ಕಾಮಗಾರಿ ಕಳಪೆ: ಹಾವಿನಾಳ ಕಿಡಿ
ಮುಂಡರಗಿ: ತಾಲೂಕಿನ ಬಿದರಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಆರ್.ಎಂ.ಎಸ್. ಯೋಜನೆ ಅಡಿಯಲ್ಲಿ ರು. 46.68 ಲಕ್ಷದಲ್ಲಿ ನಿರ್ಮಾಣವಾಗುತ್ತಿರುವ ಎರಡು ಮಹಡಿಯ ಕಟ್ಟಡ ಸಂಪೂರ್ಣ ಕಳಪೆಯಾಗಿದೆ ಎಂದು ಜಿಪಂ ಸದಸ್ಯ ಹೇಮಗಿರೀಶ ಹಾವಿನಾಳ ಆರೋಪಿಸಿದರು.
ಅವರು ಶಾಲೆಯ ಎಸ್ಡಿಎಂಸಿ ಸದಸ್ಯರ ದೂರಿನನ್ವಯ ಬುಧವಾರ ಶಾಲೆಗೆ ಭೇಟಿ ನೀಡಿ, ಕಟ್ಟಡ ವೀಕ್ಷಣೆ ಮಾಡಿ ಮಾತನಾಡಿದ ಅವರು, ಕಟ್ಟಡ ಇನ್ನೂ ನಿರ್ಮಾಣದ ಹಂತದಲ್ಲಿಯೇ ಕಳಪೆಯಾಗಿದೆ. ಇದಕ್ಕೆ ಬಳಕೆ ಮಾಡಲಾಗಿರುವ ಸಿಮೆಂಟ್ ಇಟ್ಟಂಗಿಗಳು ಕಳಪೆ ಮಟ್ಟದ್ದಾಗಿವೆ. ಈಗಾಗಲೇ ಅನೇಕ ಕಡೆಗಳಲ್ಲಿ ಇಟ್ಟಂಗಿಗಳು ಒಡೆದು ಹಾಳಾಗಿ ಹೋಗಿದ್ದು, ಮುಂದೆ ಇದರ ಮೇಲೆ ನಿರ್ಮಾಣವಾಗಬೇಕಾಗಿದ್ದ ಎರಡು ಮಹಡಿಗಳ ಕಟ್ಟಡದ ಗತಿ ದೇವರೇ ಬಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗುಣಮಟ್ಟದ ಕಟ್ಟಡ ನಿರ್ಮಿಸಲು ಸಂಬಂಧಪಟ್ಟವರಿಗೆ ತಾಕೀತು ಮಾಡಬೇಕೆಂದು ಕೆಲವು ಎಸ್ಡಿಎಂಸಿ ಸದಸ್ಯರು ಹೇಮಗಿರೀಶ ಹಾವಿನಾಳ ಅವರಿಗೆ ಒತ್ತಾಯಿಸಿದರು.
ಹೇಮಗಿರೀಶ ಹಾವಿನಾಳ ಸಂಬಂಧಪಟ್ಟವರ ಜತೆಗೆ ದೂರವಾಣಿಯಲ್ಲಿ ಮಾತನಾಡಿ, ಕಟ್ಟಡದ ಗುಣಮಟ್ಟವನ್ನು ಕಾಯ್ದುಕೊಳ್ಳದಿದ್ದರೆ ಕಟ್ಟಡವನ್ನು ಸಂಪೂರ್ಣ ನಾಶಮಾಡುವುದಾಗಿ ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ಲೋಕೇಶ ದೊಡ್ಡಮನಿ, ಸುರೇಶ ಮಾಗಡಿ, ಮುತ್ತಪ್ಪ ಚವಡಾಳ, ಸಿದ್ದಲಿಂಗಯ್ಯ ಗುರುವಿನ, ಶಾಂತಪ್ಪ ರಾಟಿ, ಪೂರ್ವಾಚಾರಿ ಸೋನಾರ ಮುಂತಾದವರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

