ಬುದ್ಧಿಮಾಂದ್ಯ ಮಕ್ಕಳ ಪಾಲನೆಗೆ ನೆರವು ನೀಡಿ
ಕನ್ನಡಪ್ರಭ ವಾರ್ತೆ, ಗದಗ, ಜ. 2
ಬುದ್ಧಿಮಾಂದ್ಯ, ಅಂಧ, ಅನಾಥ ಹಾಗೂ ವಿಶೇಷ ಅಗತ್ಯವುಳ್ಳ ವಿದ್ಯಾರ್ಥಿಗಳ ಶಿಕ್ಷಣ, ಪಾಲನೆ ಹಾಗೂ ತರಬೇತಿ ನೀಡುತ್ತಿರುವ ಸಂಘ, ಸಂಸ್ಥೆಗಳಿಗೆ ಸರ್ಕಾರ ವಿಶೇಷ ಗಮನ ನೀಡಿ ಸಹಾಯ, ಸಹಕಾರ ನೀಡಬೇಕು ಎಂದು ನವಕರ್ನಾಟಕ ಜನಪರ ಅಭಿವೃದ್ಧಿ ವೇದಿಕೆಯ ಕಾರ್ಮಿಕ ಘಟಕದ ರಾಜ್ಯಾಧ್ಯಕ್ಷ ಎಸ್.ಎಸ್. ರಡ್ಡೇರ ಹೇಳಿದರು.
ಅವರು ಬುಧವಾರ ನಗರದ ಮಂಜು ಶಿಕ್ಷಣ ಸಂಸ್ಥೆಯ ಬುದ್ಧಿಮಾಂದ್ಯ ಮಕ್ಕಳ ವಸತಿ ಶಾಲೆಯಲ್ಲಿ ಆದರ್ಶ ಶಿಕ್ಷಣ ಸಮಿತಿಯ ಪಪೂ ವಾಣಿಜ್ಯ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಆಯೋಜಿಸಿದ್ದ ಹೊಸ ವರ್ಷದ ಸ್ವಾಗತಾಚರಣೆ ಸಮಾರಂಭದಲ್ಲಿ ಮಾತನಾಡಿದರು.
ಇಂದಿನ ಯುವಕರು ಬಾರ್, ಪಬ್, ರೆಸ್ಟೋರೆಂಟ್ಗಳಲ್ಲಿ ಹೊಸ ವರ್ಷಾಚರಣೇ ಮಾಡುವುದೇ ಹೆಚ್ಚು. ಆದರೆ, ಆದರ್ಶ ಶಿಕ್ಷಣ ಸಮಿತಿಯ ಕಾಲೇಜು ವಿದ್ಯಾರ್ಥಿಗಳು ಬುದ್ಧಿಮಾಂದ್ಯ ಮಕ್ಕಳೊಂದಿಗೆ ಕೇಕ್ ಕತ್ತರಿಸಿ ಅವರಿಗೆ ಸಹಿ ತಿನ್ನಿಸಿ, ತಾವು ತಿಂದು ಸಂಭ್ರಮಿಸಿ ಅವರಿಗೆ ನೆನಪಿನ ಕಾಣಿಕೆಗಳನ್ನು ನೀಡುವ ಮೂಲಕ ವಿನೂತನವಾಗಿ ಹೊಸ ವರ್ಷವನ್ನು ಸ್ವಾಗತಿಸಿದ್ದು ಮಾದರಿಯಾಗಿದೆ ಎಂದರು. ಅತಿಥಿಯಾಗಿ ಪಾಲ್ಗೊಂಡಿದ್ದ ನವ ಕರ್ನಾಟಕ ಜನಪರ ವೇದಿಕೆಯ ರಾಜ್ಯಾಧ್ಯಕ್ಷ ಪಿ. ಸುಬ್ರಮಣ್ಯಂರೆಡ್ಡಿ ಮಾತನಾಡಿ, ಮಂಜು ಶಿಕ್ಷಣ ಸಂಸ್ಥೆಯ ಬುದ್ಧಿಮಾಂದ್ಯ ಮಕ್ಕಳ ವಸತಿ ಶಾಲೆಯಲ್ಲಿ ಮಕ್ಕಳನ್ನು ವಿಶೇಷ ಕಾಳಜಿಯಿಂದ ತರಬೇತಿಗೊಳಿಸಿ ಅವರಲ್ಲಿ ಸ್ವಸಾಮರ್ಥ್ಯ ಹೆಚ್ಚಿಸುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯವಾದುದು ಎಂದರು. ಆದರ್ಶ ಶಿಕ್ಷಣ ಸಮಿತಿ ಪಪೂ ಕಾಲೇಜಿನ ಪ್ರಾಚಾರ್ಯ ಡಾ. ಎಂ.ಎಲ್. ಗುಳೇದಗುಡ್ಡ ಮಾತನಾಡಿದರು. ಸುವರ್ಣ ರಡ್ಡೇರ, ಬಿ.