ದಲಿತ ವೀರಯೋಧರ ಸಂದೇಶ ಸಮುದಾಯಕ್ಕೆ ತಲುಪಿಸಿ
ಕನ್ನಡಪ್ರಭ ವಾರ್ತೆ, ಗದಗ, ಜ. 2
ದೇಶದ ಇತಿಹಾಸದಲ್ಲಿ ದಲಿತರ ಚರಿತ್ರೆಯನ್ನು ಮುಚ್ಚಿಡಲಾಗಿದ್ದು, ಅದರಲ್ಲಿ ಜ. 1, 1818 ಕೋರೆಗಾವ್ ಕದನದಲ್ಲಿ ಭಾಗವಹಿಸಿದ ದಲಿತ ವೀರಯೋಧರ ಮಹತ್ತರ ಸಂದೇಶಗಳನ್ನು ಸಮುದಾಯಕ್ಕೆ ತಿಳಿಸುವ ಕಾರ್ಯವಾಗಬೇಕಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರವಾದ) ಗದಗ ಜಿಲ್ಲಾ ಸಂಚಾಲಕ ದೇವಪ್ಪ ಲಿಂಗದಾಳ ಹೇಳಿದರು.
ಬುಧವಾರ ಗದಗ-ಬೆಟಗೇರಿ ನಗರಸಭೆ ಆವರಣದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರವಾದ) ಗದಗ ಜಿಲ್ಲಾ ಶಾಖೆಯಿಂದ ಏರ್ಪಡಿಸಲಾಗಿದ್ದ ಕೋರೆಗಾವ್ ದಲಿತ ವೀರಯೋಧರ ಸ್ಮೃತಿದಿನ ಕಾರ್ಯಕ್ರಮದಲ್ಲಿ ಡಾ. ಬಿ.ಆರ್. ಅಂಬೇಡ್ಕರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಮಾತನಾಡಿದರು. ಪೇಶ್ವೆ ರಾಜಮನೆತನದವರು ಮನುಸ್ಮೃತಿಯ ಆಧಾರದ ಮೇಲೆ ಹಿಂದುತ್ವದ ಹೆಸರನ್ನು ಕಟ್ಟಿಕೊಂಡು, ಅಸ್ಪೃಶ್ಯತೆಯ ಕರಾಳದಲ್ಲಿ ದಲಿತ ಸೈನಿಕರನ್ನು ಶೋಷಣೆ ಮಾಡಿ, ಅಮಾನವೀಯ ಸ್ಥಿತಿಗೆ ತರಲಾಗಿತ್ತು. ಇದನ್ನು ವಿರೋಧಿಸಿದ ವೀರಯೋಧರು ಬ್ರಿಟಿಷ ಸೈನ್ಯ ಸೇರಿ ಜ. 1, 1818 ರಲ್ಲಿ ನಡೆದ ಕೋರೆಗಾವ್ ಕದನದಲ್ಲಿ ಬೆರಳೆಣಿನಿಕೆಯಷ್ಟು (500) ವೀರರು ಅಖಂಡ ಪೇಶ್ವೆ ಸೈನ್ಯದೆದುರು ದಿಗ್ವಿವಿಜಯ ಸಾಧಿಸಿದ್ದಾರೆ. ಇಂತಹ ಇತಿಹಾಸ ಕಟ್ಟಿದವರ ನೆನಪನ್ನು ಸಮುದಾಯಕ್ಕೆ ಮುಟ್ಟಿಸುವ ನಿಟ್ಟಿನಲ್ಲಿ ಪಠ್ಯ ಪುಸ್ತಕದಲ್ಲಿ ಅಳವಡಿಸುವಂತೆ ಸರ್ಕಾರಕ್ಕೆ ಆಗ್ರಹ ಮಾಡಿದರು. ಅಲ್ಲದೆ, ಕರ್ನಾಟಕದಲ್ಲಿ ಚಿತ್ರದುರ್ಗದ ವೀರ ವನಿತೆ ಒನಕೆ ಓಬವ್ವನನ್ನು ಸರ್ಕಾರ ಮರೆತಿದೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಪುತ್ಥಳಿಯನ್ನು ಸ್ಥಾಪಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಬೇಕು ಎಂದರು. ದಲಿತ ಮುಖಂಡ ಮಲ್ಲಿಕಾರ್ಜುನ ಕಲಕಂಬಿ, ದಲಿತ ಯುವ ಸೇನಾ ಸಮಿತಿ ಅಧ್ಯಕ್ಷ ವಿಜಯ ಮುಳಗುಂದ ಮಾತನಾಡಿದರು. ಬಿ.ಎನ್. ಸಿಂಗಾಡಿ, ಬಸವರಾಜ ಈರಣ್ಣವರ, ಚಲವಾದಿ ಮಹಾಸಭಾ ಗದಗ ಜಿಲ್ಲಾಧ್ಯಕ್ಷ ಎಲ್.ನಾರಾಯಣಸ್ವಾಮಿ, ಅಶೋಕ ಕಾಳೆ, ಸಿದ್ದಪ್ಪ ಲಿಂಗದಾಳ, ಆನಂದ ಸಿಂಗಾಡಿ, ಬಸವರಾಜ ಮಡಿಕೇಶ್ವರ, ರಮೇಶ ಕಡಿಯವರ, ಶರಣಪ್ಪ ಕಡಿಯವರ, ಮನೋಹರ ಸಿಂಗಾಡಿ ಮುಂತಾದವರು ಉಪಸ್ಥಿತರಿದ್ದರು. ಮನೋಹರ ಸಿಂಗಾಡಿ ಸ್ವಾಗತಿಸಿದರು. ಬಾಲರಾಜ ಅರಬರ ನಿರೂಪಿಸಿದರು. ಅಪ್ಪು ಹಿತ್ತಲಮನಿ ವಂದಿಸಿದರು.
--
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

