂದ ಸೊಲ್ಲಾಪುರಕ್ಕೆ ಓಡಿಸಬೇಕು. ಹೊಸಪೇಟೆಯಿಂದ ಬಳ್ಳಾರಿ-ಚಿಕ್ಕಜಾಜೂರು-ಅರಸಿಕೇರಿ-ಚಿತ್ರದುರ್ಗಕ್ಕೆ ಹೋಗುವ ಗಾಡಿ ನಂ: 56909 ಮತ್ತು ಚಿತ್ರದುರ್ಗದಿಂದ ಅರಸಿಕೇರಿ, ಚಿಕ್ಕಜಾಜುರು, ಬಳ್ಳಾರಿ, ಹೊಸಪೇಟೆಗೆ ಬರುವ ಗಾಡಿ ನಂ: 56010 ಈ ಗಾಡಿಗಳು ಗದಗವರೆಗೆ ವಿಸ್ತರಣೆಯಾಗಬೇಕು.
ಮಿಟರ್ ಗೇಜ್ ಇದ್ದಾಗ ಬಿಜಾಪುರದಿಂದ ಗದಗ-ಗುಂತಕಲ್ಲ ಮಾರ್ಗವಾಗಿ ಧರ್ಮಾವರಂಗೆ ಹೋಗಿ ಬರುವ ಗಾಡಿಯು ಬ್ರಾಡ್ಗೇಜ್ ಪರಿವರ್ತನೆ ನಂತರ ಕೇವಲ ಗುಂತಕಲ್ಲ ಧರ್ಮಾವರಂವರೆಗೆ ಚಲಿಸುತ್ತಿದ್ದು, ಈ ಗಾಡಿಯನ್ನು ಬಿಜಾಪುರದಿಂದ ಧರ್ಮಾವರಂ, ಧರ್ಮಾವರಂದಿಂದ ಬಿಜಾಪುರ-ಗದಗ ಮಾರ್ಗವಾಗಿ ಮೊದಲಿನಂತೆ ಗಾಡಿಗಳನ್ನು ಓಡಿಸಬೇಕು. ಹೊಸದಾಗಿ ಘೋಷಣೆಯಾಗಿರುವ ಹುಬ್ಬಳ್ಳಿ-ಗದಗ-ಸೊಲ್ಲಾಪುರ ಮಾರ್ಗವಾಗಿ ಮುಂಬಯಿಗೆ ಹೋಗುವ ಎಕ್ಸ್ಪ್ರೆಸ್ ಗಾಡಿಗೆ ಪಂ. ಪುಟ್ಟರಾಜ ಕವಿ ಗವಾಯಿ ಎಕ್ಸಪ್ರೆಸ್ ಎಂದು ನಾಮಕರಣ ಮಾಡಬೇಕು.
ಬಜೆಟ್ನಲ್ಲಿ ಹೊಸದಾಗಿ ಘೋಷಣೆಯಾಗಿರುವ ಗದಗ-ಪಂಡರಪುರ ಫಾಸ್ಟ್ ಪ್ಯಾಸೆಂಜರ್ ಗಾಡಿಗೆ ಬೆಟಗೇರಿ ರಂಗಾವಧೂತನವರ ಹೆಸರು ನಾಮಕರಣ ಮಾಡಬೇಕು ಎಂದು ಆಗ್ರಹಿಸಿದರು. ಹಾವೇರಿ ಲೋಕಸಭಾ ಕ್ಷೇತ್ರಕ್ಕೆ ಹಾವೇರಿ-ಗದಗ ಲೋಕಸಭಾ ಕ್ಷೇತ್ರವೆಂದು ನಾಮಕರಣ ಮಾಡಬೇಕೆಂದು ಸಭೆಯಲ್ಲಿ ಠರಾವಿಸಿ ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಗೆ ಶೀಘ್ರ ಮನವಿ ಸಲ್ಲಿಸಲು ನಿರ್ಣಯಿಸಲಾಯಿತು.
ಗಣೇಶ ಸಿಂಗ್ ಬ್ಯಾಳಿ, ಯಲ್ಲಪ್ಪ ಕಾಂಬಳೇಕರ, ಡಿ.ವಿ. ಬಡಿಗೇರ, ಕೆ.ವಿ. ಗದಗಿನ, ಶಿವರಾಜ ಹಿರೇಮನಿ ಪಾಟೀಲ, ಪ್ರೇಮನಾಥ ಬರದ್ವಾಡ, ಲಿಂಗರಾಜ ಬಗಲಿ, ಈರಣ್ಣ ಪಟ್ಟಣಶೆಟ್ಟಿ, ವಿ.ಇ. ಕಲಾಲ, ಮನೋಹರ ಮೇರವಾಡೆ, ಏಕನಾಥ ಚೋಳಿನ, ಬಸವರಾಜ ಗಿಡ್ನಂದಿ, ವೀರಣ್ಣ ಮುಳ್ಳಾಳ, ನಾಮದೇವ ಜಗದಾಳೆ, ಜಿ.ವಿ. ಬಾಗಡೆ, ಈರಣ್ಣ ಭಂಡಾರಿ, ಬೋಜಪ್ಪ ಹೆಗಡೆ, ಮಾರುತಿ ಗಣಾಚಾರಿ, ಮಂಜು ತಳವಾರ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

