ಉದ್ಯೋಗ ಖಾತ್ರಿ ಯೋಜನೆ ಪ್ರಗತಿಯತ್ತ: ಮಾಳಗಿ
ಮುಂಡರಗಿ: ತಾಲೂಕಿನ 15 ಗ್ರಾಪಂ ವ್ಯಾಪ್ತಿಯಲ್ಲಿ ಅನುಷ್ಠಾನಗೊಂಡ ಮಹಾತ್ಮಾಗಾಂಧಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಈವರೆಗೆ ರು. 9 ಕೋಟಿ 86 ಲಕ್ಷ 32 ಸಾವಿರದ ಕ್ರಿಯಾ ಯೋಜನೆ ಸಿದ್ಧಪಡಿಸಲಾಗಿದೆ ಎಂದು ತಾಪಂ ಇಒ ನಾರಾಯಣ ಮಾಳಗಿ ಹೇಳಿದರು.
ಅವರು ಈಚೆಗೆ ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹೆಚ್ಚುವರಿ ರು. 31 ಕೋಟಿ ಕಾಮಗಾರಿ ನಡೆಯಲಿದೆ. ಈವರೆಗೆ ರು. 5 ಕೋಟಿ 28 ಲಕ್ಷ 59 ಸಾವಿರ ಖರ್ಚಾಗಿದೆ. ಇದು ವೈಯಕ್ತಿ ಕಾಮಗಾರಿಯಾಗಿದೆ. ಒಟ್ಟು ತಾಲೂಕಿನಲ್ಲಿ 23582 ಜಾಬ್ಕಾರ್ಡ್(ಉದ್ಯೋಗ ಚೀಟಿ) ವಿತರಣೆಯಾಗಿದೆ. ಯೋಜನೆಯಲ್ಲಿ ಕೃಷಿ ಹೊಂಡ, ಬದುವು ನಿರ್ಮಾಣ, ತಡೆಗೋಡೆ, ರಸ್ತೆ ನಿರ್ಮಾಣ, ಅಂಗನವಾಡಿ ಕಟ್ಟಡ ಹಾಗೂ ರಾಜೀವಗಾಂಧಿ ಸೇವಾ ಕೇಂದ್ರ (16 ಲಕ್ಷ), ಹೊಳಗಟ್ಟೆ ನಿರ್ಮಾಣ, ಅರಣ್ಯೀಕರಣ ಸೇರಿದೆ. ಇನ್ನು ವೈಯಕ್ತಿಕ ಕಾಮಗಾರಿಗಳಲ್ಲಿ ತೋಟಗಾರಿಕೆ, ತೆಂಗು ಬಾಳೆ, ಚಿಕ್ಕು, ರೇಷ್ಮೆ, ದನಗಳ ಮತ್ತು ಕುರಿಗಳ ಕೊಟ್ಟಿಗೆ ಜತೆಗೆ ನಮ್ಮ ಹಳ್ಳಿ ನಮ್ಮ ನೀರು ಮಾಡಿಕೊಳ್ಳಬಹುದಾಗಿದೆ. ಮುಖ್ಯವಾಗಿ ಮನೆಗೊಂದು ಶೌಚಾಲಯ ನಿರ್ಮಾಣಕ್ಕೆ ಹೆಚ್ಚು ಆದ್ಯತೆ ನೀಡುತ್ತಿದ್ದು, ಬಿಪಿಎಲ್ ಕಾರ್ಡ್ ಹೊಂದಿದವರಿಗೆ, ಸಣ್ಣ, ಅತಿ ಸಣ್ಣ ರೈತರಿಗೆ ರು. 4500 ಸಹಾಯಧನ ಹಾಗೂ ನಿರ್ಮಲ ಭಾರತ ಯೋಜನೆಯಡಿ ರು. 4700 ಸಹಾಯಧನ ಒದಗಿಸಲಾಗುತ್ತಿದೆ. 60 ಕೆರೆಗಳ ಪುನಶ್ಚೇತನದ ಗುರಿ ಹೊಂದಿದ್ದು, 30 ಕೆರೆಗಳ ಸಾಧನೆ ಮಾಡಲಾಗಿದೆ. ಹಾಗೆಯೇ 4950 ಶೌಚಾಲಯ ನಿರ್ಮಾಣ ಗುರಿ ಹೊಂದಲಾಗಿದ್ದು, 1471 ಶೌಚಾಲಯ ನಿರ್ಮಾಣದ ಸಾಧನೆ ಮಾಡಲಾಗಿದೆ. ನಮ್ಮ ಹೊಲ ನಮ್ಮ ದಾರಿ-ಗುರಿ 44, ಸಾಧನೆ-5, 8 ರುದ್ರಭೂಮಿಗಳ ಗುರಿ ಹೊಂದಲಾಗಿದ್ದು, ಈಗಾಗಲೇ 8 ರುದ್ರಭೂಮಿ ನಿರ್ಮಾಣ ಕೈಗೊಳ್ಳಲಾಗಿದೆ. 40 ಆಟದ ಮೈದಾನದಲ್ಲಿ 2 ಆಟದ ಮೈದಾನಗಳ ಕಾಮಗಾರಿ ಪ್ರಗತಿಯಲ್ಲಿದೆ.
17 ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣದ ಗುರಿ ಹೊಂದಲಾಗಿದ್ದು, 3 ಘಟಕಗಳನ್ನು ನಿರ್ಮಿಸಲಾಗಿದೆ. ಯೋಜನೆಯಲ್ಲಿ ಕಾಯಕ ಸಂಘ ಮಾಡಿದ್ದು ಕಾಮಗಾರಿಗೆ ಉದ್ಯೋಗಕ್ಕೆ ಕರೆದುಕೊಂಡು ಬರುವ ಮುಖ್ಯಸ್ಥರಿಗೆ ಕಾಯಕ ಬಂಧು ಎಂದು 750 ಜನರನ್ನು ನೇಮಕ ಮಾಡಿಕೊಳ್ಳಲಾಗಿದೆ ಎಂದರು. ಗ್ರಾಪಂ ಸಹಾಯಕ ನಿರ್ದೇಶಕ ಎಸ್.ಕೆ. ಪಾಟೀಲ ಉದ್ಯೋಗ ಖಾತ್ರಿ ಮೂಲ ಉದ್ದೇಶ ಹಾಗೂ ಆಯಾ ಪಂಚಾಯಿತಿ ವ್ಯಾಪ್ತಿಯಲ್ಲಿ ಕೈಗೊಳ್ಳಬೇಕಾದ ಕಾಮಗಾರಿಗಳ ಕುರಿತು ಮಾಹಿತಿ ನೀಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

