ಮಕ್ಕಳು ಪರೀಕ್ಷಾ ಭೀತಿಯಿಂದ ಹೊರಬನ್ನಿ
ಕನ್ನಡಪ್ರಭ ವಾರ್ತೆ, ಲಕ್ಷ್ಮೇಶ್ವರ, ಜ. 3
ಮಕ್ಕಳು ಪರೀಕ್ಷಾ ಭೀತಿಯಿಂದ ಹೊರಬಂದಾಗ ಮಾತ್ರ ವಿದ್ಯಾರ್ಥಿಗಳು ಶೈಕ್ಷಣಿಕ ಪ್ರಗತಿ ಕಾಣಲು ಸಾಧ್ಯ ಎಂದು ಸರ್ವಶಿಕ್ಷಣ ಅಭಿಯಾನದ ಯೋಜನಾಧಿಕಾರಿ ಜಿ.ಎಲ್. ಬಾರಾಟಕ್ಕಿ ಹೇಳಿದರು.
ಗುರುವಾರ ಸಮೀಪದ ಗೊಜನೂರಿನ ಸರ್ಕಾರಿ ಪ್ರೌಢಶಾಲೆಗೆ ಜಿಲ್ಲಾ ಉಪನಿರ್ದೇಶಕರ ಕಚೇರಿಯ ಮಿಂಚಿನ ಸಂಚಾರ ತಂಡ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿದರು.
ಎಸ್ಎಸ್ಎಲ್ಸಿ ನಿಮ್ಮ ಮುಂದಿನ ಶೈಕ್ಷಣಿಕ ಜೀವನದ ಮೆಟ್ಟಿಲಾಗಿದ್ದು, ಉತ್ತಮ ಫಲಿತಾಂಶ ನಿಮಗೆ ದಾರಿಯಾಗಲಿದೆ. ಆದ್ದರಿಂದ, ವಿದ್ಯಾರ್ಥಿಗಳು ಆ ದಿನದ ಪಾಠಗಳನ್ನು ಅಂದೇ ಮರು ಪಠಣ ಮಾಡಬೇಕು. ತಿಳಿಯದಿದ್ದರೆ ಕೀಳರಿಮೆ ಬಿಟ್ಟು ಶಿಕ್ಷಕರನ್ನು ಕೇಳಿ ತಿಳಿದುಕೊಳ್ಳಿ. ಕೇವಲ ಪರೀಕ್ಷಾ ಸಮಯದಲ್ಲಿ ಅಭ್ಯಾಸ ಮಾಡುವ ಮೂಲಕ ಮಾನಸಿಕ ಒತ್ತಡಕ್ಕೆ ಒಳಗಾಗಬೇಡಿ. ಶ್ರದ್ಧೆ, ಪರಿಶ್ರಮದಿಂದ ಅಭ್ಯಾಸ ಮಾಡಿದಲ್ಲಿ ಉತ್ತಮ ಫಲಿತಾಂಶ ಪಡೆಯಲು ಸಾಧ್ಯ ಎಂದರು.
ತರಗತಿಯ ಕಲಿಕಾ ಬೋಧನಾ ಪ್ರಕ್ರಿಯೆಗಳನ್ನು ವೀಕ್ಷಿಸಿ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳೊಂದಿಗೆ ಫಲಿತಾಂಶ ಉತ್ತಮ ಪಡಿಸಿಕೊಳ್ಳಲು ಹಾಗೂ ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಪರೀಕ್ಷೆಗೆ ಸಿದ್ಧಪಡಿಸಿಕೊಳ್ಳುವ ಸರಳ ಸೂತ್ರಗಳ ಬಗ್ಗೆ ತಿಳಿಸಿ ಅವರೊಂದಿಗೆ ಸಂವಾದ ನಡೆಸಿದರು.
