ಗದಗ

ಪ್ರತಿಭಾ ಕಾರಂಜಿ: ರಾಜ್ಯಮಟ್ಟಕ್ಕೆ ಆಯ್ಕೆ

Published On :

ಗಜೇಂದ್ರಗಡ:  ಗದಗದಲ್ಲಿ ಈಚೆಗೆ ನಡೆದ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಸ್ಥಳೀಯ ಬಾಲಕಿಯರ ಸರ್ಕಾರಿ ಮಾದರಿ ಶಾಲೆಯ ವಿದ್ಯಾರ್ಥಿನಿಯರು ಪ್ರಥಮ ಸ್ಥಾನದಲ್ಲಿ ವಿಜೇತರಾಗಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಕೋಲಾಟ ಸ್ಪರ್ಧೆಯಲ್ಲಿ ಐಶ್ವರ್ಯ ಚಿಲಕಾ, ದೀಪಾ ಮಳಗಿ, ಸ್ವಾತಿ ಕಮ್ಮಾರ, ಅಮರಮ್ಮ ಪೊಲೀಸಪಾಟೀಲ್, ಲಕ್ಷ್ಮಿ ಪಪ್ತಿ, ಆಯೇಷಾ ಇಟಗಿ, ಪೂಜಾ ರಂಗ್ರೇಜ, ಸುಷ್ಮಾ ಜಾಧವ, ಶಾಹಿಮ ವಾಲಿಕಾರ, ತಂಜೀಲಾ ನಾಲಬಂದ, ಅಂಜುಮ ಅರಳೀಕಟ್ಟಿ, ಪೂರ್ಣಿಮಾ ಸೂಡಿ ಪ್ರಥಮ ಸ್ಥಾನದಲ್ಲಿ ವಿಜೇತರಾಗಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗುವ ಮೂಲಕ ಶಾಲೆಯ ಕೀರ್ತಿ ಹೆಚ್ಚಿಸಿದ್ದಾರೆ. ಕ್ಷೇತ್ರ ಶಿಕ್ಷಣಾಧಿಕಾರಿ ಡಿ.ಐ. ಅಸುಂಡಿ ಮಾತನಾಡಿ, ಶಿಕ್ಷಕರು ಮಕ್ಕಳಿಗೆ ಪ್ರಾಥಮಿಕ ಹಂತದಲ್ಲಿಯೇ ಪಠ್ಯದ ಜತೆ ಕ್ರೀಡಾ ಮನೋಭಾವನೆ ಬೆಳೆಸಬೇಕು ಎಂದರು. ಶಿಕ್ಷಣ ಸಂಯೋಜಕ ಎಂ.ಟಿ. ಕೆಂಪಣ್ಣವರ, ಕ್ಷೇತ್ರ ಸಮನ್ವಯ ಅಧಿಕಾರಿ ಐ.ಎಸ್. ಮಡಿವಾಳರ, ಶಾಲಾ ಮುಖ್ಯಗುರುಮಾತೆ ಕೆ.ಡಿ. ಭಜಂತ್ರಿ, ಎಸ್.ಡಿ.ಎಂ.ಸಿ ಅಧ್ಯಕ್ಷ ರವಿ ಹಾಸಿಗಲ, ಉಪಾಧ್ಯಕ್ಷ ಎಂ.ಎಚ್. ಗುಳೇದ, ದೈಹಿಕ ಶಿಕ್ಷಕ ಎಸ್.ಕೆ. ಮಠದ ಮುಂತಾದವರು ಉಪಸ್ಥಿತರಿದ್ದರು.
--
ಶೋಷಿತರ ಒಡಲಾಳದ ಧ್ವನಿಯೇ ದಲಿತ ಸಾಹಿತ್ಯ
ಗದಗ: ಶತಮಾನಗಳಿಂದ ಸಾಮಾಜಿಕ ವ್ಯವಸ್ಥೆಯಲ್ಲಿ ಅಸ್ಪೃಶ್ಯತೆ, ಜಾತಿ ಕ್ರೌರ್ಯ, ದಬ್ಬಾಳಿಕೆ, ಮೂಢನಂಬಿಕೆ, ಕಂದಾಚಾರ, ಪುರೋಹಿತಶಾಹಿ, ಬಂಡವಾಳಶಾಹಿಗಳ ಕಪಿಮುಷ್ಠಿಯಲ್ಲಿ ಸಿಕ್ಕು ಈ ದೇಶದ ಶೋಷಿತರ ಒಡಲಾಳದಿಂದ ಹೊರಬಂದ ವೇದನೆಯೇ ದಲಿತ ಸಾಹಿತ್ಯ ಎಂದು ಹಿರಿಯ ಹೋರಾಟಗಾರ ವೆಂಕಟೇಶಯ್ಯ ಹೇಳಿದರು.
