ಗದಗ

ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ ವಿತರಣೆ

Published On :

ಗಜೇಂದ್ರಗಡ:  ಮಕ್ಕಳಲ್ಲಿ ಕಲಿಕೆಯ ಪ್ರಮಾಣ ಹೆಚ್ಚಿಸಲು ಶಾಲಾ ಸುಧಾರಣಾ ಸಮಿತಿ ಹಾಗೂ ಸಮುದಾಯದ ಪಾತ್ರ ಬಹು ಮುಖ್ಯವಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಸಮೂಹ ಸಂಪನ್ಮೂಲ ವ್ಯಕ್ತಿ ಬಿ.ಸಿ. ಅಂಗಡಿ ಹೇಳಿದರು. ಅವರು ಈಚೆಗೆ ಸಮೀಪದ ಪುರ್ತಗೇರಿ ಸರ್ಕಾರಿ ಪ್ರಾಥಮಿಕ ಶಾಲೆಯ ಎಸ್ಸಿ, ಎಸ್ಟಿ ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ ವಿತರಿಸಿ ಮಾತನಾಡಿದರು ಶಾಲೆಯಿಂದ ದೂರ ಉಳಿದ ಮಕ್ಕಳನ್ನು ಗುರುತಿಸಿ ಮರಳಿ ಶಾಲೆಗೆ ಬರುವಂತೆ ನೋಡಿಕೊಳ್ಳಲು ಮುಂದಾಗಬೇಕು ಎಂದರು. ಪ್ರಧಾನ ಗುರು ಸಿ.ಎ. ಯಲಿಗಾರ, ಎಂ.ಎಂ. ಮನಶಿ, ಎಸ್.ಎ. ಜಿಗಳೂರ, ಐ.ಪಿ. ಹಾಲಿನವರ ಮುಂತಾದವರು ಉಪಸ್ಥಿತರಿದ್ದರು.



 ಶಿಕ್ಷಣವೇ ರಾಷ್ಟ್ರದ ಮಹಾನ್ ಶಕ್ತಿ: ಚಲವಾದಿ

ಗಜೇಂದ್ರಗಡ:  ಶಿಕ್ಷಣವೇ ರಾಷ್ಟ್ರದ ಮಹಾನ್ ಶಕ್ತಿಯಾಗಿದೆ. ಮಕ್ಕಳ ಪ್ರಗತಿಗಾಗಿ ಶಿಕ್ಷಕ ಸಮೂಹ ಹೆಚ್ಚಿನ ಮುತುವರ್ಜಿವಹಿಸಬೇಕು ಎಂದು ಶಾಲಾ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಶಿವಪ್ಪ ಚಲವಾದಿ ಹೇಳಿದರು. ಸ್ಥಳೀಯ ಸರ್ಕಾರಿ ಶಾಲೆ ನಂ. 3ರಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ವಿದ್ಯಾರ್ಥಿಗಳಿಗೆ ಉಚಿತ ಶಾಲಾ ಬ್ಯಾಗ್ ಮತ್ತು ಇನ್ಸ್ಪಾಯರ್ ಅವಾರ್ಡ್ ವಿತರಣಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.  ಸಮಿತಿ ಸದಸ್ಯ ಎ.ಎಚ್. ಕಟ್ಟಿಮನಿ ಮಾತನಾಡಿದರು. ಇನ್ಸ್ಪಾಯರ್ ಅವಾರ್ಡ್ನ್ನು ವಿದ್ಯಾರ್ಥಿ ಮೆಹಬೂಬಿ ಕಳಕಾಪುರಗೆ ನೀಡಲಾಯಿತು. ಐ.ಕೆ. ಹಂಸನೂರ, ಜಿ.ಬಿ. ಪತ್ತಾರ, ಐ.ಎಸ್. ಜಾವಾಳ, ಎಲ್.ಟಿ. ರತ್ನಾಕರ, ಎಲ್.ಡಿ. ಶಿನ್ನೂರ, ಆರ್.ಕೆ. ಹುನಗುಂದ, ವೈ.ಎಚ್. ಪೂಜಾರ ಮುಂತಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.