ಮಿಂಚಿನ ಸಂಚಾರ ತಂಡದಲ್ಲಿದ್ದ ಆರ್ಎಂಎಸ್ಎ ಯೋಜನಾಧಿಕಾರಿ ಯುವರಾಜ ನಾಯಕ, ಐ.ಆರ್. ಅಕ್ಕಿ ಶಾಲೆಯಲ್ಲಿನ ಕುಡಿಯುವ ನೀರು, ಶೌಚಾಲಯ, ಅಕ್ಷರ ದಾಸೋಹ, ಮೈದಾನ ಇತ್ಯಾದಿ ಮೂಲಭೂತ ಸೌಲಭ್ಯಗಳ ಬಗ್ಗೆ ಹಾಗೂ ಆಡಳಿತಾತ್ಮಕವಾಗಿ ದಾಖಲಾತಿ, ನಗದು ಪುಸ್ತಕ, ದಾಸ್ತಾನು ಪುಸ್ತಕ, ತರಗತಿಯ ಬೊಧನಾ ಪ್ರಕ್ರಿಯಯಲ್ಲಿ ಅಳವಡಿಸಿಕೊಂಡಿರುವ ನೂತನ ವಿಧಾನಗಳ ಬಗ್ಗೆ ಪರಿಶೀಲಿಸಿ ಮುಖ್ಯೋಪಾಧ್ಯಯರ ಕಾರ್ಯ ವೈಖರಿಯ ಬಗ್ಗೆ ಪ್ರಶಂಸೆ ವ್ಯಕ್ತ ಪಡಿಸಿದರು. ಈ ಸಂದರ್ಭದಲ್ಲಿ ಮುಖ್ಯೋಪಾಧ್ಯಾಯ ರವಿ ಬೆಂಚಳ್ಳಿ, ಸಹ ಶಿಕ್ಷಕರು ಹಾಜರಿದ್ದರು.
--
ಗುರ್ಲಕಟ್ಟಿ ಗ್ರಾಮದಲ್ಲಿ ಕಲಿಕೋತ್ಸವ
ನರಗುಂದ: ಜಗಾಪುರ ಕ್ಲಸ್ಟರ್ ಮಟ್ಟದ ಕಲಿಕೋತ್ಸವ ತಾಲೂಕಿನ ಗುರ್ಲಕಟ್ಟಿ ಗ್ರಾಮದಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ಜರಗಿತು.
ಕಾರ್ಯಕ್ರಮ ಉದ್ದೇಶಿಸಿ ಪ್ರಾಸ್ತಾವಿಕವಾಗಿ ಕ್ಲಸ್ಟರ್ ಸಿ.ಆರ್.ಪಿ. ಆರ್.ಎಚ್. ಹಾನಾಪುರ ಮಾತನಾಡಿ, ವಿವಿಧ ವಿಷಯಗಳ ಬಗ್ಗೆ ತಿಳಿಸಿ, ಮಕ್ಕಳ ಸಮಗ್ರ ಬೆಳವಣಿಗೆ ಮತ್ತು ಶಿಕ್ಷಣ ವ್ಯವಸ್ಥೆಯ ಕುರಿತು ತಿಳಿಸಿದರು. ಉದ್ಘಾಟನೆಯನ್ನು ಎಸ್.ಡಿ.ಎಂ.ಸಿ. ಅಧ್ಯಕ್ಷ ಡಿ.ಕೆ. ಬಾಳನಗೌಡ್ರ ನೆರವೇರಿಸಿದರು.
ಜಿ.ಕೆ. ಹುಡೇದಮನಿ, ಹನುಮವ್ವ ಬೆಳ್ಳರೆ, ಡಿ.ಎಸ್. ಪಾಟೀಲ, ದೊಡ್ಡಮುದಿಗೌಡ ಮುದ್ನೂರ, ಪ್ರಧಾನ ಗುರುಗಳಾದ ಎಸ್.ಎನ್. ಭೂಸಲೆ, ಪರಮೇಶ್ವರ ವೈ.ಎಫ್. ಶಿಕ್ಷಕ ಎ.ಕೆ. ಪೂಜಾರ, ಎಸ್.ಡಿ.ಎಂ.ಸಿ. ಸರ್ವ ಸದಸ್ಯರು ಇದ್ದರು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