ಈಚೆಗೆ ಗದಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ನಗರದ ತಾಪಂ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಶನಿವಾರ ಸಾಹಿತ್ಯ ಸಂಜೆ ಮಾಲಿಕೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಮನುಷ್ಯ ಪರವಾದ ಸಂವೇದನೆಯು ಕಥೆ, ಕಾದಂಬರಿ, ಕಾವ್ಯ, ಪ್ರಬಂಧ ಹಾಗೂ ಸೃಜನಶೀಲ ಬರವಣಿಗೆಗಳಲ್ಲಿ ಆದ ಸ್ಫೋಟಕ ಬದಲಾವಣೆಯೇ ದಲಿತ ಸಾಹಿತ್ಯ. ಹಂತ ಹಂತವಾಗಿ ಬೆಳೆದ ದಲಿತ ಸಾಹಿತಕ್ಕೆ ಡಾ. ಸಿದ್ಧಲಿಂಗಯ್ಯ, ಡಾ. ಡಿ.ಆರ್. ನಾಗರಾಜ, ಡಾ. ಬರಗೂರ ರಾಮಚಂದ್ರಪ್ಪ, ಡಾ. ಅರವಿಂದ ಮಾಲಗತ್ತಿ, ಡಾ. ದೇವನೂರ ಮಹಾದೇವ, ಡಾ. ಚನ್ನಣ್ಣ ವಾಲೀಕಾರ ಮೊದಲಾದವರು ತಮ್ಮ ಕೃತಿಗಳ ಮೂಲಕ ಮಾನವೀಯ ಮೌಲ್ಯಗಳನ್ನು ತುಂಬಿ, ಸಾಮಾಜಿಕ ಬದಲಾವಣೆಗೆ ಹೊಸ ರೂಪ ಕೊಟ್ಟು ಬೆಳೆಸಿದರು ಎಂದರು. ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಸಾಪ ಅಧ್ಯಕ್ಷ ಡಾ. ಶಿವಪ್ಪ ಕುರಿ ಮಾತನಾಡಿದರು.ಶಿಕ್ಷಕ ಎಸ್.ಎ. ಅರಮನಿ, ಪ್ರಾ. ಕೆ.ಎಚ್. ಬೇಲೂರ, ಅ.ದ. ಕಟ್ಟಿಮನಿ, ಎಚ್.ಟಿ. ಸಂಜೀವಸ್ವಾಮಿ, ಶಂಕರ ಗಾಣಿಗೇರ, ಪ್ರಕಾಶ ಗಿಡ್ಡಣ್ಣನವರ, ರಮೇಶ ಸಜಗಾರ, ಮಲ್ಲಿಕಾರ್ಜುನ ಪೂಜಾರ, ಜಯಶ್ರೀ ಅಂಗಡಿ, ಶೋಭಾ ಶಲವಡಿ, ತಾಲೂಕು ಕಸಾಪ ಅಧ್ಯಕ್ಷ ಕಿಶೋರಬಾಬು ನಾಗರಕಟ್ಟಿ, ಗೌರವ ಕಾರ್ಯದರ್ಶಿ ಕವಿತಾ ದಂಡಿನ, ಶಶಿಕಾಂತ ಕೊರ್ಲಹಳ್ಳಿ, ಡಿ.ಎಸ್. ತಳವಾರ, ಜಿ.ಎಸ್. ಯತ್ನಟ್ಟಿ, ಲಲಿತಾ ಬೇಲೂರ, ಭಾಗ್ಯಶ್ರೀ ಘಳಗಿ, ಮಂಜುಳಾ ವೆಂಕಟೇಶಯ್ಯ, ವಾಸು ಟೀಕಣದಾರ, ಮಹಾಂತೇಶ ಮದ್ನೂರ, ರಾಘವೇಂದ್ರ, ಎನ್.ಕೆ. ಬಡಿಗೇರ, ಪಿ.ಕೆ. ಮೂಲಿಮಠ, ಆರ್.ಡಿ. ಕಪ್ಪಲಿ. ಬಿ.ಡಿ. ಕಿಲುಬನವರ, ಎಂ.ಕೆ. ಅಡ್ನೂರ, ವೆಂಕಟೇಶ ಬೇಲೂರ, ಶರಣಪ್ಪ ಬಾಲಣ್ಣವರ ಮುಂತಾದವರು ಉಪಸ್ಥಿತರಿದ್ದರು. ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಶರಣು ಗೋಗೇರಿ ಸ್ವಾಗತಿಸಿದರು. ಮಲ್ಲೇಶ ಡಿ.ಎಚ್. ನಿರೂಪಿಸಿದರು. ಡಾ. ಸಂಗಮೇಶ ತಮ್ಮನಗೌಡ್ರ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.