ಗದಗ

ಕಾಲುವೆ ನೀರು ಬಂದ್ ಮಾಡಿದ್ರೆ ಉಗ್ರ ಹೋರಾಟ

Published On :

ಕನ್ನಡಪ್ರಭ ವಾರ್ತೆ, ನರಗುಂದ, ಜ. 3
ನರಗುಂದ ತಾಲೂಕಿನ ರೈತ ಸಮುದಾಯ ಹಿಂದಿನ 2 ವರ್ಷದ ಬರಗಾಲ, ಮೇಲಾಗಿ ಈ ವರ್ಷ ಮುಂಗಾರು ಹಂಗಾಮಿನಲ್ಲಿಯೂ ಮಳೆಯಾಗಿಲ್ಲ. ಇಂತಹ ಸಂದರ್ಭದಲ್ಲಿ ಮಲಪ್ರಭಾ ಜಲಾಶಯಕ್ಕೆ ಹೊಂದಿಕೊಂಡಿರುವ ರೈತರ ಜಮೀನುಗಳಿಗೆ ನೀರು ಒದಗಿಸುವ ನೀರಾವರಿ ಕಾಲವೆಗಳಿಗೆ ನೀರು ಬಂದ್ ಮಾಡಿದರೆ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಕಳಸಾ ಬಂಡಾರಿ ಹೋರಾಟ ಸಮಿತಿ ಅಧ್ಯಕ್ಷ ವಿಜಯ ಕುಲಕರ್ಣಿ ಹೇಳಿದರು.
ಅವರು ಗುರುವಾರ ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಭಾಗದ ವಾಣಿಜ್ಯ ಬೆಳೆ ಎಂದೇ ಕರೆಯುವ ನೀರಾವರಿ ಗೋದಿ, ಕಡಲೆ, ಜೋಳ, ಸೂರ್ಯಕಾಂತಿ ಬೆಳೆಗೆ ಬೇಕಾದ ತೇವಾಂಶದ ಪ್ರಮಾಣದಷ್ಟು ಹಿಂಗಾರು ಮಳೆಯಾಗಿಲ್ಲ. ಇಂತಹ ಸಂದರ್ಭದಲ್ಲಿ ರೈತರ ಸಭೆ ಕರೆಯದೇ ದಿಢೀರನೆ ರೈತರ ಜಮೀನುಗಳಿಗೆ ನೀರು ದೊರಕಿಸುವ ಕಾಲುವೆ ನೀರು ಬಂದ್ ಮಾಡುತ್ತೇವೆಂದು ಸರ್ಕಾರ, ನೀರಾವರಿ ನಿಗಮದ ಅಧ್ಯಕ್ಷರು ಮತ್ತು ಅಧಿಕಾರಿಗಳು ನಿರ್ಧಾರ ತಗೆದುಕೊಂಡಿದ್ದು ಖಂಡನೀಯ.
ಕಾಲುವೆ ನೀರು ಬಂದ್ ಮಾಡಬೇಕೆಂದರೆ ಈ ಭಾಗದ ರೈತರ ಸಭೆ ಕರೆದು ಕಾಲುವೆ ಬಂದ್ ಮಾಡಿದರೆ ಆಗುವ ಹಾನಿಯ ಕುರಿತು ರೈತರೊಂದಿಗೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳಬೇಕಿತ್ತು. ಆದರೆ, ಈ ಭಾಗದ ರೈತರ ಸಭೆ ಕರೆಯದೇ ಏಕಪಕ್ಷೀಯವಾಗಿ ನಿರ್ಧಾರ ಕೈಗೊಂಡಿರುವುದು ಖಂಡನಾರ್ಹ. ಇಂತಹ ಸಂದರ್ಭದಲ್ಲಿ ಕಾಲುವೆ ನೀರು ಬಂದ್ ಮಾಡಿದಲ್ಲಿ ಜ. 5ರಂದು ಬೀದಿಗಿಳಿದು ಉಗ್ರ ಹೋರಾಟ ಹಮ್ಮಿಕೊಳ್ಳುವುದಾಗಿ ತಿಳಿಸಿದರು. ಬಸನಗೌಡ ಚಿಕ್ಕನಗೌಡ್ರ, ಚಳಪ್ಪ ನಾಯ್ಕರ, ರುದ್ರಪ್ಪ ಗಾಣಿಗೇರ, ಅಣ್ಣಪ್ಪಗೌಡ ಪಾಟೀಲ, ಅಲ್ಲಿಸಾಬ್ ನದಾಫ, ಬಸಪ್ಪ ಗುಡೇದರಿ, ಗುರುಶಾಂತ ನರಸಾಪುರ, ಎಂ.ಟಿ. ಬದಾಮಿ, ಟಿ.ಈ. ಈರನಗೌಡ್ರ ಮುಂತಾದವರು ಉಪಸ್ಥಿತರಿದ್ದರು.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.