ಗದಗ

ಗೋವಿನಜೋಳ ಖರೀದಿ ವಿಳಂಬ: ಪ್ರತಿಭಟನೆ

Published On :

ಶಿಗ್ಗಾಂವಿ: ಪಟ್ಟಣದ ಎಪಿಎಂಸಿಯಲ್ಲಿ ಗೋವಿನಜೋಳ ಖರೀದಿಸಲು ವಿಳಂಬ ಮಾಡಿದ್ದರಿಂದ ರೊಚ್ಚಿಗೆದ್ದ ರೈತರು ಒಂದೂವರೆ ತಾಸಿಗೂ ಹೆಚ್ಚು ಕಾಲ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸಿದ ಘಟನೆ ಶುಕ್ರವಾರ ಜರುಗಿದೆ.
ಶಿಗ್ಗಾಂವಿಯಲ್ಲಿ ಗೋವಿನಜೋಳ ಖರೀದಿ ಕೇಂದ್ರ ಡಿ. 23ರಂದು ಪ್ರಾರಂಭವಾಗಿದೆ. ಡಿ. 30ರಿಂದ ಗೋವಿನ ಜೋಳವನ್ನು ಖರೀದಿಸುವ ಪ್ರಕ್ರಿಯೆ ಆಮೆ ವೇಗದಿಂದ ಸಾಗುತ್ತಿತ್ತು. ತಾಲೂಕಿನ ರೈತರು ಬಾಡಿಗೆ ಟ್ರ್ಯಾಕ್ಟರ್‌ಗಳಲ್ಲಿ ಗೋವಿನ ಜೋಳ ಹೇರಿಕೊಂಡು ಮಾರಾಟಕ್ಕೆ ತರುತ್ತಿದ್ದರು. ಆದರೆ, ತಂದು ಎರಡು-ಮೂರು ದಿನಗಳಾದರೂ ಖರೀದಿಸಲು ಮುಂದಾಗುತ್ತಿಲ್ಲ ಎಂದು ಆರೋಪಿಸಿದ ರೈತರು ಹೆದ್ದಾರಿಯಲ್ಲಿ ಟೈರ್‌ಗೆ ಬೆಂಕಿ ಹಚ್ಚಿ, ಪ್ರತಿಭಟನೆ ನಡೆಸಿದರು. ಗೋವಿನ ಜೋಳವನ್ನು ತಂದ ದಿನವೇ ಖರೀದಿಸಬೇಕು. ಇಲ್ಲದಿದ್ದರೆ ಟ್ರ್ಯಾಕ್ಟರ್ ಬಾಡಿಗೆ, ಕೂಲಿ ನೀಡುವ ಹೆಚ್ಚುವರಿ ಹೊರೆ ರೈತರ ಮೇಲೆ ಬೀಳುತ್ತದೆ. ವಿಳಂಬ ನೀತಿ ಅನುಸರಿಸಬಾರದು ಎಂದು ಆವೇಶದಿಂದ ಹೇಳಿದರು.
ಸ್ಥಳಕ್ಕೆ ಆಗಮಿಸಿದ ಶಾಸಕ ಬಸವರಾಜ ಬೊಮ್ಮಾಯಿ, ಜಿಲ್ಲಾಧಿಕಾರಿ, ಇತರ ಅಧಿಕಾರಿಗಳ ಜತೆ ದೂರವಾಣಿಯಲ್ಲಿ ಮಾತನಾಡಿ, ಗೋವಿನಜೋಳ ಖರೀದಿ ತ್ವರಿತಗತಿಯಲ್ಲಿ ಆಗುವಂತೆ ನೋಡಿಕೊಳ್ಳಲು ತಾಕೀತು ಮಾಡಿದರು. ರೈತರ ಪ್ರತಿಭಟನೆಯಿಂದ ಹೆದ್ದಾರಿಯಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಪ್ರತಿಭಟನಾಕಾರರು-ವಾಹನ ಮಾಲೀಕರ ಮಧ್ಯೆ ಮಾತಿನ ಚಕಮಕಿ  ನಡೆಯಿತು.
ಕಲ್ಲಪ್ಪ ಮಾರನಬೀಡ, ಪರಮೇಶಪ್ಪ ಕುಂದಗೋಳ, ಶಂಕ್ರಪ್ಪ ಆಲಳ್ಳಿ, ಸಿದ್ದಾರ್ಥಗೌಡ ಪಾಟೀಲ, ಶಿವಪ್ಪ ಬನ್ನಿಕೊಪ್ಪ, ದಶರಥ ಲಂಗೋಟಿ, ರಾಮಣ್ಣ ವಾಗಣ್ಣವರ, ರುದ್ರಯ್ಯ ಹಿರೇಮಠ, ದೇವರಾಜ ಹುಳ್ಳಿಕೊಪ್ಪಿ, ಚನ್ನಯ್ಯ ಪೂಜಾರ, ಖಾದರಭಾಷಾ ಮುಲ್ಲಾ, ಬಸವರಾಜ, ವಡ್ಡರ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.