ಗದಗ

ಆರ್ಥಿಕ ಪ್ರಗತಿಗೆವೃತ್ತಿಕೌಶಲ್ಯ ಸಹಕಾರಿ

Published On :

ಕನ್ನಡಪ್ರಭ ವಾರ್ತೆ, ರೋಣ, ಜ. 1
ಗ್ರಾಮೀಣ ಪ್ರದೇಶದ ಜನತೆ ಆರ್ಥಿಕವಾಗಿ ಪ್ರಗತಿ ಹೊಂದಲು ವೃತ್ತಿ ಕೌಶಲ್ಯ ಸಹಕಾರಿಯಾಗುತ್ತಿದೆ. ಆ ನಿಟ್ಟಿನಲ್ಲಿ ವೃತ್ತಿ ಕೌಶಲ್ಯ ಅರಿವು ಪ್ರತಿಯೊಬ್ಬರಿಗೂ ಅತ್ಯಗತ್ಯವಾಗಿದೆ ಎಂದು ಯಾವಗಲ್ ಗ್ರಾಪಂ ಅಧ್ಯಕ್ಷ ಎಸ್.ಎಂ. ಪಾಟೀಲ ಹೇಳಿದರು.
ಅವರು ಈಚೆಗೆ ತಾಲೂಕಿನ ಯಾವಗಲ್ ಗ್ರಾಮದಲ್ಲಿ ಜಿಲ್ಲಾ ಲೋಕ ಶಿಕ್ಷಣ ಸಮಿತಿ, ಜಿಪಂ ಮತ್ತು ರಾಜೀವಗಾಂಧಿ ಗ್ರಾಮೀಣ ಅಭಿವೃದ್ಧಿ ಅಸೋಸಿಯೇಶನ್ ಇವರುಗಳ ಸಂಯುಕ್ತಾಶ್ರಯದಲ್ಲಿ ಜರುಗಿದ ನವಸಾಕ್ಷರರಿಗಾಗಿ ವೃತ್ತಿ ಕೌಶಲ್ಯ ತರಬೇತಿ ಶಿಬಿರದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಅಗರಬತ್ತಿ ತಯಾರಿಕೆ, ಹಪ್ಪಳ, ಸಂಡಿಗೆ, ಮಸಾಲಿ ಪುಡಿ, ಉಪ್ಪಿನಕಾಯಿ, ಬುಟ್ಟಿ ಹೆಣೆಯುವುದು, ಮೇನದ ಬತ್ತಿ ತಯಾರಿಕೆ ಸೇರಿದಂತೆ ಅನೇಕ ವೃತ್ತಿ ಕೌಶಲ್ಯಗಳು ಇಂದು ಗ್ರಾಮೀಣ ಪ್ರದೇಶದಲ್ಲಿ ವಿರಳವಾಗಿವೆ. ಇದಕ್ಕೆ ಗ್ರಾಮೀಣ ಜನತೆಗೆ ಸಮರ್ಪಕ ತರಬೇತಿ ಕೊರತೆಯೆ ಮುಖ್ಯ ಕಾರಣವಾಗಿದೆ. ನವಸಾಕ್ಷರರಿಗೆ ವೃತ್ತಿ ಕೌಶಲ್ಯಗಳ ತರಬೇತಿ ಶಿಬಿರಗಳನ್ನು ಹಮ್ಮಿಕೊಂಡು ತರಬೇತಿಗೊಳಿಸಲಾಗುತ್ತಿದೆ. ಅದರ ಸದುಪಯೋಗ ಪಡಿಸಿಕೊಂಡು ಸ್ವಾವಲಂಬನೆಯ ಜೀವನದ ಜತೆಗೆ ಆರ್ಥಿಕ ಪ್ರಗತಿ ಹೊಂದಬೇಕು ಎಂದರು.
ರಾಜೀವಗಾಂಧಿ ಗ್ರಾಮೀಣ ಅಭಿವೃದ್ಧಿ ಅಸೋಸಿಯೇಶನ್ ಅಧ್ಯಕ್ಷ ವೀರಪ್ಪ ತಾಳಿ ಮಾತನಾಡಿ, ನವಸಾಕ್ಷರರಿಗೆ ಅಕ್ಷರ ಜ್ಞಾನ ನೀಡುವುದರ ಜತೆಗೆ ತಮ್ಮ ಬದುಕು ಹಸನುಗೊಳಿಸಿಕೊಳ್ಳಲು ನೆರವಾಗುವಂತಹ ವೃತ್ತಿ ಕೌಶಲ್ಯಗಳ ಕುರಿತು ತರಬೇತಿ ನೀಡಲಾಗುತ್ತಿದೆ. ನವಸಾಕ್ಷರರಿಗೆ ಸರ್ಕಾರ ಅನೇಕ ಯೋಜನೆಗಳನ್ನು ಅನುಷ್ಠಾನಗೊಳಿಸಿದೆ ಎಂದರು. ತಾಲೂಕು ಸಂಯೋಜಕರಾದ ಜಿ.ಬಿ. ಹಾವಣಗಿ, ಕಲ್ಲವ್ವ ತಾಳಿ, ಶಿವಪ್ರಕಾಶ ಬೊಪಳಾಪುರ, ವೆಂಕಣ್ಣ ಉಪ್ಪಾರ, ಸುಮಂಗಲಾ ಕುಮ್ಮಿ, ಶಿವಪ್ಪ ಸುಣಗಾರ ಮುಂತಾದವರು ಉಪಸ್ಥಿತರಿದ್ದರು. ವೆಂಕಣ್ಣ ಉಪ್ಪಾರ ನಿರೂಪಿಸಿ, ಸ್ವಾಗತಿಸಿದರು. ರಾಜು ಹಕ್ಕರಗಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.