ಗದಗ

ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆಗೆ ಆಗ್ರಹ

Published On :

ಲಕ್ಷ್ಮೇಶ್ವರ: ಪಟ್ಟಣದ ಹುಲಗೇರಿಬಣದ ವ್ಯಾಪ್ತಿಯಲ್ಲಿ ಬರುವ ಇಂದಿರಾ ನಗರ, ಮುಕ್ತಿನಗರ ಹಾಗೂ ಬಸವೇಶ್ವರ ನಗರ ಪ್ರದೇಶಗಳಲ್ಲಿ ಕುಡಿಯುವ ನೀರು ಫ್ಲೋರೈಡ್ ಅಂಶಗಳನ್ನು ಒಳಗೊಂಡಿದ್ದು, ಕುಡಿಯಲು ಯೋಗ್ಯವಾಗಿಲ್ಲ. ಈ ಪ್ರದೇಶಗಳ ನಿವಾಸಿಗಳಿಗೆ ಶುದ್ಧ ಕುಡಿಯುವ ನೀರಿನ ಅವಶ್ಯಕತೆ ಇದ್ದು, ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ ಮಾಡಬೇಕು ಎಂದು ಬಿಜೆಪಿಯ ಸ್ಲಂ ಮೋರ್ಚಾ ಅಧ್ಯಕ್ಷ ಗುರುಶಾಂತಯ್ಯ ಸಿಂದಳ್ಳಿಮಠ           ಆಗ್ರಹಿಸಿದ್ದಾರೆ.
ಈ ಕುರಿತು ಪಟ್ಟಣದ ಪುರಸಭೆಯ ಅಧಿಕಾರಿಗಳಿಗೆ ಶನಿವಾರ ಮನವಿ ಸಲ್ಲಿಸಿ ಮಾತನಾಡಿದರು. ಪಟ್ಟಣದ ಹೊಸ ಬಡಾವಣೆಗಳಿಗೆ ಸರಿಯಾದ ನೀರಿನ ಸರಬರಾಜು ವ್ಯವಸ್ಥೆಯು ಇಲ್ಲದೇ ಇರುವುದರಿಂದ ಅಲ್ಲದೇ ಪಟ್ಟಣಕ್ಕೆ ಈಗ ಸರಬರಾಜು ಆಗುತ್ತಿರುವ ತುಂಗಭದ್ರಾ ಕುಡಿಯುವ ನೀರು 10-12 ದಿನಗಳಿಗೊಮ್ಮೆ ಬರುತ್ತಿವೆ. ಅದಕ್ಕಾಗಿ ಹೊಸ ಬಡವಾಣೆಯ ನಿವಾಸಿಗಳು ಕುಡಿಯುವ ನೀರಿಗಾಗಿ ಪರಿತಪಿಸುವಂತಾಗಿದೆ. ಅಲ್ಲದೇ ಈ ಪ್ರದೇಶಗಳಲ್ಲಿ ಬೋರ್‌ವೆಲ್‌ಗಳ ನೀರು ಕುಡಿಯಲು ಯೋಗ್ಯವಾಗಿಲ್ಲ. ಅದಕ್ಕಾಗಿ ಇಂದಿರಾನಗರ ಪ್ರದೇಶದಲ್ಲಿ ಆದಷ್ಟು ಶೀಘ್ರವಾಗಿ ಶುದ್ಧ ಕುಡಿಯುವ ನೀರಿನ ಘಟಕವನ್ನು ಸ್ಥಾಪನೆ ಮಾಡಬೇಕು ಎಂದರು. ವಿನಾಯಕ ಜಾಧವ, ಎನ್.ಎನ್. ಬಾಡಗಿ, ನಿಂಗಪ್ಪ ಮನ್ನಂಗಿ, ಸಂತೋಷ ಚವ್ಹಾಣ, ಹನುಮಂತಪ್ಪ ಶಿರಹಟ್ಟಿ, ಅರ್ಜುನ ಮೂಲಿಮನಿ, ಸಂತು ಬಂಡಾರಿ, ಗುಡ್ಡಪ್ಪ ಮುಳಗುಂದ, ಬಸವರಾಜ, ಅಲ್ತಾಫ ಕಲೆಗಾರ ಮುಂತಾದವರು ಹಾಜರಿದ್ದರು. ಪುರಸಭೆಯ ವ್ಯವಸ್ಥಾಪಕ ಪಿ.ಸಿ. ತುಪ್ಪದ ಮನವಿ ಸ್ವೀಕರಿಸಿ ಆಡಳಿತ ಮಂಡಳಿಯ ಗಮನಕ್ಕೆ ತರುವುದಾಗಿ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.