ಪಿ. ಜೈನರ, ಶಿವಕುಮಾರ ರಾಮನಕೊಪ್ಪ, ಉಪನ್ಯಾಸಕ ಆರ್.ಆರ್. ಕುಲಕರ್ಣಿ, ಮಂಜು ಶಿಕ್ಷಣ ಸಂಸ್ಥೆ ಅಧ್ಯಕ್ಷ ಶಂಕರಸಿಂಗ್ ರಜಪೂತ, ಎನ್.ಕೆ. ಕೊರ್ಲಹಳ್ಳಿ, ಎನ್. ರಾಮರಾವ್, ಪ್ರಾ. ವಿ.ಕೆ. ಸೊರಟೂರ, ಗಿರೀಶ ರಡ್ಡೇರ, ಗಣೇಶ ಬೈರವಾಡೆ, ಆಕಾಶ ಕರಿಯಲ್ಲಪ್ಪನವರ, ಪವನ ಕಲಬುರ್ಗಿ, ಅಭಿಷೇಕ ಕುರುಗೋಡ, ಲಲಿತ ಜೈನ, ಪ್ರವೀಣ ರಡ್ಡೇರ, ಅನುಷಾ ಮುಂತಾದವರು ಇದ್ದರು. ಸುನೀಲ ಯಲ್ಲಪ್ಪಗೌಡರ ಸ್ವಾಗತಿಸಿದರು. ವಿನಾಯಕ ಪವನಶೆಟ್ಟಿ ನಿರೂಪಿಸಿದರು. ಪ್ರಸಾದ ಕೂಗುಮಠ ವಂದಿಸಿದರು.
--
ಚೌಡಯ್ಯ ಜಯಂತಿ: ಸರ್ಕಾರಿ ರಜೆ ಘೋಷಿಸಿ
ಗದಗ: ಜ. 21ರಂದು ನಿಜಶರಣ ಅಂಬಿಗರ ಚೌಡಯ್ಯನವರ ಜಯಂತಿಯಂದು ಸರ್ಕಾರಿ ರಜೆ ಘೋಷಿಸಬೇಕೆಂದು ಸಮಿತಿಯ ಜಿಲ್ಲಾಧ್ಯಕ್ಷ ಬಿ.ಎನ್. ಯರನಾಳ ಹೇಳಿದರು.
ನಗರದ ರೋಟರಿ ಐ ಕೇರ್ ಸೆಂಟರ್ನಲ್ಲಿ ಗದಗ ಜಿಲ್ಲಾ ನಿಜಶರಣ ಅಂಬಿಗರ ಚೌಡಯ್ಯನವರ ವಿವಿಧೋದ್ದೇಶ ಸೇವಾ ಸಮಿತಿಯ ಆಶ್ರಯದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದರು. ಸಮಿತಿಯ ಪ್ರಧಾನ ಕಾರ್ಯದರ್ಶಿ ಜೆ. ಬಿಗಾರವಾಡ ಮಾತನಾಡಿ, ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕೆಂದರು. ಸಮಾಜದ ಗೌರವಾಧ್ಯಕ್ಷ ಐ.ಬಿ. ಬಾರಕೇರ, ವಿ.ಜಿ. ಬಾರಕೇರ, ವಸಂತ ದೊಡ್ಡಮನಿ, ಬಿ.ವೈ. ಬಾರಕೇರ, ಶ್ರೀಧರ ಸುಲ್ತಾನಪುರ, ಬಿ.ಬಿ. ಗುಳಬಾಳ, ಐ.ವಿ. ಬೆಳ್ಳಿಕಟ್ಟಿ, ಪರಶುರಾಮ ಬಾರಕೇರ, ರಾಮಣ್ಣ, ಗುರು ತಿರ್ಲಾಪುರ, ಕೃಷ್ಣಾ ಅಣ್ಣಿಗೇರಿ, ವಾಸುದೇವ ಲಕ್ಷ್ಮೇಶ್ವರ, ಚಂದ್ರಶೇಖರ, ಲಕ್ಷ್ಮಣ ಬಾರ್ಕಿ, ಯಲ್ಲಪ್ಪ ಬಾರಕೇರ, ದೇವೇಂದ್ರ ಅಂಬಿಗೇರ, ದಿಲೀಪ ಮುಂಡರಗಿ, ರಾಮಣ್ಣ ಪೂಜಾರ, ಪ್ರಕಾಶ ಪೂಜಾರ ಮುಂತಾದವರು ಪಾಲ್ಗೊಂಡಿದ್ದರು. ಮಂಜುನಾಥ ಸುಣಗಾರ ಸ್ವಾಗತಿಸಿ, ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

